Close Menu
    Latest Posts

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ಸಮಾಜಸೇವೆಗೆ ಹೊಸ ಮುನ್ನುಡಿ: ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಕೊಡುಗೆ
    ಸುದ್ದಿ

    ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ ಆರೋಗ್ಯದ ಶುಭ ಹಾರೈಕೆಯೊಂದಿಗೆ ಸಮಾಜಸೇವೆಗೆ ಹೊಸ ಮುನ್ನುಡಿ: ಅಶಕ್ತರಿಗೆ ನೆರವು, ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಕೊಡುಗೆ

    navabharathaBy navabharathaOctober 15, 2026

     

    ಮಂಗಳೂರು ; ಸಹಕಾರ ರತ್ನ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಆರೋಗ್ಯದ ಶುಭ ಹಾರೈಕೆಯೊಂದಿಗೆ ಸಮಾಜಮುಖಿ ಸೇವಾ ಕಾರ್ಯಗಳ ಉದ್ಘಾಟನೆ, ಅಶಕ್ತರಿಗೆ ನೆರವು ಹಾಗೂ ಉಡುಪಿ ಜಿಲ್ಲಾಡಳಿತಕ್ಕೆ ವಾಹನ ಕೊಡುಗೆ ಕಾರ್ಯಕ್ರಮ ಗುರುವಾರ ಮಂಗಳೂರಿನ ಎಸ್ ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
    ಕಾರ್ಯಕ್ರಮವನ್ನು ಉಡುಪಿ ಪರ್ಯಾಯ ಅಧೋಕ್ಷಜ ಮಠದ ಪೇಜಾವರ ತೀರ್ಥ ಸ್ವಾಮೀಜಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
    ಇದೇ ವೇಳೆ ಆಶೀರ್ವಚನ ನೀಡಿದ ಶ್ರೀಗಳು, ‘ವಿಜಯದಶಮಿ ಹಾಗೂ ನವರಾತ್ರಿ ಪರ್ವಕಾಲದಲ್ಲಿ ನಾವೆಲ್ಲರೂ ಇದ್ದೇವೆ. ಪಂಚ ಮಹಾಪರ್ವಗಳಲ್ಲಿ ನವರಾತ್ರಿ ಉತ್ಸವ ಅತ್ಯಂತ ಮಹತ್ವದ್ದಾಗಿದೆ. ಉತ್ಸವ ಎಂದರೆ ಹರ್ಷ ಮತ್ತು ಉಲ್ಲಾಸವನ್ನು ತುಂಬುವ ಸಂದರ್ಭ. ನಮ್ಮ ನಾಡಿನ ಜನರಿಗೆ ಶಕ್ತಿ ಹಾಗೂ ಪ್ರೇರಣೆ ನೀಡುವ ಇಂತಹ ಉತ್ಸವಗಳು ಸಮಾಜದ ಒಗ್ಗಟ್ಟಿಗೆ ಸಹಕಾರಿಯಾಗಿವೆ. ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಂತಹ ಮಹನೀಯರು ಸಮಾಜಕ್ಕೆ ನೀಡಿರುವ ಕೊಡುಗೆ ಅಪಾರ. ಅವರ ಆರೋಗ್ಯ, ಆಯಸ್ಸು ಮತ್ತು ಉತ್ತಮ ಭವಿಷ್ಯಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರು ಸಮಾಜದೊಂದಿಗೆ ನೂರು ಕಾಲ ಸುಖವಾಗಿ ಬಾಳಲಿ. ದೇವರ ಸೇವೆ ಮತ್ತು ಸಮಾಜ ಸೇವೆ ಒಂದಕ್ಕೊಂದು ಪೂರಕವಾಗಿವೆ’ ಎಂದರು. ಇದೇ ವೇಳೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಸಕಲ ಜೀವಿಗಳ ಹೃದಯದಲ್ಲಿ ನೆಲೆಸಿರುವುದಾಗಿ ತಿಳಿಸಿದ್ದಾನೆ. ಸಮಾಜದ ಪ್ರತಿಯೊಬ್ಬರಲ್ಲಿಯೂ ಭಗವಂತನನ್ನು ಕಾಣುತ್ತಾ, ಸಮಾನತೆ ಮತ್ತು ಸಹಕಾರದ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವ ರಾಜೇಂದ್ರ ಕುಮಾರ್ ಅವರು ಇಡೀ ಸಮಾಜಕ್ಕೆ ಮಾದರಿ’ ಎಂದರು.
    ಇನ್ನು ಇದೇ ವೇಳೆ ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್ ಮಾತನಾಡಿ, ”ನಾನು ದೈವ ದೇವರ ಆಶೀರ್ವಾದ ಹಾಗೂ ನಿಮ್ಮೆಲ್ಲರ ಪ್ರೀತಿಯಿಂದ ಗುಣಮುಖನಾಗಿ ಬಂದಿದ್ದೇನೆ. ಮುಂದೆ ಇನ್ನಷ್ಟು ಧಾರ್ಮಿಕ ಕೇಂದ್ರಗಳು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಉತ್ಸುಕನಾಗಿದ್ದೇನೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸ ನನ್ನ ಮೇಲೆ ನಿರಂತರವಾಗಿ ಇರಲಿ“ ಎಂದರು.
    ಇದೇ ವೇಳೆ ಉಡುಪಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಮಾತನಾಡಿ, “ದೇವರಿಗೆ ಅರ್ಪಿಸಿದ ಹೂವುಗಳನ್ನು ಕಸವಾಗಿ ಪರಿಗಣಿಸದೆ, ಅವುಗಳ ಪಾವಿತ್ರ್ಯವನ್ನು ಕಾಪಾಡಿಕೊಂಡು ಸದುಪಯೋಗಪಡಿಸಿಕೊಳ್ಳುವ ಉದ್ದೇಶದಿಂದ ಉಡುಪಿಯಲ್ಲಿ ವಿಶೇಷ ಯೋಜನೆಯೊಂದನ್ನು ರೂಪಿಸಲಾಗಿದೆ. ಜಿಲ್ಲೆಯಲ್ಲಿ ಮುಜರಾಯಿ ಮತ್ತು ಮುಜರಾಯಿಯೇತರ ದೇವಸ್ಥಾನಗಳು ಸೇರಿದಂತೆ ಅನೇಕ ದೇವಸ್ಥಾನಗಳಿವೆ. ಭಕ್ತರು ಭಕ್ತಿಯಿಂದ ದೇವರಿಗೆ ಅರ್ಪಿಸುವ ಹೂವುಗಳು ದೇವರ ಮುಡಿ, ಪಾದ ಹಾಗೂ ಮೈಮೇಲೆ ಸಮರ್ಪಿತವಾಗಿರುತ್ತವೆ. ಇಂತಹ ಪವಿತ್ರ ಹೂವುಗಳನ್ನು ಕಸಕ್ಕೆ ಎಸೆಯುವ ಬದಲು, ಅವುಗಳಿಂದ ಅಗರಬತ್ತಿ, ಧೂಪ ಮತ್ತು ಕೊಠಡಿ ಸುಗಂಧ ದ್ರವ್ಯಗಳಂತಹ ಉತ್ಪನ್ನಗಳನ್ನು ತಯಾರಿಸುವ ಮೂಲಕ ಮರುಬಳಕೆ ಮಾಡಬಹುದು ಎಂದರು.
    ಆಳ್ವಾಸ್ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ”ಎಂ. ಎನ್. ರಾಜೇಂದ್ರ ಕುಮಾರ್ ಅವರು ಯಾವುದೇ ಜಾತಿ, ಸಮುದಾಯ ಅಥವಾ ಕುಟುಂಬಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ಅವರು ಸಮಾಜದ ಎಲ್ಲ ವರ್ಗದ ಜನರೊಂದಿಗೆ ಆತ್ಮೀಯ ಸಂಬಂಧ ಹೊಂದಿದ್ದಾರೆ. ಅವರ ಸುಖದಲ್ಲಿ ಸಂತೋಷಪಡುವುದು, ಕಷ್ಟದಲ್ಲಿ ಜೊತೆಯಾಗಿ ನಿಲ್ಲುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಅವರ ಆರೋಗ್ಯ ವೃದ್ಧಿಸಿ, ನೂರು ಕಾಲ ಬಾಳುವಂತಾಗಲಿ ಹಾಗೂ ಅವರ ಮಾರ್ಗದರ್ಶನ ಸಮಾಜಕ್ಕೆ ನಿರಂತರವಾಗಿ ದೊರೆಯಲಿ“ ಎಂದರು.
    ಕಾರ್ಯಕ್ರಮದ ವೇದಿಕೆಯಲ್ಲಿ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕೆಎಂಎಫ್ ನಿರ್ದೇಶಕ ರವಿರಾಜ್ ಹೆಗ್ಡೆ, ಬ್ಯಾಂಕ್ ಉಪಾಧ್ಯಕ್ಷ ವಿನಯ್ ಕುಮಾರ್ ಸೂರಿಂಜೆ, ಭಾಸ್ಕರ್ ಹೆಗ್ಡೆ, ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಿನಾಥ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
    ಬ್ಯಾಂಕ್ ನಿರ್ದೇಶಕ ದೇವಿಪ್ರಸಾದ್ ಶೆಟ್ಟಿ ಬೆಳಪು ಪ್ರಾಸ್ತಾವಿಕ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದರು.

    Previous Articleಚಿಕ್ಕಮಗಳೂರು: ಚಲಿಸುತ್ತಿದ್ದ KSRTC ಬಸ್‌ನಿಂದ ಕಳಚಿದ ಟಯರ್; 50ಕ್ಕೂ ಹೆಚ್ಚು ಪ್ರಯಾಣಿಕರು ಪಾರು! ಕೊಪ್ಪ: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ಅನಾಹುತ; ಮತ್ತೊಂದು ವಾಹನಕ್ಕೆ ಹಾನಿ
    Next Articleಮಂಗಳೂರು:; ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ:ಮಂಗಳೂರು:; ಅದ್ದೂರಿ ಕನ್ನಡ ರಾಜ್ಯೋತ್ಸವಕ್ಕೆ ಭರ್ಜರಿ ಸಿದ್ಧತೆ:

    Related Posts

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026

    ನ.6, 7ರಂದು ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ

    November 2, 2026

    ಸೋಂದೆ ಜೈನ ಮಠ ; ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ₹50 ಲಕ್ಷ ದೇಣಿಗೆ

    November 2, 2026

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026
    Latest Posts

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026
    ತಾಜಾ ಸುದ್ದಿಗಳು

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026

    ‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?

    November 2, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.