Close Menu
    Latest Posts

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಮಂಗಳೂರು ದಸರಾ ಮಹೋತ್ಸವ ಮುಖ್ಯಮಂತ್ರಿಗಳಿಂದ ಚಾಲನೆ
    ಸುದ್ದಿ

    ಮಂಗಳೂರು ದಸರಾ ಮಹೋತ್ಸವ ಮುಖ್ಯಮಂತ್ರಿಗಳಿಂದ ಚಾಲನೆ

    navabharathaBy navabharathaOctober 9, 2026

    ಕರಾವಳಿಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಹೆಮ್ಮೆಯ ಪ್ರತೀಕವಾದ ಐತಿಹಾಸಿಕ ಮಂಗಳೂರು ದಸರಾ ಹಾಗೂ ನವರಾತ್ರಿ ಮಹೋತ್ಸವ-2026, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅಕ್ಟೋಬರ್ 11ರಿಂದ 22ರವರೆಗೆ ಅತ್ಯಂತ ವೈಭವದಿಂದ ಜರುಗಲಿದೆ. ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ವಿತ್ತ ಸಚಿವ ಬಿ. ಜನಾರ್ದನ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಉತ್ಸವ ನಡೆಯಲಿದ್ದು, ಭಕ್ತಿಸಾಗರಕ್ಕೆ ಸಕಲ ಸಿದ್ಧತೆಗಳು ನಡೆದಿವೆ.

    ಕ್ಷೇತ್ರದ ಭವ್ಯ ದರ್ಬಾರ್ ಹಾಲ್‌ನಲ್ಲಿ ಶ್ರೀ ಮಹಾಗಣಪತಿ, ಶ್ರೀ ಆದಿಶಕ್ತಿ, ನವದುರ್ಗೆಯರು ಹಾಗೂ ಜ್ಞಾನದಾಯಿನಿ ಶ್ರೀ ಶಾರದಾ ಮಾತೆಯ ನಯನಮನೋಹರ ಮೂರ್ತಿಗಳ ಪ್ರತಿಷ್ಠಾಪನೆ ಮತ್ತು ಆರಾಧನೆ, ಭಕ್ತಿಪೂರ್ಣ ಭಜನೆ, ನೃತ್ಯ-ಸಂಗೀತ ವೈಭವ, ಕ್ರೀಡಾಕೂಟಗಳು ಮತ್ತು ಸಮೃದ್ಧ ಜಾನಪದ ಕಲಾ ಪ್ರಕಾರಗಳು ಅನಾವರಣಗೊಳ್ಳಲಿವೆ.

    ಅ.11ರಂದು ವೈದಿಕ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 12 ಗಂಟೆಗೆ ಶ್ರೀ ಶಾರದಾ ಮಾತೆ ಮತ್ತು ನವದುರ್ಗೆಯರ ಪ್ರತಿಷ್ಠಾಪನೆ ನೆರವೇರಲಿದೆ. ಅ.12ರಂದು ಸಂಜೆ 6.30ಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಮಂಗಳೂರು ದಸರಾ ಮಹೋತ್ಸವಕ್ಕೆ ಅದ್ದೂರಿ ಚಾಲನೆ ಸಿಗಲಿದೆ. ಕರ್ನಾಟಕದ ವಿವಿಧ ಇಲಾಖೆಗಳ ಸಚಿವರು ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ. ಅ.21ರಂದು ಸಂಜೆ 4:00 ಗಂಟೆಗೆ ಮಂಗಳೂರು ದಸರಾ ಮಹೋತ್ಸವದ ಐತಿಹಾಸಿಕ ಶೋಭಾಯಾತ್ರೆಗೆ ಚಾಲನೆ ಸಿಗಲಿದೆ.

    ಪ್ರತಿದಿನ ಚಂಡಿಕಾಹೋಮ
    ಅ.12ರಿಂದ 20ರವರೆಗೆ ಪ್ರತಿದಿನವೂ ಬೆಳಗ್ಗೆ 8.30ಕ್ಕೆ ಶ್ರೀಕ್ಷೇತ್ರದಲ್ಲಿ ಚಂಡಿಕಾಹೋಮ ನೆರವೇರಲಿದೆ. ಅ.17ರಂದು ಸಾಮೂಹಿಕ ವಿಶೇಷ ಚಂಡಿಕಾಹೋಮ ಜರುಗಲಿದ್ದು, ಬೆಳಗ್ಗೆ 11.30ಕ್ಕೆ ಪೂರ್ಣಾಹುತಿ ನೆರವೇರಲಿದೆ. ಸಾರ್ವಜನಿಕರಿಗೆ ಚಂಡಿಕಾಹೋಮ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.

    ‘ದಸರಾ ಕಲಾಝೇಂಕಾರ’
    ಕ್ಷೇತ್ರದ ಸಂತೋಷಿ ಕಲಾಮಂಟಪದಲ್ಲಿ ಅ.11ರಿಂದ 20ರವರೆಗೆ ನಿತ್ಯ ಮಧ್ಯಾಹ್ನ 2.30ರಿಂದ ರಾತ್ರಿ 11.30ರವರೆಗೆ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮತ್ತು ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ರಸದೌತಣ ಇರಲಿದೆ. ಇದೇ ವೇದಿಕೆಯಲ್ಲಿ ಪ್ರತಿದಿನವೂ ಸಮಾಜದ ಸಾಧಕ ಮಹಿಳೆಯರಿಗೆ ‘ಅಸಾಮಾನ್ಯ ಸ್ತ್ರೀ’ ಪುರಸ್ಕಾರ ನೀಡಿ ಗೌರವಿಸಲಾಗುತ್ತದೆ.

    ವಿವಿಧ ಸ್ಪರ್ಧೆ, ಕವಿಗೋಷ್ಠಿ
    ಈ ಬಾರಿಯ ದಸರಾ ಮಹೋತ್ಸವದಲ್ಲಿ ವೈವಿಧ್ಯಮಯ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಅ.12ರಂದು ರಾಜ್ಯಮಟ್ಟದ ದಸರಾ ಕವಿಗೋಷ್ಠಿ, ಕಥೆ ಹಾಗೂ ಕವನ ಸ್ಪರ್ಧೆ, 13ರಂದು ಸಂಜೆ 7.30ರಿಂದ ’ರುದ್ರತಾಂಡವಮ್’ ರಾಜ್ಯಮಟ್ಟದ ಭಕ್ತಿಪ್ರಧಾನ ಸಮೂಹ ನೃತ್ಯ ಸ್ಪರ್ಧೆ ಸೀಸನ್-2 ನಡೆಯಲಿದೆ.
    15ರಂದು ಮಕ್ಕಳಿಗಾಗಿ ’ಮಕ್ಕಳ ದಸರಾ’ ಜರುಗಲಿದ್ದು, ಬೆಳಗ್ಗೆ 9 ಗಂಟೆಗೆ ಕಾರ್ಯಕ್ರಮ ಉದ್ಘಾಟನೆಗೊಳ್ಳಲಿದೆ. ಮಕ್ಕಳಿಗೆ ಭಕ್ತಿಗೀತೆ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ದೇಶಭಕ್ತಿಗೀತೆ ಸ್ಪರ್ಧೆಗಳು ನಡೆಯಲಿವೆ. ಅ.16ರಂದು ’ಮುದ್ದು ಶಾರದೆ’ ಸ್ಪರ್ಧೆ, ಅ.18ರಂದು ದಸರಾ ಮ್ಯಾರಥಾನ್ ಎಡಿಷನ್-4, ’ಕಿನ್ನಿಪಿಲಿ’ ಸೀಸನ್-2 ಜರುಗಲಿವೆ.
    19ರಂದು ಮಹಿಳೆಯರಿಗಾಗಿಯೇ ’ಮಹಿಳಾ ದಸರಾ’ ನಡೆಯಲಿದ್ದು, ಭರತನಾಟ್ಯ ಸ್ಪರ್ಧೆ, ಬೆಂಕಿ ರಹಿತ ಅಡುಗೆ, ರಂಗೋಲಿ, ಮೆಹಂದಿ, ಸಮೂಹ ಗಾಯನ, ಹೂ ಕಟ್ಟುವ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 8 ಗಂಟೆಗೆ ಮಹಿಳೆಯರಿಂದ ಸಮೂಹ ಗರ್ಭಾ ದಾಂಡಿಯಾ ನೃತ್ಯ ನಡೆಯಲಿದೆ. 20ರಂದು ’ದಸರಾ ರಂಗಾಂತರಂಗ’ ಸಾಂಸ್ಕೃತಿಕ ವೈವಿಧ್ಯಮಯ ಸ್ಪರ್ಧೆಗಳು ಜರುಗಲಿವೆ.

    ದಸರ
    Previous Articleಬಾಕ್ಸೈಟ್ ಅಂಶ ಪತ್ತೆ ?; ಪರಿಶೀಲನೆಗೆ ಕೇಂದ್ರದ ತಜ್ಞರ ತಂಡಬಾಕ್ಸೈಟ್ ಅಂಶ ಪತ್ತೆ ?; ಪರಿಶೀಲನೆಗೆ ಕೇಂದ್ರದ ತಜ್ಞರ ತಂಡ
    Next Articleಕಡಬ;  ಪ್ರಗತಿ ಪರಿಶೀಲನಾ ಸಭೆ ಹಾಗೂ ಬೀಳ್ಕೊಡುಗೆ ಸಮಾರಂಭಕಡಬ; ಪ್ರಗತಿ ಪರಿಶೀಲನಾ ಸಭೆ ಹಾಗೂ ಬೀಳ್ಕೊಡುಗೆ ಸಮಾರಂಭ

    Related Posts

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026

    ನ.6, 7ರಂದು ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ

    November 2, 2026

    ಸೋಂದೆ ಜೈನ ಮಠ ; ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ₹50 ಲಕ್ಷ ದೇಣಿಗೆ

    November 2, 2026

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026
    Latest Posts

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026
    ತಾಜಾ ಸುದ್ದಿಗಳು

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026

    ‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?

    November 2, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.