Close Menu
    Latest Posts

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಅಮೃತ ಸೋಮೇಶ್ವರರ ‘ತಂಬಿಲ’ – ಮೂರು ಭಾಷೆಗಳ ಮಧುರ ಸಂಗಮದಲ್ಲಿ ಅರಳಿದ ಸಂತೋಷದ ಕಾವ್ಯಲೋಕ
    ಧರ್ಮ - ಸಂಸ್ಕೃತಿ - ಸಾಹಿತ್ಯ

    ಅಮೃತ ಸೋಮೇಶ್ವರರ ‘ತಂಬಿಲ’ – ಮೂರು ಭಾಷೆಗಳ ಮಧುರ ಸಂಗಮದಲ್ಲಿ ಅರಳಿದ ಸಂತೋಷದ ಕಾವ್ಯಲೋಕ

    navabharathaBy navabharathaOctober 14, 2026

    ಅಮೃತ ಸೋಮೇಶ್ವರರ ‘ತಂಬಿಲ’

    ಲೇಖಕರು: ರಘು ಇಡ್ಕಿದು

    ಅಮೃತ ಸೋಮೇಶ್ವರರು ನಮ್ಮ ನಾಡು ಕಂಡ ತುಳು ಮತ್ತು ಕನ್ನಡದ ಬಹುದೊಡ್ಡ ವಿದ್ವಾಂಸರು. ಅವರು ನನಗೆ ಬಹುಮುಖ್ಯ ಸ್ಫೂರ್ತಿ ಮತ್ತು ಪ್ರೇರಣೆ. ನಾನು ಮೆಚ್ಚಿದ ಮಹಾನ್ ಗುರುಗಳಲ್ಲಿ ಅವರೂ ಒಬ್ಬರು. ಪದವಿ ಹಾಗೂ ಸ್ನಾತಕೋತ್ತರ ಪದವಿಯ ಅವಧಿಯಲ್ಲಿ ತರಗತಿಗಳಲ್ಲಿ ಅವರು ನೀಡುತ್ತಿದ್ದ ಪಾಠಗಳು ನನಗೆ ಚೇತೋಹಾರಿಯಾಗಿದ್ದವು. ಅವರ ಆತ್ಮೀಯತೆ, ಪ್ರೀತಿ ಮತ್ತು ವಿಶ್ವಾಸ ದೊಡ್ಡದು. ವಿದ್ಯಾರ್ಥಿಯಾಗಿದ್ದಾಗ ಅವರ ಕವನ–ಕಥೆಗಳ ಪುಸ್ತಕಗಳನ್ನು ನೀಡಿ ಓದುವಂತೆ ಹೇಳುತ್ತಿದ್ದರು. ಅವರ ‘ತಂಬಿಲ’ ತುಳು ಕವನ ಸಂಕಲನವನ್ನೂ ನನಗೆ ನೀಡಿದ್ದರು.

    ಆಗ ವಿದ್ಯಾರ್ಥಿಯಾಗಿದ್ದ ನಾನು ಆ ಕೃತಿಯನ್ನು ಓದಿ, ಅದರ ಪರಿಚಯವನ್ನು ಕಾಲೇಜಿನ (ವಿವೇಕಾನಂದ ಕಾಲೇಜು, ಪುತ್ತೂರು) ಭಿತ್ತಿಪತ್ರಿಕೆಗಾಗಿ ಬರೆದಿದ್ದೆ. ಆ ಬರಹವನ್ನು ಈ ಕೃತಿಯಲ್ಲಿ ಪ್ರಕಟಿಸಲು ನನಗೆ ಅತೀವ ಸಂತೋಷವಾಗುತ್ತಿದೆ.

    ‘ತಂಬಿಲ’ ಅಮೃತ ಸೋಮೇಶ್ವರರು ಬರೆದ ತುಳು ಕವನ ಸಂಕಲನ. 1984ರಲ್ಲಿ ಪ್ರಕಟವಾದ ಇದು ಅಮೃತರ ಮೊದಲ ತುಳು ಕವನ ಸಂಕಲನ. ಅಮೃತರು ಈ ಸಂಕಲನದಲ್ಲಿ ಅತ್ಯುತ್ತಮವಾದ ತುಳು ಕವನಗಳನ್ನು ರಚಿಸಿದ್ದಾರೆ. ಬಹಳ ಸುಂದರವಾದ ತುಳು ಶಬ್ದಗಳು ಮತ್ತು ಮಾತುಗಳಿಂದ ಕೂಡಿರುವ ಈ ಕವನಗಳನ್ನು ಓದಿದಷ್ಟೂ ಮತ್ತೆ ಮತ್ತೆ ಓದಬೇಕೆಂಬ ಆಸೆ ಮೂಡುತ್ತದೆ.

    ಈ ಸಂಕಲನದಲ್ಲಿ ಒಟ್ಟು 28 ಕವನಗಳಿವೆ. ಹೆಚ್ಚಿನ ಕವನಗಳನ್ನು ರಾಗ ಸಂಯೋಜಿಸಿ ಹಾಡಬಹುದು. ಇನ್ನು ಕೆಲವು ಕವನಗಳು ಓದುವುದಕ್ಕೆ ಅನುಕೂಲವಾಗುವಂತಿವೆ.

    ‘ತಂಬಿಲ’ ಎಂಬ ಕವನದಲ್ಲಿ ಅಮೃತರು, ತಾವು ಮೂವರು ತಾಯಂದಿರ ಮಗ ಎಂದು ಹೇಳುತ್ತಾರೆ. ಮಲಯಾಳಂ ತಾಯಿ ಹೆತ್ತ ತಾಯಿಯಾದರೆ, ತುಳು ತಾಯಿ ಪ್ರೀತಿಯಿಂದ ಎತ್ತಿಕೊಂಡವಳು; ಕನ್ನಡ ತಾಯಿ ಬದುಕಿಗೆ ಬೆಳಕನ್ನು ತೋರಿಸಿ ಮುತ್ತನ್ನು ನೀಡಿದವಳು ಎಂಬ ಭಾವವನ್ನು ವ್ಯಕ್ತಪಡಿಸುತ್ತಾರೆ. ಹೀಗೆ ಮೂರು ಭಾಷೆಗಳ ಒಡನಾಟದಲ್ಲಿ ಬೆಳೆದ ಸಂತೋಷವನ್ನು ಈ ಕವನದಲ್ಲಿ ಸುಂದರವಾಗಿ ಕಟ್ಟಿಕೊಟ್ಟಿದ್ದಾರೆ.

    ‘ಮುಸುಕು ದೆತ್ತ್ದ್ ದಕ್ಕ್’ ಎಂಬ ಕವನದಲ್ಲಿ ನಮ್ಮೊಳಗಿರುವ ಜಡತ್ವವನ್ನು ಬಿಟ್ಟು ಎದ್ದು ನಿಲ್ಲಬೇಕು; ಆಗ ನಮ್ಮ ಬದುಕು ಸುಂದರವಾಗುತ್ತದೆ ಎಂಬ ಸಂದೇಶವಿದೆ. ಕಷ್ಟ–ನಷ್ಟಗಳನ್ನು ಮೆಟ್ಟಿ ನಿಂತು ಬದುಕಿನಲ್ಲಿ ಹೊಸ ಚೈತನ್ಯದ ಉಸಿರನ್ನು ತುಂಬಿಕೊಳ್ಳಬೇಕು ಎಂದು ಕವಿ ಹೇಳುತ್ತಾರೆ.

    ‘ಕುಡ್ತಲ್‌ಕ್ಕ್’ ಎಂಬ ಕವನದಲ್ಲಿ ಉಳ್ಳಾಯನಿಗೆ, ಅಂದರೆ ಧಣಿಗೆ, ನಮಸ್ಕಾರ ಹಾಕಿ ಒಕ್ಕಲಿನ ಬದುಕು ಹಾಳಾದದ್ದು ಸಾಕು; ಒಕ್ಕಲಿನವನೇ, ಎದ್ದು ನಿಲ್ಲು, ನಿನ್ನ ಸುಂದರ ಬದುಕನ್ನು ನೀನೇ ಕಂಡುಕೊಳ್ಳಬೇಕು ಎಂದು ಖಾರವಾಗಿ ನುಡಿಯುತ್ತಾರೆ. ಈ ಕವನ ಧಣಿ ಮತ್ತು ಒಕ್ಕಲಿನವರ ನಡುವಿನ ಸಂಬಂಧವನ್ನು ಚಿತ್ರಿಸುವುದರ ಜೊತೆಗೆ, ಧಣಿಯ ಶೋಷಣೆಯ ವಿರುದ್ಧ ಎದ್ದು ನಿಲ್ಲುವಂತೆ ಪ್ರೇರೇಪಿಸುತ್ತದೆ.

    ‘ಪಗಲ್ ಮೈಲಿಗೆ’ ಎಂಬ ಕವನ ಬಹಳ ಮಾರ್ಮಿಕವಾಗಿದೆ. ಕೆಳಜಾತಿಯ ಹೆಣ್ಣೊಬ್ಬಳು ದೇವಸ್ಥಾನದೊಳಗೆ ಬಂದಾಗ ಮೈಲಿಗೆಯಾಗುತ್ತಾಳೆ; ಆದರೆ ರಾತ್ರಿ ಅದೇ ಹೆಣ್ಣನ್ನು ಮಲ್ಲಿಗೆ ಎಂದು ಭಾವಿಸಿ ತನ್ನ ಕಾಮದಾಟಕ್ಕೆ ಬಳಸಿಕೊಳ್ಳುವ ದೇವಸ್ಥಾನದ ಪೂಜಾರಿ ಮಾತ್ರ ಮೈಲಿಗೆಯಾಗುವುದಿಲ್ಲವೇ? ಎಂಬ ಪ್ರಶ್ನೆಯನ್ನು ಕವಿ ಎತ್ತುತ್ತಾರೆ. ಸಮಾಜದಲ್ಲಿರುವ ಜಾತಿ ತಾರತಮ್ಯ ಮತ್ತು ದ್ವಂದ್ವ ನೀತಿಯನ್ನು ಈ ಕವನ ಪರಿಣಾಮಕಾರಿಯಾಗಿ ಪ್ರಶ್ನಿಸುತ್ತದೆ.

    ‘ಕಾರ್ತೆಲ್ದ ದಿಬ್ಬಣ’ ಕವನವು ಮಳೆಗಾಲದ ಸುಂದರ ಪ್ರಕೃತಿಯನ್ನು ವರ್ಣಿಸುತ್ತದೆ. ಮಳೆ ಬರುವ ಸಂಭ್ರಮವನ್ನು ಅಮೃತರು ಆಕಾಶದ ದಿಬ್ಬಣದ ರೂಪದಲ್ಲಿ ಚಿತ್ರಿಸಿದ್ದಾರೆ. ಆಕಾಶದ ಈ ದಿಬ್ಬಣ ಬಂದು ಭೂಮಿ ಎಂಬ ಹೆಣ್ಣನ್ನು ಸೇರುತ್ತದೆ ಎಂಬ ಕಲ್ಪನೆ ಅತ್ಯಂತ ಸೊಗಸಾಗಿದೆ.

    ‘ಆ ಪುರಪ್ಪ ಕೊಯೊಡ್ಡಿ’ ಕವನದಲ್ಲಿ ಆ ಹೂವನ್ನು ಕೀಳದಿರು ಹೆಣ್ಣೇ, ಅದೂ ನಿನ್ನಂತೆಯೇ ಈ ಲೋಕದ ಕಣ್ಣಾಗಿದೆ ಎಂಬ ಭಾವ ವ್ಯಕ್ತವಾಗುತ್ತದೆ. ಆ ಹೂವಿಗೂ ಕನಸುಗಳಿವೆ; ಅದು ಯಾವ ದುಂಬಿಗಾಗಿ ಕಾಯುತ್ತಿದೆಯೋ ಎಂಬ ಪ್ರಶ್ನೆಯ ಮೂಲಕ ಹೂವಿಗೂ ಮನುಷ್ಯರಂತೆಯೇ ಭಾವನೆಗಳಿವೆ ಎಂಬ ಅರ್ಥವನ್ನು ಕವಿ ನೀಡುತ್ತಾರೆ.

    ‘ಜಾತ್ರೆದಾನಿದ ನೆನಪು’ ಎಂಬ ಕವನ ಬಹಳ ಮನಮೋಹಕವಾಗಿದೆ. ಗಂಡ–ಹೆಂಡತಿ ಪರಸ್ಪರ ಮಾತನಾಡಿಕೊಳ್ಳುವಂತೆ ಸಾಗುವ ಈ ಕವನದಲ್ಲಿ, ಮದುವೆಯಾಗಿ ಹಲವು ವರ್ಷಗಳ ನಂತರ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕುವ ದಂಪತಿಯ ಚಿತ್ರಣವಿದೆ. ಊರ ಜಾತ್ರೆಯ ದಿನ ಅವಳನ್ನು ಕಂಡು ಮರುಳಾದದ್ದು, ಆಕೆಗೆ ಮಲ್ಲಿಗೆ ತೆಗೆದುಕೊಡಲು ಹೂವಿನ ಅಂಗಡಿಗೆ ಹೋಗಿ ಬೆಲೆ ಕೇಳಿದ್ದು, ಕಡಿಮೆ ಬೆಲೆಗೆ ಕೇಳಿದಾಗ ಉಂಟಾದ ಪ್ರಸಂಗ, ಸಂತೆಯಲ್ಲಿ ನಿಂತಿದ್ದಾಗ ಅವಳು ಬಂದು ಬಳೆಗಳ ಸದ್ದು ಮಾಡಿದ್ದು, ತೇರು ಎಳೆಯುವಾಗ ಆತ ಜಾರಿ ಬಿದ್ದದ್ದನ್ನು ನೋಡಿ ಅವಳು ನಕ್ಕಿದ್ದು—ಹೀಗೆ ಹಳೆಯ ನೆನಪುಗಳನ್ನು ದಂಪತಿ ಮೆಲುಕು ಹಾಕುವ ಸುಂದರ ಸಾಂಸಾರಿಕ ಕವನವಿದು.

    ಇಷ್ಟೇ ಅಲ್ಲದೆ, ‘ತುಳುನಾಡ ತುಡರ್’, ‘ಚಿಲ್ಲರೆ ಜನೊ’, ‘ಒಂಜಿ ಜಾಹೀರಾತ್’, ‘ತುಳುವಪ್ಪೆನ ಎತೆ’, ‘ರಾಷ್ಟ್ರ ಕವಿನ್ ಇಲ್ಲ್’, ‘ಬಿತ್ತಿಲ್ದಬೂರು’ ಮುಂತಾದ ಇನ್ನೂ ಕೆಲವು ಕವನಗಳು ಉತ್ತಮ ವಿಚಾರಗಳಿಂದ ಕೂಡಿವೆ. ಇವು ತುಳು ಭಾಷೆಯ ಬಗ್ಗೆ ಮತ್ತು ತುಳು ಪದ್ಯಗಳ ಬಗ್ಗೆ ಓದುಗರಲ್ಲಿ ವಿಶೇಷ ಆಸಕ್ತಿಯನ್ನು ಬೆಳೆಸುವಂತಿವೆ.

    ಅಮೃತ ಸೋಮೇಶ್ವರ ಅವರ ‘ಜಾತ್ರೆದಾನಿದ ನೆನಪು’ ಹಾಡಿಗೆ ಹೊಸ ರೂಪ

    ಖ್ಯಾತ ಸಾಹಿತಿ ಅಮೃತ ಸೋಮೇಶ್ವರ ಅವರ ‘ಜಾತ್ರೆದಾನಿದ ನೆನಪು’ ಎಂಬ ಜನಪ್ರಿಯ ಹಾಡು ಇದೀಗ ಹೊಸ ಸಂಗೀತ ಸಂಯೋಜನೆಯೊಂದಿಗೆ ಮತ್ತೆ ಕೇಳುಗರ ಮುಂದೆ ಬರಲು ಸಿದ್ಧವಾಗಿದೆ. ಈ ಹಿಂದೆ ಕ್ಯಾಸೆಟ್ ರೂಪದಲ್ಲಿ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿದ್ದ ಈ ಹಾಡು ಪ್ರಸ್ತುತ ಸುಲಭವಾಗಿ ಲಭ್ಯವಿಲ್ಲದ ಹಿನ್ನೆಲೆಯಲ್ಲಿ, ಹೊಸ ರೂಪದಲ್ಲಿ ಮರುಸೃಷ್ಟಿಸಲಾಗಿದೆ.

    LITREATURE
    Previous Article25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಿದ್ಧ! ವಿಜಯೇಂದ್ರ ಸ್ಫೋಟಕ ಹೇಳಿಕೆ25 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರಲು ಸಿದ್ಧ! ವಿಜಯೇಂದ್ರ ಸ್ಫೋಟಕ ಹೇಳಿಕೆ
    Next Articleಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ: ಭಕ್ತಿ, ಇತಿಹಾಸ ಮತ್ತು ಸಮಾನತೆಯ ಸಂದೇಶ ಸಾರುವ ಪುಣ್ಯಕ್ಷೇತ್ರ!ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ: ಭಕ್ತಿ, ಇತಿಹಾಸ ಮತ್ತು ಸಮಾನತೆಯ ಸಂದೇಶ ಸಾರುವ ಪುಣ್ಯಕ್ಷೇತ್ರ!

    Related Posts

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    71 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ: ಕಾಗೋಡು ತಿಮ್ಮಪ್ಪ, ಬಿ.ವಿ. ಆಚಾರ್ಯ ಸೇರಿ ಗಣ್ಯರಿಗೆ ಗೌರವ

    October 30, 2026

    ಶಬರಿಮಲೆ ಪೊಲೀಸರ ಲಗೇಜ್ ಭತ್ಯೆ ₹600ಕ್ಕೆ ಏರಿಕೆ ; ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿಗೆ ಅನುಕೂಲ

    October 29, 2026

    ಕನ್ನಡ ಸಾಹಿತ್ಯ ಪರಿಷತ್‌ಗೆ ‘ಅಧಿಕಾರಿಗಳ ಆಡಳಿತ’ದಿಂದ ಮುಕ್ತಿ ಬೇಕು: ಸಿದ್ಧರಾಮಯ್ಯ ಅಧ್ಯಕ್ಷ ಸ್ಥಾನಕ್ಕೆ ಜಾಣಗೆರೆ ವೆಂಕಟರಾಮಯ್ಯ ಸ್ಪರ್ಧೆ

    October 28, 2026

    ಜಿಲ್ಲಾ ಸರ್ಕಾರಿ ವಾಹನ ಚಾಲಕರ ಕೇಂದ್ರ ಸಂಘದ ವತಿಯಿಂದ ಆಯುಧ ಪೂಜೆ

    October 23, 2026
    Latest Posts

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026

    ‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?

    November 2, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026
    ತಾಜಾ ಸುದ್ದಿಗಳು

    ‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?

    November 2, 2026

    ನ.6, 7ರಂದು ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ

    November 2, 2026

    ಸೋಂದೆ ಜೈನ ಮಠ ; ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ₹50 ಲಕ್ಷ ದೇಣಿಗೆ

    November 2, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.