ಇಂಜಿನಿಯರ್ ಅಥವಾ ಡಾಕ್ಟರ್ ಆಗುವ ಕನಸು ಕಾಣುವ ಇಂದಿನ ಯುವ ಸಮುದಾಯಕ್ಕೆ ಸವಾಲು ಎನ್ನುವಂತೆ ಈ ಯುವಕ ತನ್ನ 15ನೇ ವಯಸ್ಸಿಗೆ ಹೈನುಗಾರಿಕೆ ಆರಂಭಿಸಿದ್ದಾನೆ ಈಗ ಅವನಿಗೆ 18 ವರ್ಷ ವಯಸ್ಸು ಅಂದು ತಾನು ಆಯ್ಕೆ ಮಾಡಿಕೊಂಡಿದ್ದ ಹೈನುಗಾರಿಕೆ ವ್ಯವಹಾರ ಇಂದು ತಿಂಗಳಿಗೆ 5 ರಿಂದ 6 ಲಕ್ಷ ರೂಪಾಯಿ ದುಡಿಯುತ್ತಿದೆ.ಅದನ್ನು ಸಕಾರ ಗೊಳಿಸಿ ಯಶಸ್ವಿಯಾದ ಯುವಕ ಪಂಜಾಬ್ನ ಸೋಹಲ್ಪ್ರೀತ್ ಸಿಂಗ್ ಸಿಧು.
ಇಂದಿನ ಯುವ ಸಮುದಾಯ what next ಮುಂದೇನು ಎಂಬ ಪ್ರಶ್ನೆಯೊಂದಿಗೆ ಹಲವಾರು ಕನಸುಗಳನ್ನು ಕಟ್ಟಿಕೊಳ್ಳುತ್ತಾರೆ. ಇನ್ನೂ ಕೆಲವರು ವಿದೇಶದಲ್ಲಿ ವ್ಯಾಸಾಂಗ ಮಾಡಿ ಅಲ್ಲೆ ಉದ್ಯೋಗ ಆರಸಿಕೊಳ್ಳುವ ಆಲೋಚನೆಯಲ್ಲಿ ಇರುತ್ತಾರೆ
ಪಂಜಾಬ್ನ ಈ ಯುವಕ ಯಾವ ಐಟಿ ಬಿಟಿಗೂ ಕಡಿಮೆ ಇಲ್ಲದಂತೆ ಹಸು ಹಾಗು ಎಮ್ಮೆ ಸಾಕಾಣಿಕೆಯಿಂದ ಪ್ರತಿ ತಿಂಗಳು 5 ರಿಂದ 6 ಲಕ್ಷ ರೂಪಾಯಿಗಳನ್ನು ಗಳಿಸುತ್ತಿದ್ದಾನೆ. ತನ್ನ 15 ನೇ ವಯಸ್ಸಲ್ಲಿ ಓಂದು ಜಾನವಾರದೊಂದಿಗೆ ಡೈರಿ ಫಾರ್ಮ್ ಆರಂಭಿಸಿದ ಸಿದ್ದು ಅದರಿಂದ ಬಂದ ಪ್ರತಿ ರೂಪಾಯಿಯನ್ನು ಅದರಲ್ಲೆ ವಿನಿಯೋಗಿಸುತ್ತ ಪಂಜಾಬ್ನ ಗ್ರಾಮೀಣ ಪ್ರದೇಶದ ದೊಡ್ಡ ಹೈನೋದ್ಯಮಿಯಾಗುವ ಕನಸು ಕೊಟ್ಟಿಕೊಂಡು ಸಾಕಾರ ಗೊಳಿಸಿ ಇಂದು ತಿಂಗಳಿಗೆ 6 ಲಕ್ಷ ಆದಾಯ ಗಳಿಸುತ್ತಿದ್ದಾನೆ.



