Author: navabharatha

ಮಂಗಳೂರು: ಭಾರತದ ಪಶ್ಚಿಮ ಕರಾವಳಿಯ ಕೊಂಕಣ ಪ್ರದೇಶವು ಸಾಂಸ್ಕೃತಿಕ, ಜಾನಪದ ಹಾಗೂ ಭಾಷಿಕ ವೈವಿಧ್ಯತೆಯ ನೆಲೆಯಾಗಿದೆ. ಈ ಪ್ರದೇಶದ ಕೊಂಕಣಿ ಭಾಷಿಕ ಸಮುದಾಯಗಳ ಆನುವಂಶಿಕ ಹಿನ್ನೆಲೆಯ ಕುರಿತು ಹೈದರಾಬಾದ್‌ನ ಸಿಎಸ್‌ಐಆರ್‌–ಸೆಂಟರ್ ಫಾರ್ ಸೆಲ್ಯುಲರ್ ಅಂಡ್ ಮಾಲಿಕ್ಯುಲರ್ ಬಯಾಲಜಿ (CCMB) ಮತ್ತು ಮಂಗಳೂರು ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿದ ಅಧ್ಯಯನವು ಮಹತ್ವದ ಮಾಹಿತಿಯನ್ನು ಬಹಿರಂಗಪಡಿಸಿದೆ. ಈ ಸಂಶೋಧನೆ Heredity ಜರ್ನಲ್‌ನಲ್ಲಿ ಪ್ರಕಟವಾಗಿದೆ. ಡಾ. ಕೆ. ತಂಗರಾಜ್ ಮತ್ತು ಪ್ರೊ. ಎಂ. ಎಸ್. ಮುಶ್ತಾಕ್ ಅವರ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ 295 ಕೊಂಕಣಿ ಭಾಷಿಕರ ಮೈಟೊಕಾಂಡ್ರಿಯಲ್ ಡಿಎನ್‌ಎಯನ್ನು ವಿಶ್ಲೇಷಿಸಲಾಗಿದೆ. ಮಾತೃವಂಶದ ಮೂಲಕ ಸಾಗಿಬರುವ ಆನುವಂಶಿಕ ಮಾಹಿತಿಯನ್ನು ಆಧರಿಸಿ ನಡೆಸಿದ ಈ ಸಂಶೋಧನೆಯು ಕೊಂಕಣಿ ಸಮುದಾಯಗಳ ಆನುವಂಶಿಕತೆಯಲ್ಲಿನ ವೈವಿಧ್ಯತೆಯನ್ನು ಗುರುತಿಸಿದೆ. ಅಧ್ಯಯನದ ಪ್ರಕಾರ, ಕೊಂಕಣಿ ಸಮುದಾಯಗಳ ಮಾತೃವಂಶದ ಆನುವಂಶಿಕತೆಯಲ್ಲಿ ದಕ್ಷಿಣ ಏಷ್ಯಾದ ಮೂಲದ ವಂಶಾವಳಿಗಳು ಪ್ರಮುಖವಾಗಿವೆ. ಆದರೆ, ಸಾರಸ್ವತ ಗುಂಪುಗಳಲ್ಲಿ ಸಾರಸ್ವತೇತರ ಗುಂಪುಗಳಿಗೆ ಹೋಲಿಸಿದರೆ ಪಶ್ಚಿಮ ಯುರೇಷಿಯನ್ ಮತ್ತು ಸ್ಟೆಪ್ಪಿ ಸಂಬಂಧಿತ ವಂಶಾವಳಿಗಳ ಸಾಮೀಪ್ಯ ಸ್ವಲ್ಪ ಹೆಚ್ಚಾಗಿದೆ.…

Read More

ಮಂಗಳೂರು: ಜವಳಿ ರಫ್ತು  ಇಂದಿನ ಅನಿವಾರ್ಯತೆ ಆಗಿದ್ದು, ಜವಳಿ ಕ್ಷೇತ್ರವು ಆ ದಿಸೆಯಲ್ಲಿ ಸಾಕಷ್ಟು ಅವಕಾಶಗಳನ್ನು ಹೊಂದಿದೆ. ಕೃಷಿಯನ್ನು ಬಿಟ್ಟರೆ ಹೆಚ್ಚು ಜನರಿಗೆ ಉದ್ಯೋಗಾವಕಾಶ ಒದಗಿಸಿದ ಕ್ಷೇತ್ರ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲದಾಸ ನಾಯಕ್ ಹೇಳಿದರು. ಅವರು ಗುರುವಾರ ಕರಾವಳಿ ಅಭಿವೃದ್ಧಿ ಮಂಡಳಿಯಲ್ಲಿ ನಡೆದ ಜವಳಿ ರಫ್ತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕರಾವಳಿ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಪ್ರದೀಪ್ ಡಿಸೋಜಾ ಮಾತನಾಡಿ, ಆರ್ಥಿಕ ಮುಗ್ಗಟ್ಟಿನಿಂದ ದೇಶವನ್ನು ಕಾಪಾಡಲು ರಫ್ತು ಅನಿವಾರ್ಯ ಮತ್ತು ದೇಶೀಯ ಉತ್ಪನ್ನಗಳ ವ್ಯಾಪಕ ಬಳಕೆಗೆ ಎಲ್ಲರೂ ತೊಡಗಬೇಕೆಂದು ಹೇಳಿದರು. ಕೈಮಗ್ಗ ಮತ್ತು ಜವಳಿ ಇಲಾಖೆ ಸಹಾಯಕ ನಿರ್ದೇಶಕ ಅಶೋಕ ಸುರಪೂರ ಮಾತನಾಡಿ, ವ್ಯಾಪಕ ಪೆಟ್ರೋಲಿಯಮ್ ಉತ್ಪನ್ನಗಳ ಆಮದಿನಿಂದ ಆಗುತ್ತಿರುವ ವ್ಯತ್ಯಾಸವನ್ನು ಜವಳಿ ರಫ್ತು ಸರಿದೂಗಿಸುವ ನಿಟ್ಟಿನಲ್ಲಿ, ಜವಳಿ ಮಂತ್ರಾಲಯ, ಭಾರತ ಸರ್ಕಾರವು ಜವಳಿ ರಫ್ತಿಗೆ ಉತ್ತೇಜನ ನೀಡಲಾಗುತ್ತಿದೆ. ಆದ್ದರಿಂದ ಜವಳಿ ರಫ್ತಿಗೆ ಉದ್ಯಮಿಗಳು ಮುಂದೆ ಬರಬೇಕು ಎಂದು ತಿಳಿಸಿದರು. ಅಂಚೆ ಇಲಾಖೆಯ ಗೋಪಿನಾಥ,…

Read More

ಪೆರ್ಲ: ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಅರವಣ ಪ್ರಸಾದದ ಕೊರತೆಯಿಂದ ಉಂಟಾಗಿದ್ದ ವಿವಾದಕ್ಕೆ ಇದೀಗ ತೆರೆ ಬೀಳುವ ಲಕ್ಷಣಗಳು ಕಂಡುಬಂದಿವೆ. ಪ್ರಸಾದದ ಅಭಾವದಿಂದ ಭಕ್ತರು ಪರದಾಡುವಂತಾಗಿದ್ದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಮತ್ತು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ನಡುವೆ ಉಂಟಾಗಿದ್ದ ಭಿನ್ನಾಭಿಪ್ರಾಯವನ್ನು ಬಗೆಹರಿಸಲು ಮುಖ್ಯಮಂತ್ರಿ ಮಧ್ಯಪ್ರವೇಶಿಸಿದ್ದಾರೆ. ಮುಂಬರುವ ಮಂಡಲ–ಮಕರಜ್ಯೋತಿ ಯಾತ್ರೆಯನ್ನು ಸುಗಮವಾಗಿ ನಡೆಸಲು ಸರ್ಕಾರ ಮತ್ತು ದೇವಸ್ವಂ ಮಂಡಳಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುವುದಾಗಿ ತಿಳಿಸಿವೆ. ಅರವಣ ಪ್ರಸಾದದ ಕೊರತೆಗೆ ಕಾರಣವೇನು? ಶಬರಿಮಲೆಯಲ್ಲಿ ಮುಂಬರುವ ಮಂಡಲ ಕಾಲದಲ್ಲಿ ಅರವಣ ಪ್ರಸಾದಕ್ಕೆ ಹೆಚ್ಚಿನ ಬೇಡಿಕೆ ಇರುವ ಹಿನ್ನೆಲೆಯಲ್ಲಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸಲು ಯೋಜನೆ ರೂಪಿಸಲಾಗಿತ್ತು. ದಿನಕ್ಕೆ 2.5 ಲಕ್ಷ ಟಿನ್‌ಗಳಿದ್ದ ಉತ್ಪಾದನಾ ಸಾಮರ್ಥ್ಯವನ್ನು 3.5 ಲಕ್ಷ ಟಿನ್‌ಗಳಿಗೆ ಹೆಚ್ಚಿಸುವ ಉದ್ದೇಶದಿಂದ 45 ದಿನಗಳ ನವೀಕರಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಮಾಸಿಕ ಪೂಜೆಯ ಅವಧಿಯಲ್ಲೇ ಉತ್ಪಾದನಾ ಘಟಕವನ್ನು ಮುಚ್ಚಿ ನವೀಕರಣ ಆರಂಭಿಸಿದ್ದರಿಂದ ನಿರೀಕ್ಷಿತ ಪ್ರಮಾಣದಲ್ಲಿ ಪ್ರಸಾದ ಉತ್ಪಾದನೆ ಸಾಧ್ಯವಾಗಲಿಲ್ಲ. ಸುಮಾರು 6 ಲಕ್ಷ ಟಿನ್‌ಗಳ ಉತ್ಪಾದನೆಯ…

Read More

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ರಸ್ತೆ ಗುಂಡಿಗಳ ಸಮಸ್ಯೆ ದಿನದಿಂದ ದಿನಕ್ಕೆ ತೀವ್ರವಾಗುತ್ತಿದ್ದು, ಜನರು ಸರ್ಕಾರ ಹಾಗೂ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಸ್ತೆಗಳ ದುಸ್ಥಿತಿಯಿಂದ ಬೇಸತ್ತಿರುವ ಕೊಪ್ಪ ತಾಲೂಕಿನ ಬಂಡೀಗಡಿ ಸಮೀಪದ ಗ್ರಾಮಸ್ಥರು ರಸ್ತೆ ಬದಿಯಲ್ಲಿ ವ್ಯಂಗ್ಯಭರಿತ ಬ್ಯಾನರ್ ಅಳವಡಿಸುವ ಮೂಲಕ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಓಟು ಬೇಡಿದವರ ಸ್ಮಾರಕ ಹೊಂಡಗಳಿವೆ, ನಿಧಾನವಾಗಿ ಚಲಿಸಿ…’ ಎಂಬ ಸಂದೇಶದ ಮೂಲಕ ರಸ್ತೆ ಗುಂಡಿಗಳೇ ಜನಪ್ರತಿನಿಧಿಗಳ ಆಡಳಿತಕ್ಕೆ ಸಾಕ್ಷಿಯಾಗಿವೆ ಎಂದು ಮಲೆನಾಡಿಗರು ವ್ಯಂಗ್ಯವಾಡಿದ್ದಾರೆ. ಮಳೆಗಾಲ ಮುಗಿದರೂ ದುರಸ್ತಿಯಾಗದ ರಸ್ತೆಗಳು! ಮಳೆಗಾಲ ಮುಗಿಯಲಿ, ಆ ಬಳಿಕ ರಸ್ತೆ ದುರಸ್ತಿ ಮಾಡಲಾಗುವುದು ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಸರ್ಕಾರದಿಂದ ಸೂಕ್ತ ಸ್ಪಂದನೆ ಸಿಕ್ಕಿಲ್ಲ ಎಂಬ ಅಸಮಾಧಾನ ವ್ಯಕ್ತವಾಗಿದೆ. ಮಲೆನಾಡಿನ ಹಲವು ತಾಲೂಕುಗಳಲ್ಲಿ ರಸ್ತೆಗಳು ಹೊಂಡಮಯವಾಗಿದ್ದು, ವಾಹನ ಸವಾರರು ಹಾಗೂ ಸ್ಥಳೀಯರು ಪ್ರತಿನಿತ್ಯ ತೊಂದರೆ ಅನುಭವಿಸುವಂತಾಗಿದೆ. ರಸ್ತೆಗಳಲ್ಲಿನ ಆಳವಾದ ಗುಂಡಿಗಳಿಂದ ಸಂಚಾರ ದುಸ್ತರವಾಗಿದ್ದು, ಅಪಘಾತಗಳ ಭೀತಿಯೂ ಎದುರಾಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕಾದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು…

Read More

ಕ್ರೈಸ್ಟ್‌ಚರ್ಚ್‌;   ನ್ಯೂಜಿಲೆಂಡ್‌ನ ವಿರುದ್ಧದ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಅರ್ಧಶತಕ ಮತ್ತು ನಮನ್ ಧೀರ್ ಅವರ ಅಮೋಘ ಅಂತಿಮ ಹಂತದ ಬ್ಯಾಟಿಂಗ್ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. ಭಾರತವು ಇನ್ನು ಎರಡು ಎಸೆತಗಳು ಬಾಕಿ ಇರುವಂತೆಯೇ 226 ರನ್‌ಗಳ ಗುರಿಯನ್ನು ತಲುಪಿತು. ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡವು ಗ್ಲೆನ್ ಫಿಲಿಪ್ಸ್ ಅವರ ಅಜೇಯ 82 ರನ್‌ಗಳ ನೆರವಿನಿಂದ 4 ವಿಕೆಟ್‌ಗಳಿಗೆ 225 ರನ್ ಗಳಿಸಿತು. ಫಿಲಿಪ್ಸ್ ಕೇವಲ 40 ಎಸೆತಗಳಲ್ಲಿ 82 ರನ್ ಸಿಡಿಸಿದರು.ಸುಮಾರು ನಾಲ್ಕು ವರ್ಷಗಳ ಬಳಿಕ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡಿದ ಭುವನೇಶ್ವರ್ ಕುಮಾರ್ 49 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ. ಅರ್ಷದೀಪ್ ಸಿಂಗ್, ಮಯಾಂಕ್ ಯಾದವ್ ಮತ್ತು ಅಕ್ಷರ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು. ನಾಲ್ಕನೇ ವಿಕೆಟ್‌ಗೆ ಫಿಲಿಪ್ಸ್ ಮತ್ತು ಬೆವನ್ ಜೇಕಬ್ಸ್ 73 ರನ್‌ಗಳ ಜೊತೆಯಾಟವಾಡಿ ನ್ಯೂಜಿಲೆಂಡ್‌ನ ಬೃಹತ್ ಮೊತ್ತಕ್ಕೆ ನೆರವಾದರು. ಸ್ಯಾಮ್ಸನ್–ಅಭಿಷೇಕ್ ಸ್ಫೋಟಕ ಆರಂಭ ಇತ್ತೀಚಿನ ತವರಿನ…

Read More

ತಿರುವನಂತಪುರಂ, ಅಕ್ಟೋಬರ್ 22, 2026: ಕೇರಳದಲ್ಲಿ ಈಶಾನ್ಯ ಮುಂಗಾರು ತೀವ್ರಗೊಂಡಿದ್ದು, ರಾಜ್ಯದ ಹಲವು ಭಾಗಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ವಿಶೇಷವಾಗಿ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಗುಡುಗು, ಮಿಂಚು ಮತ್ತು ಬಿರುಗಾಳಿಯೂ ಕಾಣಿಸಿಕೊಂಡಿದೆ. ಇದರಿಂದ ಹಲವು ಕಡೆಗಳಲ್ಲಿ ನೀರು ನಿಲ್ಲುವಿಕೆ ಹಾಗೂ ಸಣ್ಣ ಪ್ರಮಾಣದ ಭೂಕುಸಿತಗಳು ಸಂಭವಿಸಿವೆ. ಅಕ್ಟೋಬರ್ 21ರ ಬುಧವಾರ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ತಿರುವನಂತಪುರಂ–ನಾಗರ್‌ಕೋಯಿಲ್ ರೈಲು ಮಾರ್ಗದಲ್ಲಿ ಭೂಕುಸಿತ ಸಂಭವಿಸಿದೆ. ಗುರುವಾರ ಮುಂಜಾನೆ ಸುಮಾರು 2.19ಕ್ಕೆ ಪರಸ್ಸಾಲ ರೈಲು ನಿಲ್ದಾಣದ ಸಮೀಪ ಬಿಲಾಸ್ಪುರ–ತಿರುನೆಲ್ವೇಲಿ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲಿನ ಎಂಜಿನ್ ಹಳಿ ತಪ್ಪಿದೆ. ಘಟನೆಯಲ್ಲಿ ಯಾವುದೇ ಗಾಯಗಳಾಗಿರುವ ವರದಿಯಿಲ್ಲ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ, ಬಂಗಾಳ ಕೊಲ್ಲಿಯಲ್ಲಿ ರೂಪುಗೊಂಡಿರುವ ವಾಯುಭಾರ ಕುಸಿತದ ಪರಿಣಾಮವಾಗಿ ಕೇರಳದಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಭಾರಿ ಮಳೆ ಮತ್ತು ಭೂಕುಸಿತದ ಅಪಾಯ ಇರುವುದರಿಂದ ಜನರು ಮುನ್ನೆಚ್ಚರಿಕೆ ವಹಿಸಬೇಕು. ವಿಶೇಷವಾಗಿ ಪಶ್ಚಿಮ ಘಟ್ಟ ಪ್ರದೇಶಗಳು, ಗುಡ್ಡಗಾಡು ಪ್ರದೇಶಗಳು ಮತ್ತು…

Read More

ಕುಂಬಳೆ: ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಕುಂಬಳೆಯ ಮೀನು ಮಾರುಕಟ್ಟೆ ಕಟ್ಟಡದಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಇದ್ದು ಸರಿಪಡಿಸುವಂತೆ ಜನಪ್ರತಿನಿಧಿಗಳು ಒತ್ತಾಯಿಸಿದ್ದಾರೆ. ಮೀನು ಮಾರಾಟಗಾರರು ಹಾಗೂ ಮಾರುಕಟ್ಟೆಗೆ ಆಗಮಿಸುವ ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳು ಸಮರ್ಪಕವಾಗಿ ಲಭ್ಯವಾಗದಿರುವುದು ಹಲವು ಸಮಸ್ಯೆಗಳಿಗೆ ಕಾರಣವಾಗಿದೆ. ಇಷ್ಟು ದೊಡ್ಡ ಮೊತ್ತದ ವೆಚ್ಚದಲ್ಲಿ ನಿರ್ಮಿಸಲಾದ ಮಾರುಕಟ್ಟೆಯಲ್ಲಿ ಮೂಲಸೌಕರ್ಯಗಳಿಲ್ಲದಿರುವುದು ಸಮಸ್ಯೆ ಕಾರಣವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಮಾರುಕಟ್ಟೆಯಲ್ಲಿನ ಸಮಸ್ಯೆಗಳನ್ನು ಪರಿಶೀಲಿಸಿ, ಅಗತ್ಯ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Read More

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ ಸಾಂಸ್ಕೃತಿಕ ವೈಭವದೊಂದಿಗೆ ಗಮನ ಸೆಳೆಯಿತು. ನಾಡಿನ ಪರಂಪರೆ, ಸಂಸ್ಕೃತಿ ಮತ್ತು ಐತಿಹಾಸಿಕ ವೈಭವವನ್ನು ಸಾರುವ ಈ ಮೆರವಣಿಗೆಯಲ್ಲಿ ಚಿನ್ನದ ಅಂಬಾರಿ ಪ್ರಮುಖ ಆಕರ್ಷಣೆಯಾಯಿತು. ಪ್ರಶಾಂತ ಆನೆಯ ಮೇಲೆ ಚಿನ್ನದ ಅಂಬಾರಿಯನ್ನು ಹೊತ್ತು ಸಾಗಿದ ಜಂಬೂಸವಾರಿ ಮೆರವಣಿಗೆಯನ್ನು ಕಣ್ತುಂಬಿಕೊಳ್ಳಲು ಸಾವಿರಾರು ಜನರು ಉತ್ಸಾಹದಿಂದ ಸೇರಿದ್ದರು. ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಲಾತಂಡಗಳು, ವಿವಿಧ ಸ್ತಬ್ಧಚಿತ್ರಗಳು ಹಾಗೂ ವಾದ್ಯಮೇಳಗಳು ದಸರಾ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿದವು. ಮೈಸೂರು ದಸರಾ ಕೇವಲ ನಾಡಹಬ್ಬವಲ್ಲ, ಕರ್ನಾಟಕದ ಶ್ರೀಮಂತ ಪರಂಪರೆ ಮತ್ತು ಸಾಂಸ್ಕೃತಿಕ ವೈವಿಧ್ಯವನ್ನು ಜಗತ್ತಿಗೆ ಪರಿಚಯಿಸುವ ಮಹೋತ್ಸವವಾಗಿದೆ. ಅದ್ಧೂರಿ ಜಂಬೂಸವಾರಿ ಮೆರವಣಿಗೆ ನಾಡಿನ ಜನರಲ್ಲಿ ಸಂಭ್ರಮ ಮೂಡಿಸಿತು.

Read More

ಉಡುಪಿ: ಕರ್ನಾಟಕ ರಾಜ್ಯ ಹಿಂದಿ ಭಾಷಾ ಬೋಧಕರ ಸಂಘ (ರಿ.), ಬೆಂಗಳೂರು ಹಾಗೂ ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಸಹಯೋಗದಲ್ಲಿ ರಾಜ್ಯಮಟ್ಟದ ಹಿಂದಿ ಶಿಕ್ಷಕರ ಸಮ್ಮೇಳನ ಮತ್ತು ಕಾರ್ಯಾಗಾರ ಅ.25ರಂದು ಉಡುಪಿಯ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಲಿದೆ. ಪರ್ಯಾಯ ಶ್ರೀ ಶಿರೂರು ಮಠ ಹಾಗೂ ಶ್ರೀಕೃಷ್ಣ ಮಠದ ಆಶ್ರಯದಲ್ಲಿ ನಡೆಯಲಿರುವ ಕಾರ್ಯಕ್ರಮ ಬೆಳಿಗ್ಗೆ 9.30ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಉಡುಪಿ ಜಿಲ್ಲಾ ಹಿಂದಿ ಭಾಷಾ ಬೋಧಕರ ಸಂಘದ ಅಧ್ಯಕ್ಷ ಎಚ್.ಎನ್. ವೆಂಕಟೇಶ್ ತಿಳಿಸಿದರು. ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳ ಹಿಂದಿ ಶಿಕ್ಷಕರು ಸಮ್ಮೇಳನದಲ್ಲಿ ಭಾಗವಹಿಸಲಿದ್ದು, ಭಾಷಾ ಬೋಧನೆ, ತೃತೀಯ ಭಾಷೆಯ ಮಹತ್ವ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯಲ್ಲಿ ಭಾಷೆಗಳ ಪಾತ್ರದ ಕುರಿತು ಚರ್ಚೆ ನಡೆಯಲಿದೆ ಎಂದರು. ಬೆಳಿಗ್ಗೆ 8.30ರಿಂದ ನೋಂದಣಿ ಮತ್ತು ಉಪಾಹಾರ, 9 ಗಂಟೆಯಿಂದ ವಿದ್ವಾನ್ ನಟರಾಜ್ ಎಚ್.ಎನ್. ಮತ್ತು ಬಳಗದವರಿಂದ ಹಿಂದಿ ಗೀತಾಗಾಯನ ನಡೆಯಲಿದೆ. ಬೆಳಿಗ್ಗೆ 9.30ಕ್ಕೆ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕ…

Read More

ಮಂಗಳೂರು: ದಸರಾ ಹಬ್ಬದ ಪ್ರಯುಕ್ತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ (1 ರಿಂದ 10ನೇ ತರಗತಿ ವರೆಗೆ ) ದಸರಾ ರಜೆ ವಿಸ್ತರಿಸಲಾಗಿದೆ, ಅಕ್ಟೋಬರ್ 22 ರಂದು ರಜೆ ಘೋಷಿಸಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅದೇಶಿಸಿದ್ದಾರೆ.

Read More