Close Menu
    Latest Posts

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಮಳೆಗಾಗಿ ಕಪ್ಪೆಗಳ ಮದುವೆ: ಮಳೆರಾಯನ ಒಲಿಸಲು ರೈತರ ವಿಶಿಷ್ಟ ಪ್ರಯತ್ನ! ಕಡೂರು: ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿದ ಬಯಲುಸೀಮೆ ಭಾಗದ ರೈತರು
    ಸುದ್ದಿ

    ಮಳೆಗಾಗಿ ಕಪ್ಪೆಗಳ ಮದುವೆ: ಮಳೆರಾಯನ ಒಲಿಸಲು ರೈತರ ವಿಶಿಷ್ಟ ಪ್ರಯತ್ನ! ಕಡೂರು: ಮಳೆಗಾಗಿ ಕಪ್ಪೆಗಳ ಮದುವೆ ಮಾಡಿಸಿದ ಬಯಲುಸೀಮೆ ಭಾಗದ ರೈತರು

    navabharathaBy navabharathaOctober 14, 2026

     

    ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ನೀಲೇಗೌಡನ ಕೊಪ್ಪಲು ಗ್ರಾಮದಲ್ಲಿ ಮಳೆಗಾಗಿ ರೈತರು ಕಪ್ಪೆಗಳ ಮದುವೆ ಮಾಡಿಸುವ ಮೂಲಕ ಮಳೆರಾಯನನ್ನು ಒಲಿಸಿಕೊಳ್ಳಲು ವಿಶಿಷ್ಟ ಪ್ರಯತ್ನ ನಡೆಸಿದ್ದಾರೆ.

    ಮಳೆ ಕೈಕೊಟ್ಟು ಬರದ ಛಾಯೆ ಆವರಿಸಿರುವ ಹಿನ್ನೆಲೆಯಲ್ಲಿ, ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವ ಆತಂಕ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ತಮ್ಮ ಹಿಂದಿನ ಸಂಪ್ರದಾಯದಂತೆ ಜೋಡಿ ಕಪ್ಪೆಗಳಿಗೆ ಮದುವೆ ಮಾಡಿಸಿ, ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.

    ಗ್ರಾಮದ ದೇವಸ್ಥಾನದಲ್ಲಿ ಕಪ್ಪೆಗಳ ಮದುವೆ ನೆರವೇರಿಸಿದ ಸ್ಥಳೀಯರು, ಬಳಿಕ ಜೋಡಿ ಕಪ್ಪೆಗಳನ್ನು ಮನೆ ಮನೆಗೆ ಕರೆದೊಯ್ದು ಪೂಜೆ ಸಲ್ಲಿಸಿದ್ದಾರೆ. ಪ್ರತಿ ಮನೆಯಲ್ಲೂ ಕಪ್ಪೆಗಳ ಮೇಲೆ ನೀರು ಹಾಕಿ ಮಳೆಗಾಗಿ ಪ್ರಾರ್ಥಿಸುವ ಮೂಲಕ ಮಳೆರಾಯನ ಕೃಪೆಗೆ ಪಾತ್ರರಾಗುವ ಆಶಯ ವ್ಯಕ್ತಪಡಿಸಿದ್ದಾರೆ.

    20 ವರ್ಷಗಳ ಹಿಂದಿನ ನಂಬಿಕೆ!

    ಮಳೆ ಕೈಕೊಟ್ಟು ಬರ ಎದುರಾದಾಗ ಕಪ್ಪೆಗಳ ಮದುವೆ ಮಾಡಿಸುವುದು ಈ ಭಾಗದಲ್ಲಿ ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಪ್ರತೀತಿ ಎನ್ನಲಾಗಿದೆ. ಸುಮಾರು 20 ವರ್ಷಗಳ ಹಿಂದೆ ಇದೇ ರೀತಿ ಬರದ ಪರಿಸ್ಥಿತಿ ಎದುರಾದಾಗ ಗ್ರಾಮಸ್ಥರು ಕಪ್ಪೆಗಳ ಮದುವೆ ಮಾಡಿಸಿದ್ದರು. ಆಗ ಮದುವೆಯಾದ ಮೂರೇ ದಿನಗಳಲ್ಲಿ ಮಳೆ ಸುರಿದಿತ್ತು ಎಂಬುದು ಗ್ರಾಮಸ್ಥರ ನೆನಪು.

    ಈ ಹಿಂದಿನ ಅನುಭವದ ಹಿನ್ನೆಲೆಯಲ್ಲಿ, ಈ ಬಾರಿಯೂ ಕಪ್ಪೆಗಳ ಮದುವೆ ಮಾಡಿಸಿದ ಒಂಬತ್ತು ದಿನಗಳ ಒಳಗೆ ಮಳೆ ಸುರಿಯಲಿದೆ ಎಂಬ ನಂಬಿಕೆಯನ್ನು ಸ್ಥಳೀಯರು ಹೊಂದಿದ್ದಾರೆ.

    ಮನೆಗಳಿಂದ ಅಕ್ಕಿ, ಹಿಟ್ಟು ಸಂಗ್ರಹಿಸಿ ನೈವೇದ್ಯ

    ಗ್ರಾಮದ ಪ್ರತಿ ಮನೆಯಿಂದಲೂ ಅಕ್ಕಿ, ಹಿಟ್ಟು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಅಡುಗೆ ಮಾಡಲಾಗಿದೆ. ಧಾರ್ಮಿಕ ವಿಧಿವಿಧಾನಗಳೊಂದಿಗೆ ಪೂಜೆ ಸಲ್ಲಿಸಿ, ನೈವೇದ್ಯ ಅರ್ಪಿಸಿದ ಗ್ರಾಮಸ್ಥರು ಬಳಿಕ ಸಾಮೂಹಿಕ ಭೋಜನದ ವ್ಯವಸ್ಥೆಯನ್ನೂ ಮಾಡಿದ್ದಾರೆ.

    ಒಟ್ಟಿನಲ್ಲಿ, ಮಳೆಗಾಗಿ ಆಕಾಶದತ್ತ ಮುಖಮಾಡಿರುವ ಕಡೂರು ತಾಲೂಕಿನ ರೈತರು, ತಮ್ಮ ಸಾಂಪ್ರದಾಯಿಕ ಆಚರಣೆಯ ಮೂಲಕ ವರುಣದೇವನ ಕೃಪೆಗಾಗಿ ಮೊರೆಯಿಟ್ಟಿದ್ದಾರೆ. ಇದೀಗ ಕಪ್ಪೆಗಳ ಮದುವೆಯಾದರೂ ಮಳೆರಾಯನನ್ನು ಒಲಿಸಿ ಮಳೆ ಸುರಿಯುವಂತೆ ಮಾಡುತ್ತದೆಯೇ ಎಂಬ ನಿರೀಕ್ಷೆಯಲ್ಲಿ ಗ್ರಾಮಸ್ಥರಿದ್ದಾರೆ.

    Previous Articleಕಾವೂರು ಬಂಟರ ಭವನ ಉದ್ಘಾಟನೆಗೆ ಸಿದ್ಧತೆ: ರೂಪುರೇಷೆ ಕುರಿತು ವಿಶೇಷ ಸಭೆಕಾವೂರು ಬಂಟರ ಭವನ ಉದ್ಘಾಟನೆಗೆ ಸಿದ್ಧತೆ: ರೂಪುರೇಷೆ ಕುರಿತು ವಿಶೇಷ ಸಭೆ
    Next Articleಅನಾಥಾಶ್ರಮದಲ್ಲಿದ್ದ ಬಾಲಕ ನಾಪತ್ತೆ!ಅನಾಥಾಶ್ರಮದಲ್ಲಿದ್ದ ಬಾಲಕ ನಾಪತ್ತೆ!

    Related Posts

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಮಂಗಳೂರಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: 173 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    November 1, 2026

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026
    Latest Posts

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026
    ತಾಜಾ ಸುದ್ದಿಗಳು

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಮಂಗಳೂರಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: 173 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    November 1, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.