Close Menu
    Latest Posts

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026

    ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

    November 1, 2026

    ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ

    November 1, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ

    Nava Bharatha MediaNava Bharatha Media
    Home » ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎಗೆ ಜಯ: ಪುಟ್ಟಣ್ಣಗೆ ಸೋಲು, ಎ.ಪಿ. ರಂಗನಾಥ್‌ಗೆ ಗೆಲುವು
    ಸುದ್ದಿ

    ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎಗೆ ಜಯ: ಪುಟ್ಟಣ್ಣಗೆ ಸೋಲು, ಎ.ಪಿ. ರಂಗನಾಥ್‌ಗೆ ಗೆಲುವು

    navabharathaBy navabharathaOctober 27, 2026

    ಬೆಂಗಳೂರು: ಕರ್ನಾಟಕ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಭ್ಯರ್ಥಿ ಎ.ಪಿ. ರಂಗನಾಥ್ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನ ಹಿರಿಯ ನಾಯಕ ಹಾಗೂ ಐದು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದ ಪುಟ್ಟಣ್ಣ ಅವರನ್ನು ಸೋಲಿಸುವ ಮೂಲಕ ರಂಗನಾಥ್ ಅವರು ಕ್ಷೇತ್ರವನ್ನು ಎನ್‌ಡಿಎ ತೆಕ್ಕೆಗೆ ತಂದಿದ್ದಾರೆ.

    ಚುನಾವಣೆಯ ಮತ ಎಣಿಕೆಯಲ್ಲಿ ಎ.ಪಿ. ರಂಗನಾಥ್ ಅವರು 10,810 ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಪಡೆದರೆ, ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಅವರು 9,902 ಮತಗಳನ್ನು ಗಳಿಸಿದ್ದಾರೆ. ಈ ಮೂಲಕ ರಂಗನಾಥ್ ಅವರು 908 ಮತಗಳ ಅಂತರದಿಂದ ಜಯ ಸಾಧಿಸಿದ್ದಾರೆ.

    ಮತ ಎಣಿಕೆ ಕೇಂದ್ರದ ಬಳಿ ವಿಜಯೋತ್ಸವ

    ಬೆಂಗಳೂರಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ಎನ್‌ಡಿಎ ಅಭ್ಯರ್ಥಿಯ ಗೆಲುವಿನ ಸುದ್ದಿ ತಿಳಿಯುತ್ತಿದ್ದಂತೆ ಮತ ಎಣಿಕೆ ಕೇಂದ್ರದ ಬಳಿ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು ಜಮಾಯಿಸಿ ಸಂಭ್ರಮಾಚರಣೆ ನಡೆಸಿದರು.

    ಡೊಳ್ಳು ಬಾರಿಸಿ, ಪಟಾಕಿ ಸಿಡಿಸಿ, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಬಾವುಟಗಳನ್ನು ಹಿಡಿದು ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪರಸ್ಪರ ಅಭಿನಂದನೆ ಸಲ್ಲಿಸಿ ಘೋಷಣೆಗಳನ್ನು ಕೂಗುವ ಮೂಲಕ ಗೆಲುವಿನ ಸಂಭ್ರಮವನ್ನು ಹಂಚಿಕೊಂಡರು.

    ಎನ್‌ಡಿಎ ನಾಯಕರಿಂದ ಅಭಿನಂದನೆ

    ಎ.ಪಿ. ರಂಗನಾಥ್ ಅವರ ಗೆಲುವಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಹಾಗೂ ಡಾ. ಕೆ. ಸುಧಾಕರ್ ಸೇರಿದಂತೆ ಹಲವು ನಾಯಕರು ಅಭಿನಂದನೆ ಸಲ್ಲಿಸಿದ್ದಾರೆ. ಈ ಗೆಲುವನ್ನು ಎನ್‌ಡಿಎ ಮೈತ್ರಿಕೂಟದ ಒಗ್ಗಟ್ಟು ಮತ್ತು ಕಾರ್ಯಕರ್ತರ ಪರಿಶ್ರಮಕ್ಕೆ ಸಂದ ಜಯವೆಂದು ನಾಯಕರು ಬಣ್ಣಿಸಿದ್ದಾರೆ.

    ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಎನ್‌ಡಿಎ ಅಭ್ಯರ್ಥಿಯ ಗೆಲುವು ಬಿಜೆಪಿ–ಜೆಡಿಎಸ್ ಮೈತ್ರಿಕೂಟಕ್ಕೆ ರಾಜಕೀಯ ಮಹತ್ವ ಪಡೆದುಕೊಂಡಿದೆ. ಕಾಂಗ್ರೆಸ್‌ನ ವಶದಲ್ಲಿದ್ದ ಕ್ಷೇತ್ರವನ್ನು ಮರಳಿ ಪಡೆಯುವಲ್ಲಿ ಮೈತ್ರಿಕೂಟ ಯಶಸ್ವಿಯಾಗಿದ್ದು, ಫಲಿತಾಂಶ ರಾಜ್ಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

    Poilitical news ರಾಜಕೀಯ
    Previous Articleಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹ; ದರ್ಬೆ ವೃತ್ತಕ್ಕೆ ಅಂಬೇಡ್ಕರ್ ಹೆಸರು ನಾಮಕರಣಕ್ಕೆ ಒತ್ತಾಯಅಂಬೇಡ್ಕರ್ ಭವನ ನಿರ್ಮಾಣಕ್ಕೆ ಆಗ್ರಹ; ದರ್ಬೆ ವೃತ್ತಕ್ಕೆ ಅಂಬೇಡ್ಕರ್ ಹೆಸರು ನಾಮಕರಣಕ್ಕೆ ಒತ್ತಾಯ
    Next Articleಗೋಹತ್ಯೆ, ಅಕ್ರಮ ಜಾನುವಾರು ಸಾಗಾಟ ತಡೆಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕ್ರಮ: ಮಂಗಳೂರು ಪೊಲೀಸ್ ಆಯುಕ್ತಗೋಹತ್ಯೆ, ಅಕ್ರಮ ಜಾನುವಾರು ಸಾಗಾಟ ತಡೆಗೆ ಪೊಲೀಸರಿಗೆ ಮಾಹಿತಿ ನೀಡಿದರೆ ಕ್ರಮ: ಮಂಗಳೂರು ಪೊಲೀಸ್ ಆಯುಕ್ತ

    Related Posts

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026

    ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

    November 1, 2026

    ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ

    November 1, 2026

    ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಅಂಚೆ ಇಲಾಖೆಯಿಂದ ವಿವಿಧ ಸೇವಾ ಸೌಲಭ್ಯಗಳು ಲಭ್ಯ: ಲೋಕನಾಥ್

    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026

    ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

    November 1, 2026

    ರಾಜ್ಯೋತ್ಸವ ಪ್ರಶಸ್ತಿ ಪಟ್ಟಿಯಿಂದ ಡಾ. ಚಂದ್ರಶೇಖರ್ ಹೆಸರು ಕೈಬಿಟ್ಟಿದ್ದಕ್ಕೆ ವ್ಯಾಪಕ ಆಕ್ರೋಶ

    November 1, 2026
    ತಾಜಾ ಸುದ್ದಿಗಳು

    ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಅಂಚೆ ಇಲಾಖೆಯಿಂದ ವಿವಿಧ ಸೇವಾ ಸೌಲಭ್ಯಗಳು ಲಭ್ಯ: ಲೋಕನಾಥ್

    November 1, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.