ಮೇಳದ ಅಂಗವಾಗಿ ಬೆಳಿಗ್ಗೆ 8.30ರಿಂದ ಪಿಲಿಕುಳ ಕೆರೆಯಲ್ಲಿ ಬೆಳೆಸಿದ ಮೀನುಗಳನ್ನು ದಾಸ್ತಾನು ಇರುವವರೆಗೆ ಸಾರ್ವಜನಿಕರಿಗೆ ಮಾರಾಟ ಮಾಡಲಾಗುತ್ತದೆ.
ಇದೇ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕಾ ಇಲಾಖೆಯ ವತಿಯಿಂದ ರೋಹು, ಕಟ್ಲಾ, ತಿಲಾಪಿಯಾ ಸೇರಿದಂತೆ ವಿವಿಧ ತಳಿಗಳ ಮೀನು ಮರಿಗಳನ್ನು ಪಿಲಿಕುಳ ಕೆರೆಗೆ ಬಿಡಲಾಗುತ್ತದೆ.
ಮೇಳದಲ್ಲಿ ಮೀನು ಆಹಾರ ಮಳಿಗೆಗಳನ್ನು ತೆರೆಯಲಾಗಿದ್ದು, ಸ್ಥಳದಲ್ಲೇ ತಯಾರಿಸಿದ ಸಿಹಿನೀರಿನ ಮೀನು ಹಾಗೂ ಸಮುದ್ರದ ಮೀನಿನ ಖಾದ್ಯಗಳ ಜೊತೆಗೆ ಮೌಲ್ಯವರ್ಧಿತ ಮೀನು ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
