ತೋತಾಪುರಿ ಮಾವಿನ ಬೆಲೆ ತೀವ್ರ ಕುಸಿತದಿಂದ ಸಂಕಷ್ಟಕ್ಕೆ ಈಡಾಗಿದ್ದ ಆಂಧ್ರದ ರೈತರು ಮೂಲತಃ ಚಿತ್ತೂರು ಜಿಲ್ಲೆಯವರಾದ ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ವಿರುದ್ದ ಅಸಮಧಾನ ವ್ಯಕ್ತಪಡಿಸಿದ್ದರು.ಸ್ವಂತ ಜಿಲ್ಲೆಯ ಮಾವು ಬೆಳೆಗಾರರನ್ನು ಕಾಪಾಡುವಂತೆ ಪ್ರತಿ ಕೆಜಿಗೆ 12 ರೂಪಾಯಿಂದ 16 ರೂಪಾಯಿ ಬೆಂಬಲ ಬೆಲೆ ನೀಡುವಂತೆ ಅಗ್ರಹಿಸಿದ್ದರು.
ಇದಕ್ಕೆ ಸ್ಪಂದಿಸಿರುವ ಆಂಧ್ರ ಸರ್ಕಾರ ತೋತಾಪುರಿ ಮಾವಿನಕಾಯಿಗೆ ಕೆಜಿಗೆ 4 ರೂ. ಬೆಂಬಲ ಬೆಲೆ ಘೋಷಿಸಿದೆ. ಸಾವಿರಾರು ಮಾವಿನ ರೈತರಿಗೆ ಅಲ್ಪ ಪಟ್ಟದ ಪರಿಹಾರ ಸಿಕ್ಕಂತಾಗಿದೆ ಮಾವಿನಕಾಯಿ ಕೊಯ್ಲು ನಡೆಯುತ್ತಿದ್ದು ಬೆಳೆಗಾರರ ಮೇಲಿನ ಆರ್ಥಿಕ ಹೊರೆ ಕಡಿಮೆ ಮಾಡುವಲ್ಲಿ ಸರ್ಕಾರದ ನಿರ್ಧಾರ ನಿರ್ಣಾಯಕವಾಗಲಿದೆ ಎಂದು ಬೆಳೆಗಾರರು ಹೇಳುತ್ತಾರೆ.



