Close Menu
    Latest Posts

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ

    Nava Bharatha MediaNava Bharatha Media
    Home » ಕಾಸರಗೋಡು ಕನ್ನಡ ಗ್ರಾಮಕ್ಕೆ ಆದಿಚುಂಚನಗಿರಿ ಮಠದ ಪ್ರತಿನಿಧಿಗಳ ಭೇಟಿ
    ಸುದ್ದಿ

    ಕಾಸರಗೋಡು ಕನ್ನಡ ಗ್ರಾಮಕ್ಕೆ ಆದಿಚುಂಚನಗಿರಿ ಮಠದ ಪ್ರತಿನಿಧಿಗಳ ಭೇಟಿ

    navabharathaBy navabharathaNovember 4, 2026

    ಕಾಸರಗೋಡು: ಕೇರಳ ರಾಜ್ಯ ಕನ್ನಡ ಭಾಷಾ ಅಲ್ಪಸಂಖ್ಯಾತರ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಸಂಘಟನೆಯಾದ ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.), ಕಾಸರಗೋಡು ಇದರ 36ನೇ ಸಂಸ್ಥಾಪನಾ ವರ್ಷಾಚರಣೆ ಹಾಗೂ ಪ್ರತಿಷ್ಠಾನದ ಅಧ್ಯಕ್ಷ ಶಿವರಾಮ ಕಾಸರಗೋಡು ಅವರ 61ನೇ ಜನ್ಮದಿನದ ಅಂಗವಾಗಿ ನಡೆಯುತ್ತಿರುವ 61ನೇ ಕನ್ನಡ ಯಾತ್ರೆಗೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರತಿನಿಧಿಗಳು ಭೇಟಿ ನೀಡಿ ಶುಭ ಹಾರೈಸಿದರು.
    ಹಾಸನದ ಶ್ರೀ ಕ್ಷೇತ್ರ ಕಬ್ಬಳ್ಳಿ ಶ್ರೀ ಬಸವೇಶ್ವರ ಸ್ವಾಮಿ ಪುಣ್ಯಕ್ಷೇತ್ರದ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ ಶ್ರೀ ಶಂಭುನಾಥ ಸ್ವಾಮೀಜಿಯವರ ಶುಭಾಶೀರ್ವಾದದೊಂದಿಗೆ, ಅವರ ಆದೇಶದ ಮೇರೆಗೆ ಮಠದ ಪ್ರತಿನಿಧಿಗಳಾದ ಕೀರ್ತಿ ಎಚ್.ಆರ್. ಗೌಡ, ದಿವಾಕರ ಕೆ.ಜೆ., ವಿವೇಕ್ ಬಿ.ಎನ್. ಹಾಗೂ ಪ್ರಭಾಕರ ಡಿ.ಕೆ. ಅವರು 2026ರ ನವೆಂಬರ್ 4ರಂದು ಕಾಸರಗೋಡು ಕನ್ನಡ ಗ್ರಾಮಕ್ಕೆ ಆಗಮಿಸಿ ಶಿವರಾಮ ಕಾಸರಗೋಡು ಅವರಿಗೆ ಜನ್ಮದಿನದ ಶುಭಾಶಯಗಳನ್ನು ಸಲ್ಲಿಸಿದರು.
    ಈ ಸಂದರ್ಭದಲ್ಲಿ ನವೆಂಬರ್ 28 ಮತ್ತು 29ರಂದು ಕಾಸರಗೋಡು ಕನ್ನಡ ಗ್ರಾಮದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕೇರಳ ರಾಜ್ಯ 8ನೇ ಕನ್ನಡ ಸಮ್ಮೇಳನ-2026, ಕೇರಳ-ಕರ್ನಾಟಕ ಉತ್ಸವ ಹಾಗೂ ಕೇರಳ ರಾಜ್ಯ ಮಕ್ಕಳ ಸಾಹಿತ್ಯ ಉತ್ಸವದ ಆಯೋಜನೆ ಮತ್ತು ಸಿದ್ಧತೆಗಳ ಕುರಿತು ಸಮಾಲೋಚನೆ ನಡೆಸಲಾಯಿತು.
    ಇದೇ ವೇಳೆ ನವೆಂಬರ್ 16ರಂದು ಹಾಸನದ ಶ್ರೀ ಕ್ಷೇತ್ರ ಕಬ್ಬಳ್ಳಿ ಬಸವೇಶ್ವರ ಸ್ವಾಮಿ ದೇವಸ್ಥಾನದ ಲೋಕಾರ್ಪಣೆ ಹಾಗೂ ಮಹಾ ಕುಂಭಾಭಿಷೇಕ ಕಾರ್ಯಕ್ರಮ ನಡೆಯಲಿರುವ ಕುರಿತು ಮಾಹಿತಿ ನೀಡಲಾಯಿತು. ಪರಮಪೂಜ್ಯ ಜಗದ್ಗುರು ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ನೇತೃತ್ವ, ಮಾರ್ಗದರ್ಶನ ಹಾಗೂ ಅನುಗ್ರಹದೊಂದಿಗೆ ನಡೆಯಲಿರುವ ಈ ಧಾರ್ಮಿಕ ಕಾರ್ಯಕ್ರಮಕ್ಕೆ ಶಿವರಾಮ ಕಾಸರಗೋಡು ಅವರನ್ನು ಸ್ವಾಮೀಜಿಯವರ ನಿರ್ದೇಶನದಂತೆ ವಿಶೇಷ ಆಹ್ವಾನಿತರಾಗಿ ಭಾಗವಹಿಸುವಂತೆ ಪ್ರತಿನಿಧಿಗಳು ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.

    Previous Articleಸಾಧಕರನ್ನು ಗುರುತಿಸುವ ಗೌರವಕ್ಕೇ ಈ ಬಾರಿ ಬ್ರೇಕ್! ಉಡುಪಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ರದ್ದು? ದಶಕಗಳ ಪರಂಪರೆ ನಿಂತಿದ್ದೇಕೆ?ಸಾಧಕರನ್ನು ಗುರುತಿಸುವ ಗೌರವಕ್ಕೇ ಈ ಬಾರಿ ಬ್ರೇಕ್! ಉಡುಪಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ರದ್ದು? ದಶಕಗಳ ಪರಂಪರೆ ನಿಂತಿದ್ದೇಕೆ?
    Next Articleಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ: ಶೋಭಾ ಕರಂದ್ಲಾಜೆ ಆಕ್ರೋಶಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ: ಶೋಭಾ ಕರಂದ್ಲಾಜೆ ಆಕ್ರೋಶ

    Related Posts

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026

    ಕೆರೆಗಳ ಅಭಿವೃದ್ಧಿಗೆ ಶಿಲಾನ್ಯಾಸ: ಮುಡಾ ಅಧ್ಯಕ್ಷರಿಗೆ ಅಭಿನಂದನೆ

    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026
    ತಾಜಾ ಸುದ್ದಿಗಳು

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026

    ಕೆರೆಗಳ ಅಭಿವೃದ್ಧಿಗೆ ಶಿಲಾನ್ಯಾಸ: ಮುಡಾ ಅಧ್ಯಕ್ಷರಿಗೆ ಅಭಿನಂದನೆ

    November 4, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.