Close Menu
    Latest Posts

    ಮನೆಗೊಂದು ಇಂಗುಗುಂಡಿ ನಿರ್ಮಾಣಕ್ಕೆ ಕರೆ: ಬಡಗ ಎಕ್ಕಾರು ಪ್ರೌಢಶಾಲೆಯಲ್ಲಿ ಗಮನ ಸೆಳೆದ ಆಂದೋಲನ

    November 3, 2026

    ಕನ್ನಡ ನಾಡು ನುಡಿ ಎಲ್ಲರಿಗೂ ಅಚ್ಚುಮೆಚ್ಚು – ಎನ್. ಸುಬ್ರಾಯ ಭಟ್

    November 3, 2026

    ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಗೀತ ಸಂಭ್ರಮ

    November 3, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಬೆಳೆ ವಿಮೆ ಹಣ ಜಮೆಯಾಗದೆ ನೆಲ್ಯಾಡಿ ರೈತರ ಆಕ್ರೋಶ
    Uncategorized

    ಬೆಳೆ ವಿಮೆ ಹಣ ಜಮೆಯಾಗದೆ ನೆಲ್ಯಾಡಿ ರೈತರ ಆಕ್ರೋಶ

    navabharathaBy navabharathaNovember 3, 2026

    ನೆಲ್ಯಾಡಿ: ಹವಾಮಾನ ಆಧಾರಿತ ಬೆಳೆ ವಿಮೆಗಾಗಿ ಬರೋಬ್ಬರಿ 1.12 ಕೋಟಿ ರೂಪಾಯಿ ಪ್ರೀಮಿಯಂ ಪಾವತಿಸಿದ್ದರೂ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಯ 2,152 ರೈತರ ಖಾತೆಗಳಿಗೆ ಈವರೆಗೂ ವಿಮಾ ಪರಿಹಾರದ ಮೊತ್ತ ಜಮೆಯಾಗಿಲ್ಲ. ಇತ್ತೀಚೆಗೆ ಬಿಡುಗಡೆಯಾದ ಬೆಳೆ ವಿಮೆ ಪಟ್ಟಿಯಲ್ಲಿ ರೈತರಿಗೆ ದೊರೆಯಬೇಕಾದ ಪರಿಹಾರದ ಮೊತ್ತದ ಎದುರು ‘ಶೂನ್ಯ’ ಎಂದು ನಮೂದಿಸಲಾಗಿದ್ದು, ಕೃಷಿಕರಲ್ಲಿ ತೀವ್ರ ಆಕ್ರೋಶ ಹಾಗೂ ಆತಂಕ ಮೂಡಿಸಿದೆ.

    ಕಳೆದ ಬಾರಿಯೂ ತೃಪ್ತಿಕರವಾದ ಬೆಳೆ ವಿಮೆ ದೊರೆಯದೆ ನಿರಾಸೆ ಅನುಭವಿಸಿದ್ದ ಈ ಭಾಗದ ರೈತರಿಗೆ, ಈ ಬಾರಿಯೂ ಪರಿಹಾರ ಸಿಗದಿರುವುದು ಗಾಯದ ಮೇಲೆ ಎಳೆ ಎಳೆದಂತಾಗಿದೆ. ನೆಲ್ಯಾಡಿ, ಕೌಕ್ರಾಡಿ, ಗೋಳಿತೊಟ್ಟು, ಆಲಂತಾಯ, ಕೊಣಾಲು, ಇಚಿಲಂಪಾಡಿ ಹಾಗೂ ಶಿರಾಡಿ ಸೇರಿದಂತೆ ಒಟ್ಟು 7 ಕಂದಾಯ ಗ್ರಾಮಗಳ 2,152 ರೈತ ಸದಸ್ಯರು 2026ನೇ ಸಾಲಿನ ವಿಮಾ ಕಂತನ್ನು ಪಾವತಿಸಿದ್ದರು.

    ಸಚಿವರಿಗೆ ಮನವಿ, ಪ್ರತಿಭಟನೆಯ ಎಚ್ಚರಿಕೆ: ಹೆಚ್ಚುತ್ತಿರುವ ಕೃಷಿ ವೆಚ್ಚ ಮತ್ತು ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟದ ಭೀತಿಯಲ್ಲಿರುವ ರೈತರಿಗೆ ವಿಮೆ ಸೂಕ್ತ ಆಸರೆಯಾಗಬೇಕಿತ್ತು. ಆದರೆ ವಿಮಾ ಕಂಪನಿಯ ಈ ಧೋರಣೆಯನ್ನು ಖಂಡಿಸಿ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲು, ಉಪಾಧ್ಯಕ್ಷ ರವಿಚಂದ್ರ ಹೊಸವಕ್ಲು ಹಾಗೂ ನಿರ್ದೇಶಕಿ ಉಷಾ ಅಂಚನ್‌ ನೇತೃತ್ವದ ನಿಯೋಗವು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದೆ.

    ವಿಮಾ ಪರಿಹಾರ ವಿಳಂಬ ಹಾಗೂ ‘ಶೂನ್ಯ’ ಪರಿಹಾರದ ಬಗ್ಗೆ ಸಮಗ್ರ ಪರಿಶೀಲನೆ ನಡೆಸಿ, ರೈತರ ಖಾತೆಗಳಿಗೆ ಅರ್ಹ ವಿಮಾ ಮೊತ್ತವನ್ನು ತಕ್ಷಣವೇ ಜಮೆ ಮಾಡಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಗಿದೆ. ಅಷ್ಟೇ ಅಲ್ಲದೆ, ಈ ವಿಷಯವನ್ನು ರಾಜ್ಯಮಟ್ಟದಲ್ಲಿ ಗಮನಕ್ಕೆ ತರಲು ತೋಟಗಾರಿಕೆ ಇಲಾಖೆ ಸಚಿವರನ್ನೂ ಭೇಟಿಯಾಗಲು ಸಂಘದ ನಿಯೋಗ ನಿರ್ಧರಿಸಿದ್ದು, ಶೀಘ್ರ ಪರಿಹಾರ ಸಿಗದಿದ್ದರೆ ಹೋರಾಟ ರೂಪಿಸುವುದಾಗಿ ಎಚ್ಚರಿಸಿದೆ.

    Previous Articleಹೌತಿ ದಾಳಿ: ಉಮ್ರಾ ಯಾತ್ರಾರ್ಥಿಗಳು ಅತಂತ್ರ, ಮಂಗಳೂರಿನ 160ಕ್ಕೂ ಹೆಚ್ಚು ಮಂದಿ ಸಿಲುಕುವ ಭೀತಿಹೌತಿ ದಾಳಿ: ಉಮ್ರಾ ಯಾತ್ರಾರ್ಥಿಗಳು ಅತಂತ್ರ, ಮಂಗಳೂರಿನ 160ಕ್ಕೂ ಹೆಚ್ಚು ಮಂದಿ ಸಿಲುಕುವ ಭೀತಿ
    Next Article‘ನಕಲಿ ಸ್ಟಿಂಗ್’ ಕಿಚ್ಚು: ರಾಹುಲ್ ಭೇಟಿಯಾಗಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ!‘ನಕಲಿ ಸ್ಟಿಂಗ್’ ಕಿಚ್ಚು: ರಾಹುಲ್ ಭೇಟಿಯಾಗಿ ಸಿದ್ದರಾಮಯ್ಯ ಖಡಕ್ ಎಚ್ಚರಿಕೆ!

    Related Posts

    ಆಂಧ್ರಪ್ರದೇಶದಲ್ಲಿ ‘ಅರ್ನಬ್’ ಚಂಡಮಾರುತಕ್ಕೆ ಮೂವರು ಬಲಿ; ವಿವಿಧ ರಾಜ್ಯಗಳಲ್ಲಿ 87 ಸಾವಿರಕ್ಕೂ ಅಧಿಕ ಜನರ ಸ್ಥಳಾಂತರ

    October 28, 2026

    ಅಕ್ಟೋಬರ್ 21 ರಂದು ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಶ್ರೀ ಮಧ್ವಾಚಾರ್ಯರ ಜಯಂತಿ

    October 19, 2026

    ಚಿಕ್ಕಮಗಳೂರು: ಚಲಿಸುತ್ತಿದ್ದ KSRTC ಬಸ್‌ನಿಂದ ಕಳಚಿದ ಟಯರ್; 50ಕ್ಕೂ ಹೆಚ್ಚು ಪ್ರಯಾಣಿಕರು ಪಾರು! ಕೊಪ್ಪ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ; ಮತ್ತೊಂದು ವಾಹನಕ್ಕೆ ಹಾನಿ

    October 15, 2026

    ಮಂಗಳೂರು ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಾಹನಗಳಿಗೆ ಪ್ರವೇಶ ಶುಲ್ಕ ಜಾರಿ ಟ್ಯಾಕ್ಸಿ ಪ್ರಯಾಣಿಕರ ಪ್ರಯಾಣ ವೆಚ್ಚ ಹೆಚ್ಚಳದ ಆತಂಕ; ಮೂಲಸೌಕರ್ಯ ನಿರ್ವಹಣೆಗೆ ಶುಲ್ಕ ವಿಧಿಸಿರುವುದಾಗಿ ಆಡಳಿತ ಮಂಡಳಿ ಸ್ಪಷ್ಟನೆ

    October 14, 2026

    ಬಾಕ್ಸೈಟ್ ಅಂಶ ಪತ್ತೆ ?; ಪರಿಶೀಲನೆಗೆ ಕೇಂದ್ರದ ತಜ್ಞರ ತಂಡ

    October 9, 2026

    ರಂಗಕರ್ಮಿ ರವಿರಾಜ್ ಎಚ್.ಪಿ. ಅವರಿಗೆ ಸಂಗೊಳ್ಳಿ ರಾಯಣ್ಣ ಪುರಸ್ಕಾರ ಪ್ರದಾನ

    October 9, 2026
    Latest Posts

    ಮನೆಗೊಂದು ಇಂಗುಗುಂಡಿ ನಿರ್ಮಾಣಕ್ಕೆ ಕರೆ: ಬಡಗ ಎಕ್ಕಾರು ಪ್ರೌಢಶಾಲೆಯಲ್ಲಿ ಗಮನ ಸೆಳೆದ ಆಂದೋಲನ

    November 3, 2026

    ಕನ್ನಡ ನಾಡು ನುಡಿ ಎಲ್ಲರಿಗೂ ಅಚ್ಚುಮೆಚ್ಚು – ಎನ್. ಸುಬ್ರಾಯ ಭಟ್

    November 3, 2026

    ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಗೀತ ಸಂಭ್ರಮ

    November 3, 2026

    ತ್ಯಾಜ್ಯ ಮರುಬಳಕೆ ಘಟಕಕ್ಕೆ ಪಾಲಿಕೆ ಆಯುಕ್ತರ ಭೇಟಿ: ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಪರಿಶೀಲನೆ

    November 3, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಮನೆಗೊಂದು ಇಂಗುಗುಂಡಿ ನಿರ್ಮಾಣಕ್ಕೆ ಕರೆ: ಬಡಗ ಎಕ್ಕಾರು ಪ್ರೌಢಶಾಲೆಯಲ್ಲಿ ಗಮನ ಸೆಳೆದ ಆಂದೋಲನ

    November 3, 2026

    ಕನ್ನಡ ನಾಡು ನುಡಿ ಎಲ್ಲರಿಗೂ ಅಚ್ಚುಮೆಚ್ಚು – ಎನ್. ಸುಬ್ರಾಯ ಭಟ್

    November 3, 2026

    ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಗೀತ ಸಂಭ್ರಮ

    November 3, 2026
    ತಾಜಾ ಸುದ್ದಿಗಳು

    ತ್ಯಾಜ್ಯ ಮರುಬಳಕೆ ಘಟಕಕ್ಕೆ ಪಾಲಿಕೆ ಆಯುಕ್ತರ ಭೇಟಿ: ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಣೆ ಪರಿಶೀಲನೆ

    November 3, 2026

    ಉಳ್ಳಾಲ ಹೊಯ್ಗೆ ಪ್ರದೇಶಕ್ಕೆ ಆಯುಕ್ತರ ಭೇಟಿ: ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಆದ್ಯತೆ

    November 3, 2026

    ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸ್ವೀಕರಿಸಿದ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಹರೀಶ್ ಶೆಟ್ಟಿ

    November 3, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.