ಮಂಗಳೂರು :2026-27ನೇ ಸಾಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆಯ ಮಂಗಳೂರು ಉತ್ತರ ಹಾಗೂ ಮೂಡಬಿದ್ರೆ ಶೈಕ್ಷಣಿಕ ವಲಯಗಳಲ್ಲಿ ಖಾಲಿ ಇರುವ ಒಟ್ಟು 2 ಹುದ್ದೆಗಳಿಗೆ ಮಾನಸಿಕ ಆರೋಗ್ಯ ಶೈಕ್ಷಣಿಕ ಸಂಪನ್ಮೂಲ ವ್ಯಕ್ತಿ ((Academic Resource Person for Mental health)ಯನ್ನು ಸಮಾಲೋಚಕ(consultant) ಆಧಾರದ ಮೇರೆಗೆ ಫೆಬ್ರವರಿ-2027 ರವರೆಗೆ ನೇಮಕ ಮಾಡಿಕೊಳ್ಳಲು ಮನೋ ವಿಜ್ಞಾನ/ ಕ್ಲಿನಿಕಲ್ ಮನೋವಿಜ್ಞಾನ/ ಕೌನ್ಸಿಲಿಂಗ್ ಮನೋವಿಜ್ಞಾನ ಅಥವಾ ಸಂಬಂಧಿತ ವಿಷಯಗಳಲ್ಲಿ ಎಂ.ಎ/ಎಂ.ಎಸ್ಸಿ. ಪದವಿಯನ್ನು ಹೊಂದಿರುವ (ವಯೋಮಿತಿ 26 ರಿಂದ 50 ವರ್ಷ) ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಕ್ಟೋಬರ್ 28 ರೊಳಗೆ ಕಛೇರಿಯಿಂದ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬಹುದು.
ಹೆಚ್ಚಿನ ಮಾಹಿತಿಗೆ ದ.ಕ ಜಿಲ್ಲಾ ಪಂಚಾಯತ್ ಕಟ್ಟಡದ 2ನೇ ಮಹಡಿಯಲ್ಲಿರುವ ಸಮಗ್ರ ಶಿಕ್ಷಣ ಕರ್ನಾಟಕ ಜಿಲ್ಲಾ ಕಛೇರಿಯನ್ನು ಸಂಪರ್ಕಿಸಬಹುದು ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

