Close Menu
    Latest Posts

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಮಂಗಳೂರಿನಲ್ಲಿ ನವೆಂಬರ್ 28, 29ರಂದು ಜನನುಡಿ ಉತ್ಸವ
    ಧರ್ಮ - ಸಂಸ್ಕೃತಿ - ಸಾಹಿತ್ಯ

    ಮಂಗಳೂರಿನಲ್ಲಿ ನವೆಂಬರ್ 28, 29ರಂದು ಜನನುಡಿ ಉತ್ಸವ

    navabharathaBy navabharathaOctober 14, 2026

    ಮಂಗಳೂರು, ಅ. 12: ಕನ್ನಡದ ಖ್ಯಾತ ಲೇಖಕ, ವಿಮರ್ಶಕ ಹಾಗೂ ಹಿರಿಯ ಚಿಂತಕ ರೆಹಮತ್ ತರೀಕೆರೆ ಅವರು ಈ ಬಾರಿಯ ಜನನುಡಿ–2026 ಉತ್ಸವವನ್ನು ಉದ್ಘಾಟಿಸಲಿದ್ದಾರೆ. ನವೆಂಬರ್ 28 ಮತ್ತು 29ರಂದು ಮಂಗಳೂರಿನಲ್ಲಿ ಜನನುಡಿ ಉತ್ಸವ ನಡೆಯಲಿದ್ದು, ನವೆಂಬರ್ 27ರ ಶುಕ್ರವಾರ ಸಂಜೆಯಿಂದಲೇ ಪುಸ್ತಕ ಮೇಳ ಆರಂಭವಾಗಲಿದೆ ಎಂದು ಜನನುಡಿ ಬಳಗ ತಿಳಿಸಿದೆ.

    ಕರ್ನಾಟಕದ ಸಾಂಸ್ಕೃತಿಕ ಪರಂಪರೆ, ಬಹುತ್ವದ ಇತಿಹಾಸ ಹಾಗೂ ಸಾಮಾಜಿಕ ಚಿಂತನೆಗಳ ಕುರಿತು ಆಳವಾದ ಅಧ್ಯಯನ ನಡೆಸಿರುವ ರೆಹಮತ್ ತರೀಕೆರೆ ಅವರು ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ವಿಶಿಷ್ಟ ಗುರುತನ್ನು ಗಳಿಸಿದ್ದಾರೆ. ಅವರ ಸಂಶೋಧನಾ ಬರಹಗಳು, ವಿಮರ್ಶಾತ್ಮಕ ದೃಷ್ಟಿಕೋನ ಹಾಗೂ ವೈಚಾರಿಕ ಚಿಂತನೆಗಳು ಸಾಹಿತ್ಯ ಲೋಕದಲ್ಲಿ ಮಹತ್ವದ ಪ್ರಭಾವ ಬೀರಿವೆ.

    ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದ ಅವರು, ಮೈಸೂರು ವಿಶ್ವವಿದ್ಯಾಲಯದಿಂದ ಏಳು ಚಿನ್ನದ ಪದಕಗಳೊಂದಿಗೆ ಸ್ನಾತಕೋತ್ತರ ಪದವಿ ಗಳಿಸಿದರು. ಬಳಿಕ ‘ಆಧುನಿಕ ಕನ್ನಡ ಕಾವ್ಯ ಮತ್ತು ಪ್ರತಿಭಟನೆ’ ವಿಷಯದಲ್ಲಿ ಪಿಎಚ್.ಡಿ. ಪದವಿ ಪಡೆದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಸಾಹಿತ್ಯ ಅಧ್ಯಯನ ವಿಭಾಗದ ಪ್ರಾಧ್ಯಾಪಕ, ಮುಖ್ಯಸ್ಥ ಹಾಗೂ ಡೀನ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

    ಕರ್ನಾಟಕದ ಸೂಫಿ, ನಾಥ, ಶಾಕ್ತ ಹಾಗೂ ಮೊಹರಂ ಸಂಸ್ಕೃತಿಗಳ ಕುರಿತು ಕ್ಷೇತ್ರಕಾರ್ಯ ಮತ್ತು ಸಂಶೋಧನೆ ನಡೆಸಿರುವ ಅವರು 30ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ‘ಪ್ರತಿಸಂಸ್ಕೃತಿ’, ‘ಕರ್ನಾಟಕದ ಸೂಫಿಗಳು’, ‘ಅಂಡಮಾನ್ ಕನಸು’, ‘ಕರ್ನಾಟಕ ಶಾಕ್ತಪಂಥ’ ಹಾಗೂ ‘ಕತ್ತಿಯಂಚಿನ ದಾರಿ’ ಅವರ ಪ್ರಮುಖ ಕೃತಿಗಳಾಗಿವೆ.

    ಸಾಮಾಜಿಕ, ಸಾಂಸ್ಕೃತಿಕ ಹಾಗೂ ವೈಚಾರಿಕ ಪ್ರಶ್ನೆಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸುತ್ತಾ ಬಂದಿರುವ ರೆಹಮತ್ ತರೀಕೆರೆ ಅವರ ಭಾಗವಹಿಸುವಿಕೆ ಜನನುಡಿ–2026 ಉತ್ಸವಕ್ಕೆ ವಿಶೇಷ ಮಹತ್ವ ನೀಡಲಿದೆ ಎಂಬ ಆಶಯವನ್ನು ಜನನುಡಿ ಬಳಗ ವ್ಯಕ್ತಪಡಿಸಿದೆ. ಸಾಹಿತ್ಯ, ಸಂಸ್ಕೃತಿ, ಸಮಾಜ ಮತ್ತು ಸಮಕಾಲೀನ ವಿಚಾರಗಳ ಕುರಿತು ಚರ್ಚೆಗೆ ವೇದಿಕೆಯಾಗಲಿರುವ ಈ ಉತ್ಸವದ ಅಂಗವಾಗಿ ನಡೆಯುವ ಪುಸ್ತಕ ಮೇಳವೂ ಓದುಗರಿಗೆ ಆಕರ್ಷಣೆಯಾಗುವ ನಿರೀಕ್ಷೆಯಿದೆ.

    ರೆಹಮತ್ ತರೀಕೆರೆ
    Previous Articleಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ಜಾರಿ ಟ್ಯಾಕ್ಸಿ ಪ್ರಯಾಣಿಕರ ಪ್ರಯಾಣ ವೆಚ್ಚ ಹೆಚ್ಚಳದ ಆತಂಕ; ಮೂಲಸೌಕರ್ಯ ನಿರ್ವಹಣೆಗೆ ಶುಲ್ಕ ವಿಧಿಸಿರುವುದಾಗಿ ಆಡಳಿತ ಮಂಡಳಿ ಸ್ಪಷ್ಟನೆ
    Next Article2028ರ ಚುನಾವಣೆಗೆ ಸ್ಪರ್ಧೆ ಖಚಿತ: ರಘುಪತಿ ಭಟ್2028ರ ಚುನಾವಣೆಗೆ ಸ್ಪರ್ಧೆ ಖಚಿತ: ರಘುಪತಿ ಭಟ್

    Related Posts

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಕಾಗೋಡು ತಿಮ್ಮಪ್ಪ, ಬಿ.ವಿ. ಆಚಾರ್ಯ ಸೇರಿ ಗಣ್ಯರಿಗೆ ಗೌರವ

    October 30, 2026

    ಶಬರಿಮಲೆ ಪೊಲೀಸರ ಲಗೇಜ್ ಭತ್ಯೆ ₹600ಕ್ಕೆ ಏರಿಕೆ ; ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಅನುಕೂಲ

    October 29, 2026

    ಕನ್ನಡ ಸಾಹಿತ್ಯ ಪರಿಷತ್‌ಗೆ ‘ಅಧಿಕಾರಿಗಳ ಆಡಳಿತ’ದಿಂದ ಮುಕ್ತಿ ಬೇಕು: ಸಿದ್ಧರಾಮಯ್ಯ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ

    October 28, 2026

    ಜಿಲ್ಲಾ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಆಯುಧ ಪೂಜೆ

    October 23, 2026
    Latest Posts

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026
    ತಾಜಾ ಸುದ್ದಿಗಳು

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಮಂಗಳೂರಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: 173 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    November 1, 2026

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.