ಮಂಗಳೂರು
ಅನಾಥಾಶ್ರಮದಲ್ಲಿದ್ದ ಗಣೇಶ್(16) ಎಂಬುವವರು ಅಕ್ಟೋಬರ್ 10 ರಂದು ಕಾಣೆಯಾಗಿದ್ದು, ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈತನು ಬೆಳಗಿನ ಜಾವ 3-30 ಗಂಟೆಯ ವೇಳೆಗೆ ಆಶ್ರಮದ ಬಿಲ್ಡಿಂಗ್ ಗೇಟನ್ನು ಕೀ ಸಹಾಯದಿಂದ ತೆಗೆದು ಹೊರ ಹೋಗಿರುವುದು ಕಂಡು ಬಂದಿರುತ್ತದೆ.
ಕಾಣೆಯಾದವರ ಚಹರೆಃ- ಎತ್ತರ 5 ಅಡಿ 3 ಇಂಚು, ಎಣ್ಣೆ ಕಪ್ಪು ಮೈ ಬಣ್ಣ, ಸಾಧಾರಣ ಶರೀರ ಹೊಂದಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಕಾಣೆಯಾದ ದಿನ ಕಪ್ಪು ಬಣ್ಣದ ಪ್ಯಾಂಟ್ ಕಪ್ಪು ಬಣ್ಣದ ಶರ್ಟ್ ಧರಿಸಿದ್ದರು.
ಕಾಣೆಯಾದವರ ಬಗ್ಗೆ ಮಾಹಿತಿ ಪತ್ತೆಯಾದಲ್ಲಿ ಬಜಪೆ ಪೋಲಿಸ್ ಠಾಣೆ ಸಂಪರ್ಕಿಸುವಂತೆ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



