ಸ್ಮಾರ್ಟ್ಫೋನ್ ಕ್ಯಾಮೆರಾ ಗುಣಮಟ್ಟವನ್ನು ಪರೀಕ್ಷಿಸುವ ಜಾಗತಿಕ ಸಂಸ್ಥೆ ಡಿಎಕ್ಸ್ಒಮಾರ್ಕ್ (DXOMARK) ಬಿಡುಗಡೆ ಮಾಡಿರುವ ರ್ಯಾಂಕಿಂಗ್ನಲ್ಲಿ ಮೋಟೊರೊಲಾ ಸಿಗ್ನೇಚರ್ 27 (Motorola Signature 27) ಗಮನಾರ್ಹ ಸಾಧನೆ ಮಾಡಿದೆ. ಜಾಗತಿಕ ಸ್ಮಾರ್ಟ್ಫೋನ್ ಕ್ಯಾಮೆರಾ ವಿಭಾಗದಲ್ಲಿ 173 ಅಂಕಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ.
ಈ ಫೋನ್ನಲ್ಲಿ 50 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ, 50 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಕ್ಯಾಮೆರಾ ಹಾಗೂ 200 ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಕ್ಯಾಮೆರಾ ನೀಡಲಾಗಿದೆ. 3x ಆಪ್ಟಿಕಲ್ ಜೂಮ್ ಸೌಲಭ್ಯವೂ ಇದರಲ್ಲಿದೆ.
ಫೋಟೊ ಮತ್ತು ವಿಡಿಯೊ ಎರಡೂ ವಿಭಾಗಗಳಲ್ಲಿ ತಲಾ 173 ಅಂಕಗಳನ್ನು ಗಳಿಸಿರುವುದು ವಿಶೇಷ. ಭಾವಚಿತ್ರಗಳ ಗುಣಮಟ್ಟ, ನೈಸರ್ಗಿಕ ಚರ್ಮದ ಬಣ್ಣ, ಆಟೋಫೋಕಸ್ ಮತ್ತು ವಿಡಿಯೊ ಸ್ಥಿರೀಕರಣದಲ್ಲಿ ಉತ್ತಮ ಪ್ರದರ್ಶನ ನೀಡಿದೆ.
ಆದರೆ ಕಡಿಮೆ ಬೆಳಕಿನಲ್ಲಿ ಚಿತ್ರಗಳಲ್ಲಿನ ಶಬ್ದ (Noise) ಮತ್ತು ದೂರದ ಜೂಮ್ ಚಿತ್ರಗಳ ವಿವರಗಳ ಗುಣಮಟ್ಟದಲ್ಲಿ ಕೆಲವು ಮಿತಿಗಳಿವೆ ಎಂದು ಡಿಎಕ್ಸ್ಒಮಾರ್ಕ್ ವರದಿ ತಿಳಿಸಿದೆ.



