ಮಂಗಳೂರು: ದೀಪಾವಳಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವ ಉದ್ದೇಶದಿಂದ ಮಂಗಳೂರಿನ ಪ್ರಸಿದ್ಧ ಮಾಯಾ ಟ್ರೇಡರ್ಸ್ ವತಿಯಿಂದ ಆಯೋಜಿಸಿರುವ ‘ಗ್ರ್ಯಾಂಡ್ ದೀಪಾವಳಿ ಬಂಪರ್ ಕೊಡುಗೆ’ ಯೋಜನೆಗೆ ಚಾಲನೆ ನೀಡಲಾಯಿತು.
ಹಬ್ಬದ ಖರೀದಿಯೊಂದಿಗೆ ಗ್ರಾಹಕರಿಗೆ ಆಕರ್ಷಕ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸುವ ಈ ವಿಶೇಷ ಕೊಡುಗೆ ಯೋಜನೆಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ನಿರೀಕ್ಷೆಯಿದೆ.
ಎಂ.ಜೆ. ರವಿಯವರ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ವೇದವ್ಯಾಸ ಕಾಮತ್, ಮಾಯಾ ಟ್ರೇಡರ್ಸ್ನ ಅನಂತ ಕಾಮತ್, ಲಕ್ಷ್ಮಣ ಕಾಮತ್ ಸೇರಿದಂತೆ ಗಣ್ಯರು ಭಾಗವಹಿಸಿದ್ದರು.
ದೀಪಾವಳಿ ಹಬ್ಬದ ಪ್ರಯುಕ್ತ ಪ್ರತಿ ರೂ.500 ಮೌಲ್ಯದ ಖರೀದಿಗೆ ಗ್ರಾಹಕರಿಗೆ ಸ್ಕ್ರಾಚ್ ಕಾರ್ಡ್ ನೀಡುವ ಮೂಲಕ ಬಂಪರ್ ಬಹುಮಾನ ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ. ವಿವಿಧ ಆಕರ್ಷಕ ಬಹುಮಾನಗಳನ್ನು ಯೋಜನೆಯಲ್ಲಿ ಘೋಷಿಸಲಾಗಿದೆ.
ಮಾಯಾ ಟ್ರೇಡರ್ಸ್ನ ಸಿಬ್ಬಂದಿ, ಗ್ರಾಹಕರು ಹಾಗೂ ಹಿತೈಷಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



