Close Menu
    Latest Posts

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಅತ್ಯಾಚಾರ ಪ್ರಕರಣ: ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸತೀಶ್ ಪಾತ್ರಿ ಬಂಧನ ಬೆಂಗಳೂರು ಜೆ.ಪಿ. ನಗರದಲ್ಲಿ ಪೊಲೀಸರ ಕಾರ್ಯಾಚರಣೆ – ಪೊಲೀಸ್ ಸಿಬ್ಬಂದಿಯಿಂದಲೇ ಮಾಹಿತಿ ಪಡೆದು ಪೊಲೀಸರ ಕಣ್ತಪ್ಪಿಸುತ್ತಿದ್ದ ಆರೋಪ
    ಸುದ್ದಿ

    ಅತ್ಯಾಚಾರ ಪ್ರಕರಣ: ಒಂದೂವರೆ ತಿಂಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಸತೀಶ್ ಪಾತ್ರಿ ಬಂಧನ ಬೆಂಗಳೂರು ಜೆ.ಪಿ. ನಗರದಲ್ಲಿ ಪೊಲೀಸರ ಕಾರ್ಯಾಚರಣೆ – ಪೊಲೀಸ್ ಸಿಬ್ಬಂದಿಯಿಂದಲೇ ಮಾಹಿತಿ ಪಡೆದು ಪೊಲೀಸರ ಕಣ್ತಪ್ಪಿಸುತ್ತಿದ್ದ ಆರೋಪ

    navabharathaBy navabharathaOctober 14, 2026

     

    ಚಿಕ್ಕಮಗಳೂರು: ದೆವ್ವ ಬಿಡಿಸುವ ನೆಪದಲ್ಲಿ ಮಹಿಳೆಯ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪಕ್ಕೆ ಸಂಬಂಧಿಸಿದಂತೆ, ಕಳೆದ ಒಂದೂವರೆ ತಿಂಗಳಿನಿಂದ ತಲೆಮರೆಸಿಕೊಂಡಿದ್ದ ಸತೀಶ್ ಪಾತ್ರಿ ಎಂಬಾತನನ್ನು ಪೊಲೀಸರು ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಿದ್ದಾರೆ.

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಕನಹಡ್ಲು ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕನಾಗಿರುವ ಸತೀಶ್ ಪಾತ್ರಿ ವಿರುದ್ಧ ಹಾಸನ ಮೂಲದ ಮಹಿಳೆಯೊಬ್ಬರು ಕೊಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತೀರ್ಥಹಳ್ಳಿಯ ಕುದುರೆಗುಂಡಿಗೆ ಕರೆದೊಯ್ದು, ಭೂತ-ದೆವ್ವ ಬಿಡಿಸುವುದಾಗಿ ನಂಬಿಸಿ ನಿರಂತರ ಅತ್ಯಾಚಾರ ಎಸಗಿರುವುದಾಗಿ ದೂರಿನಲ್ಲಿ ಆರೋಪಿಸಲಾಗಿದೆ.

    ಅಲ್ಲದೆ, ಅಪ್ರಾಪ್ತ ಬಾಲಕಿಯೊಬ್ಬಳಿಗೆ ಭೂತ ಬಿಡಿಸುವ ನೆಪದಲ್ಲಿ ಕೋಳಿ ರಕ್ತ ಕುಡಿಯುವಂತೆ ಒತ್ತಾಯಿಸಿದ ಆರೋಪವೂ ಕೇಳಿಬಂದಿದೆ. ಈ ಸಂಬಂಧ ಕೊಪ್ಪ ಹಾಗೂ ಎನ್.ಆರ್.ಪುರ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದು, ಬ್ಲ್ಯಾಕ್ ಮ್ಯಾಜಿಕ್ ನಿಷೇಧ ಕಾಯ್ದೆಯಡಿ ಕೂಡ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

    ಪ್ರಕರಣ ದಾಖಲಾಗುತ್ತಿದ್ದಂತೆ ಸತೀಶ್ ಪಾತ್ರಿ ತಲೆಮರೆಸಿಕೊಂಡಿದ್ದ. ಪೊಲೀಸರ ಚಲನವಲನಗಳ ಬಗ್ಗೆ ಮಾಹಿತಿ ಪಡೆದು, ಪೊಲೀಸರು ತನ್ನನ್ನು ಬಂಧಿಸಲು ಬರುವ ಮುನ್ನವೇ ಸ್ಥಳ ಬದಲಾಯಿಸುತ್ತಿದ್ದ ಎನ್ನಲಾಗಿದೆ.

    ಎನ್.ಆರ್.ಪುರ ಪೊಲೀಸ್ ಠಾಣೆಯ ಪೇದೆ ಕಾಂತೇಶ್ ಆರೋಪಿಗೆ ಪೊಲೀಸ್ ಇಲಾಖೆಯ ಮಾಹಿತಿಯನ್ನು ನೀಡುತ್ತಿದ್ದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯ್ಮಾ ಅವರು ಕಾಂತೇಶ್‌ನನ್ನು ಅಮಾನತುಗೊಳಿಸಿದ್ದರು.

    ಪೊಲೀಸರಿಗೆ ಸವಾಲಾಗಿದ್ದ ಈ ಪ್ರಕರಣದಲ್ಲಿ ಇದೀಗ ಆರೋಪಿ ಸತೀಶ್ ಪಾತ್ರಿಯನ್ನು ಬೆಂಗಳೂರಿನ ಜೆ.ಪಿ. ನಗರದಲ್ಲಿ ಬಂಧಿಸಲಾಗಿದ್ದು, ಪ್ರಕರಣದ ಕುರಿತು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

    CRIME
    Previous Articleಬಯಲುಸೀಮೆ ಭಾಗದಲ್ಲಿ ಹೆಚ್ಚಿದ ಚಿರತೆ ಕಾಟ: ಗ್ರಾಮಸ್ಥರಲ್ಲಿ ಆತಂಕ  ಕಡೂರು: ಮನೆ ಸಮೀಪವೇ ಚಿರತೆ ಪ್ರತ್ಯಕ್ಷ; ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಬಯಲುಸೀಮೆ ಭಾಗದಲ್ಲಿ ಹೆಚ್ಚಿದ ಚಿರತೆ ಕಾಟ: ಗ್ರಾಮಸ್ಥರಲ್ಲಿ ಆತಂಕ ಕಡೂರು: ಮನೆ ಸಮೀಪವೇ ಚಿರತೆ ಪ್ರತ್ಯಕ್ಷ; ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ
    Next Articleತಿರುವೈಲು ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿಗೆ ₹3 ಕೋಟಿಗೂ ಅಧಿಕ ಅನುದಾನ ಬಿಡುಗಡೆ  ಆಶ್ರಯ ನಗರ, ಸದಾಶಿವನಗರ ಹಾಗೂ ಅಮೃತನಗರ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಕಾಂಕ್ರಿಟೀಕರಣ ಕಾಮಗಾರಿಗೆ ಚಾಲನೆತಿರುವೈಲು ವಾರ್ಡಿನಲ್ಲಿ ರಸ್ತೆ ಅಭಿವೃದ್ಧಿಗೆ ₹3 ಕೋಟಿಗೂ ಅಧಿಕ ಅನುದಾನ ಬಿಡುಗಡೆ ಆಶ್ರಯ ನಗರ, ಸದಾಶಿವನಗರ ಹಾಗೂ ಅಮೃತನಗರ ಮುಖ್ಯ ರಸ್ತೆಯ ಅಗಲೀಕರಣ ಮತ್ತು ಕಾಂಕ್ರಿಟೀಕರಣ ಕಾಮಗಾರಿಗೆ ಚಾಲನೆ

    Related Posts

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಮಂಗಳೂರಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: 173 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    November 1, 2026

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026

    ಕನ್ನಡ ರಾಜ್ಯೋತ್ಸವದ ಅಂಗವಾಗಿ ಸ್ವಚ್ಛತಾ ಅಭಿಯಾನ

    November 1, 2026
    Latest Posts

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026
    ತಾಜಾ ಸುದ್ದಿಗಳು

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಮಂಗಳೂರಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: 173 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    November 1, 2026

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.