Close Menu
    Latest Posts

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಕನ್ನಡ ಸಾಹಿತ್ಯ ಪರಿಷತ್‌ಗೆ ‘ಅಧಿಕಾರಿಗಳ ಆಡಳಿತ’ದಿಂದ ಮುಕ್ತಿ ಬೇಕು: ಸಿದ್ಧರಾಮಯ್ಯ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ
    ಧರ್ಮ - ಸಂಸ್ಕೃತಿ - ಸಾಹಿತ್ಯ

    ಕನ್ನಡ ಸಾಹಿತ್ಯ ಪರಿಷತ್‌ಗೆ ‘ಅಧಿಕಾರಿಗಳ ಆಡಳಿತ’ದಿಂದ ಮುಕ್ತಿ ಬೇಕು: ಸಿದ್ಧರಾಮಯ್ಯ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ

    navabharathaBy navabharathaOctober 28, 2026

    ಮಂಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತದಲ್ಲಿ ಕಳೆದ ಹತ್ತು ವರ್ಷಗಳಿಂದ ನಿವೃತ್ತ ಅಧಿಕಾರಿಗಳ ಪ್ರಾಬಲ್ಯ ಹೆಚ್ಚಿದ್ದು, ಇದರಿಂದ ಪರಿಷತ್ತಿನ ಸಾಹಿತ್ಯಿಕ ಚಟುವಟಿಕೆಗಳು ಕುಂಠಿತಗೊಂಡಿವೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಸಾಹಿತಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಆರೋಪಿಸಿದ್ದಾರೆ. ಕನ್ನಡ ನಾಡು, ನುಡಿ ಮತ್ತು ಸಾಹಿತ್ಯಕ್ಕಾಗಿ ಕೆಲಸ ಮಾಡಿದವರ ಕೈಗೆ ಪರಿಷತ್ತಿನ ಆಡಳಿತದ ಚುಕ್ಕಾಣಿ ನೀಡುವ ಉದ್ದೇಶದಿಂದ ಸಮಾನ ಮನಸ್ಕರ ವೇದಿಕೆಯನ್ನು ರಚಿಸಲಾಗಿದ್ದು, ಅದರ ಅಭ್ಯರ್ಥಿಯಾಗಿ ಸಾಹಿತಿ ಹಾಗೂ ನಾಡಪರ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಕಣಕ್ಕಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

    ಮಂಗಳೂರಿನ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕನ್ನಡ ಸಾಹಿತ್ಯ ಪರಿಷತ್ತನ್ನು ಸಾಹಿತ್ಯಿಕ ಚಟುವಟಿಕೆಗಳ ಕೇಂದ್ರವನ್ನಾಗಿ ಪುನಶ್ಚೇತನಗೊಳಿಸುವುದು ವೇದಿಕೆಯ ಪ್ರಮುಖ ಗುರಿಯಾಗಿದೆ ಎಂದರು.

    ‘ಕನ್ನಡ ಅಸ್ಮಿತೆಗೆ ಧಕ್ಕೆ ತಂದಿದ್ದಾರೆ’

    ಹಿಂದಿನ ಅಧ್ಯಕ್ಷರ ಆಡಳಿತದಲ್ಲಿ ಕನ್ನಡದ ಅಸ್ಮಿತೆಗೆ ಧಕ್ಕೆಯಾಗಿದ್ದು, ಪರಿಷತ್ತಿನಿಂದ ನಡೆಯುತ್ತಿದ್ದ ಸಾಹಿತ್ಯಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ ಎಂದು ಸಿದ್ಧರಾಮಯ್ಯ ಆರೋಪಿಸಿದರು. ಪರಿಷತ್ತಿನ ಕಾರ್ಯವೈಖರಿಯನ್ನು ಪ್ರಶ್ನಿಸಿದವರ ವಿರುದ್ಧ ಪ್ರಕರಣ ದಾಖಲಿಸಿ, ಅವರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ನಡೆದಿದೆ ಎಂದೂ ದೂರಿದರು.

    ಈ ಬೆಳವಣಿಗೆಗಳ ವಿರುದ್ಧ ಹೋರಾಟ ನಡೆಸಿದ ಪರಿಣಾಮ ಸರ್ಕಾರ ವಿಚಾರಣಾ ಸಮಿತಿ ರಚಿಸಿತ್ತು. ಹಿಂದಿನ ಅಧ್ಯಕ್ಷರ ವಿರುದ್ಧ ಮಾಡಲಾಗಿದ್ದ 17 ಆರೋಪಗಳ ಪೈಕಿ 16 ಆರೋಪಗಳು ಸಾಬೀತಾಗಿದ್ದು, ಮತ್ತೊಂದು ವಿಚಾರಣೆ ಹಂತದಲ್ಲಿದೆ ಎಂದು ಅವರು ಹೇಳಿದರು. ಇದರ ಪರಿಣಾಮವಾಗಿ ಸದಸ್ಯತ್ವ ರದ್ದಾಗಿದೆ ಎಂದ ಅವರು, ಸುಮಾರು 8 ಕೋಟಿ ರೂ.ಗಳ ಭ್ರಷ್ಟಾಚಾರ ನಡೆದಿರುವುದು ಸಾಬೀತಾಗಿದೆ ಎಂದು ಆರೋಪಿಸಿದರು. ಹೈಕೋರ್ಟ್‌ನಲ್ಲಿಯೂ ಅವರ ಮೇಲ್ಮನವಿ ತಿರಸ್ಕೃತಗೊಂಡಿದೆ ಎಂದು ತಿಳಿಸಿದರು.

    ‘ಹಣ ವಸೂಲಿ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ’

    ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪರಿಷತ್ತಿನ ಹಣ ದುರುಪಯೋಗವಾಗಿದ್ದರೆ ಅದನ್ನು ಸಂಬಂಧಪಟ್ಟ ಮಾಜಿ ಅಧ್ಯಕ್ಷರಿಂದಲೇ ವಸೂಲಿ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸಿದ್ಧರಾಮಯ್ಯ ಒತ್ತಾಯಿಸಿದರು.

    ಮುಂದಿನ ದಿನಗಳಲ್ಲಿಯೂ ನಿವೃತ್ತ ಅಧಿಕಾರಿಗಳು ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಸಂಸ್ಥೆಯ ಉದ್ದೇಶಗಳಿಗೆ ಧಕ್ಕೆ ತರುವುದನ್ನು ತಡೆಯಬೇಕು. ಕನ್ನಡ ಭಾಷೆ, ಸಾಹಿತ್ಯ ಮತ್ತು ನಾಡಿನ ಹಿತಕ್ಕಾಗಿ ದುಡಿಯುವವರಿಗೆ ಅವಕಾಶ ಕಲ್ಪಿಸಬೇಕು ಎಂಬ ಆಶಯದಿಂದ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಲಾಗಿದೆ. ಅವರ ಗೆಲುವಿಗೆ ಸಮಾನ ಮನಸ್ಕರು ಶ್ರಮಿಸಲಿದ್ದಾರೆ ಎಂದರು.

    ಡಿಸೆಂಬರ್–ಜನವರಿಯಲ್ಲಿ ಚುನಾವಣೆ ಸಾಧ್ಯತೆ

    ಕನ್ನಡ ಸಾಹಿತ್ಯ ಪರಿಷತ್ತಿನ ಮುಂದಿನ ಚುನಾವಣೆ ಡಿಸೆಂಬರ್ ಅಥವಾ ಜನವರಿಯಲ್ಲಿ ನಡೆಯುವ ಸಾಧ್ಯತೆಯಿದೆ ಎಂದು ಸಿದ್ಧರಾಮಯ್ಯ ತಿಳಿಸಿದರು. ಚುನಾವಣೆಯಲ್ಲಿ ಗೆಲುವು ಸಾಧಿಸುವ ಮೂಲಕ ಪರಿಷತ್ತನ್ನು ಮತ್ತೆ ಸಾಹಿತ್ಯ, ಸಂವಾದ ಮತ್ತು ಕನ್ನಡಪರ ಚಟುವಟಿಕೆಗಳ ಕೇಂದ್ರವನ್ನಾಗಿ ರೂಪಿಸುವುದು ವೇದಿಕೆಯ ಉದ್ದೇಶವಾಗಿದೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆಡಳಿತ, ಪಾರದರ್ಶಕತೆ ಮತ್ತು ಭವಿಷ್ಯದ ದಿಕ್ಕಿನ ಕುರಿತು ಈ ಹೇಳಿಕೆಗಳು ಹೊಸ ಚರ್ಚೆಗೆ ನಾಂದಿ ಹಾಡಿವೆ.

    Previous Articleರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಮಂಗಳೂರಿನ  ಪ್ರಜ್ವಲ್ ಆರ್. ಶೆಟ್ಟಿ ಆಯ್ಕೆರಫೇಲ್ ಯುದ್ಧವಿಮಾನದ ಪೈಲಟ್ ಆಗಿ ಮಂಗಳೂರಿನ ಪ್ರಜ್ವಲ್ ಆರ್. ಶೆಟ್ಟಿ ಆಯ್ಕೆ
    Next Articleಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಯಾಮತಿ ಎಂ. ನೇಮಕಬೆಳ್ತಂಗಡಿ ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಯಾಗಿ ದಯಾಮತಿ ಎಂ. ನೇಮಕ

    Related Posts

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಕಾಗೋಡು ತಿಮ್ಮಪ್ಪ, ಬಿ.ವಿ. ಆಚಾರ್ಯ ಸೇರಿ ಗಣ್ಯರಿಗೆ ಗೌರವ

    October 30, 2026

    ಶಬರಿಮಲೆ ಪೊಲೀಸರ ಲಗೇಜ್ ಭತ್ಯೆ ₹600ಕ್ಕೆ ಏರಿಕೆ ; ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಅನುಕೂಲ

    October 29, 2026

    ಜಿಲ್ಲಾ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಆಯುಧ ಪೂಜೆ

    October 23, 2026

    ವೈಭವದ ಮಂಗಳೂರು ದಸರಾ ಶೋಭಾಯಾತ್ರೆ: ಲಕ್ಷಾಂತರ ಭಕ್ತರ ಸಾಗರ, ಕಂಗೊಳಿಸಿದ ಕರಾವಳಿಯ ಸಂಭ್ರಮ

    October 22, 2026
    Latest Posts

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026

    ‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?

    November 2, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026
    ತಾಜಾ ಸುದ್ದಿಗಳು

    ‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?

    November 2, 2026

    ನ.6, 7ರಂದು ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ

    November 2, 2026

    ಸೋಂದೆ ಜೈನ ಮಠ ; ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ₹50 ಲಕ್ಷ ದೇಣಿಗೆ

    November 2, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.