ಲಿಸ್ಬನ್: ವಿಶ್ವ ಫುಟ್ಬಾಲ್ನಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಪೋರ್ಚುಗಲ್ನ ದಿಗ್ಗಜ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ 23 ವರ್ಷಗಳ ಫುಟ್ಬಾಲ್ ವೃತ್ತಿಬದುಕಿಗೆ ವಿದಾಯದ ಘಳಿಗೆ ಎದುರಾಗಿದೆ. ಮೈದಾನದಲ್ಲಿ ತನ್ನ ಅದ್ಭುತ ಆಟ, ಗೋಲುಗಳ ಸುರಿಮಳೆ ಹಾಗೂ ದಾಖಲೆಗಳ ಮೂಲಕ ಕೋಟ್ಯಂತರ ಅಭಿಮಾನಿಗಳ ಮನಗೆದ್ದ ರೊನಾಲ್ಡೊ ಅವರ ವಿದಾಯದ ಸುದ್ದಿ ಫುಟ್ಬಾಲ್ ಜಗತ್ತಿನಲ್ಲಿ ಭಾವನಾತ್ಮಕ ಚರ್ಚೆಗೆ ಕಾರಣವಾಗಿದೆ.
2003ರಲ್ಲಿ ತಮ್ಮ 18ನೇ ವಯಸ್ಸಿನಲ್ಲಿ ವೃತ್ತಿಪರ ಫುಟ್ಬಾಲ್ಗೆ ಪದಾರ್ಪಣೆ ಮಾಡಿದ ರೊನಾಲ್ಡೊ, 41ನೇ ವಯಸ್ಸಿನಲ್ಲಿಯೂ ತಮ್ಮ ಆಟದ ಮೂಲಕ ಗಮನ ಸೆಳೆದಿದ್ದಾರೆ. ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್, ಜುವೆಂಟಸ್ ಸೇರಿದಂತೆ ಹಲವು ಪ್ರಮುಖ ಕ್ಲಬ್ಗಳ ಪರ ಆಡಿರುವ ಅವರು ವಿಶ್ವ ಫುಟ್ಬಾಲ್ನಲ್ಲಿ ಅಪ್ರತಿಮ ಸಾಧನೆ ಮಾಡಿದ್ದಾರೆ.
ಪೋರ್ಚುಗಲ್ ತಂಡದ ನಾಯಕನಾಗಿ ಹಲವು ಮಹತ್ವದ ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದಾರೆ. ಐದು ಬಾರಿ ಪ್ರತಿಷ್ಠಿತ ಬ್ಯಾಲನ್ ಡಿ ಓರ್ ಪ್ರಶಸ್ತಿ ಗೆದ್ದಿರುವ ಅವರು, ತಮ್ಮ ವೃತ್ತಿಜೀವನದಲ್ಲಿ ಅಸಂಖ್ಯಾತ ದಾಖಲೆಗಳನ್ನು ನಿರ್ಮಿಸಿದ್ದಾರೆ. ಏಳು ನಂಬರ್ ಜೆರ್ಸಿ ಅವರ ಗುರುತಾಗಿ ವಿಶ್ವದಾದ್ಯಂತ ಪ್ರಸಿದ್ಧವಾಗಿದೆ.
ತಮ್ಮ ವೃತ್ತಿಜೀವನದಲ್ಲಿ ಎದುರಾದ ಸವಾಲುಗಳು, ಗೆಲುವುಗಳು ಹಾಗೂ ಅಭಿಮಾನಿಗಳ ಪ್ರೀತಿಯನ್ನು ಸ್ಮರಿಸಿರುವ ರೊನಾಲ್ಡೊ, ತಮ್ಮ ಸಾಧನೆಗೆ ಬೆಂಬಲ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
146 ಗೋಲು: ಸಾವರ್ಕಾಲಿಕ ದಾಖಲೆ
ಅಂತಾರಾಷ್ಟ್ರೀಯ ಫುಟ್ಬಾಲ್ನಲ್ಲಿ ರೊನಾಲ್ಡೊ ಅವರ ಗೋಲುಗಳ ಸಾಧನೆ ವಿಶೇಷವಾಗಿದೆ. ಪೋರ್ಚುಗಲ್ ತಂಡದ ಪರ 234 ಪಂದ್ಯಗಳಲ್ಲಿ 146 ಗೋಲುಗಳನ್ನು ಗಳಿಸಿರುವ ಅವರು, ಅಂತಾರಾಷ್ಟ್ರೀಯ ಫುಟ್ಬಾಲ್ನ ಪ್ರಮುಖ ದಾಖಲೆಗಳಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ.
ಕೇವಲ ಟಿಂಗಳಲ್ಲೇ 3 ಪ್ರಮುಖ ಪ್ರಶಸ್ತಿ
ತಮ್ಮ ವೃತ್ತಿಜೀವನದಲ್ಲಿ ಹಲವು ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ರೊನಾಲ್ಡೊ, ವೈಯಕ್ತಿಕ ಸಾಧನೆಯ ಜತೆಗೆ ತಂಡದ ಯಶಸ್ಸಿಗೂ ಮಹತ್ವದ ಕೊಡುಗೆ ನೀಡಿದ್ದಾರೆ. ಅವರ ಪರಿಶ್ರಮ, ಶಿಸ್ತು ಮತ್ತು ಛಲ ಮುಂದಿನ ತಲೆಮಾರಿನ ಫುಟ್ಬಾಲ್ ಆಟಗಾರರಿಗೆ ಪ್ರೇರಣೆಯಾಗಿದೆ.



