Close Menu
    Latest Posts

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಸಾಧಕರನ್ನು ಗುರುತಿಸುವ ಗೌರವಕ್ಕೇ ಈ ಬಾರಿ ಬ್ರೇಕ್! ಉಡುಪಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ರದ್ದು? ದಶಕಗಳ ಪರಂಪರೆ ನಿಂತಿದ್ದೇಕೆ?
    ಧರ್ಮ - ಸಂಸ್ಕೃತಿ - ಸಾಹಿತ್ಯ

    ಸಾಧಕರನ್ನು ಗುರುತಿಸುವ ಗೌರವಕ್ಕೇ ಈ ಬಾರಿ ಬ್ರೇಕ್! ಉಡುಪಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ರದ್ದು? ದಶಕಗಳ ಪರಂಪರೆ ನಿಂತಿದ್ದೇಕೆ?

    navabharathaBy navabharathaNovember 4, 2026

    ಉಡುಪಿ: ಕನ್ನಡ ರಾಜ್ಯೋತ್ಸವ ಬಂತೆಂದರೆ ನಾಡಿನ ಸಂಭ್ರಮದ ಜೊತೆಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸ್ಥಳೀಯ ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಕ್ಷಣವೂ ಅಷ್ಟೇ ವಿಶೇಷ. ಆದರೆ ಈ ಬಾರಿ ಉಡುಪಿ ಜಿಲ್ಲೆಯ ಸಾಧಕರ ಪಾಲಿಗೆ ಆ ಸಂಭ್ರಮವೇ ಇಲ್ಲದಂತಾಗಿದೆ. ಪ್ರತಿವರ್ಷ ಕನ್ನಡ ರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತದಿಂದ ನೀಡಲಾಗುತ್ತಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ಬಾರಿ ನಡೆಯದಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.
    ಯಕ್ಷಗಾನದ ಹೆಜ್ಜೆಗಳಲ್ಲಿ ಸಂಸ್ಕೃತಿಯನ್ನು ಉಳಿಸಿದವರು, ಕಲೆಯ ಮೂಲಕ ನಾಡಿನ ಕೀರ್ತಿ ಹೆಚ್ಚಿಸಿದವರು, ಸಾಹಿತ್ಯದ ಮೂಲಕ ಸಮಾಜಕ್ಕೆ ದಾರಿದೀಪವಾದವರು, ಕ್ರೀಡೆಯಲ್ಲಿ ಸಾಧನೆಯ ಶಿಖರ ಏರಿದವರು, ಕಂಬಳದ ಪರಂಪರೆಯನ್ನು ಬೆಳೆಸಿದವರು, ಕೃಷಿ ಮತ್ತು ಸಮಾಜಸೇವೆಯಲ್ಲಿ ತೊಡಗಿಸಿಕೊಂಡವರು… ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮ ಬದುಕನ್ನೇ ಸಾಧನೆಗೆ ಮುಡಿಪಾಗಿಟ್ಟ ಅನೇಕರು ಉಡುಪಿ ಜಿಲ್ಲೆಯಲ್ಲಿದ್ದಾರೆ. ಇಂತಹ ಸಾಧಕರನ್ನು ಗುರುತಿಸಿ ಗೌರವಿಸುವ ವೇದಿಕೆಯಾಗಿದ್ದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಈ ಬಾರಿ ಇಲ್ಲದಿರುವುದು ನಿರಾಸೆ ಮೂಡಿಸಿದೆ.
    ರಾಜ್ಯಮಟ್ಟದ ಪ್ರಶಸ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಅನೇಕ ಸ್ಥಳೀಯ ಸಾಧಕರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ದೊಡ್ಡ ಗೌರವದ ವೇದಿಕೆಯಾಗಿತ್ತು. ಜಿಲ್ಲಾಡಳಿತದ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಫಲಕ, ಶಾಲು ಹಾಗೂ ಅಭಿನಂದನಾ ಪತ್ರ ನೀಡಿ ಗೌರವಿಸುವ ಈ ಕಾರ್ಯಕ್ರಮ ಹಲವು ವರ್ಷಗಳಿಂದ ನಡೆದುಕೊಂಡು ಬಂದಿತ್ತು.
    ಪ್ರಶಸ್ತಿ ಇಲ್ಲದಿರುವುದಕ್ಕೆ ಕಾರಣವೇನು?
    ಈ ಬಾರಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯದಿರಲು ಕಾರಣವೇನು? ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆಯೇ? ಆಡಳಿತಾತ್ಮಕ ಕಾರಣಗಳಿವೆಯೇ ಅಥವಾ ಸರ್ಕಾರದ ಮಟ್ಟದಲ್ಲಿ ಯಾವುದೇ ಸೂಚನೆ ಇದೆಯೇ? ಎಂಬ ಪ್ರಶ್ನೆಗಳು ಇದೀಗ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.
    ಪ್ರಶಸ್ತಿ ಪ್ರದಾನಕ್ಕೆ ಆರ್ಥಿಕ ಅಥವಾ ಆಡಳಿತಾತ್ಮಕ ಸಮಸ್ಯೆಗಳಿದ್ದರೆ ದಾನಿಗಳು, ಸಂಘ-ಸಂಸ್ಥೆಗಳು ಹಾಗೂ ಸಾರ್ವಜನಿಕರ ಸಹಕಾರ ಪಡೆದು ಕಾರ್ಯಕ್ರಮ ಆಯೋಜಿಸಲು ಅವಕಾಶವಿತ್ತು ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಆದರೆ, ಈ ಕುರಿತು ಜಿಲ್ಲಾಡಳಿತದಿಂದ ಸ್ಪಷ್ಟನೆ ಹೊರಬಂದಿದೆಯೇ ಎಂಬುದು ತಿಳಿದುಬರಬೇಕಿದೆ.
    ಸಾಧಕರ ಗೌರವಕ್ಕೆ ಪರಂಪರೆಯೇ ಮುಖ್ಯ
    ಒಂದು ಪ್ರಶಸ್ತಿ ಎಂದರೆ ಕೇವಲ ಫಲಕ, ಶಾಲು ಅಥವಾ ಅಭಿನಂದನಾ ಪತ್ರವಲ್ಲ. ಅದು ಒಬ್ಬ ಸಾಧಕನ ಹಲವು ವರ್ಷಗಳ ಪರಿಶ್ರಮಕ್ಕೆ ಸಮಾಜ ನೀಡುವ ಮನ್ನಣೆ. ಅಂತಹ ಗೌರವ ಯುವ ಪೀಳಿಗೆಗೆ ಸಾಧನೆಯ ಹಾದಿಯಲ್ಲಿ ಮುನ್ನಡೆಯಲು ಸ್ಫೂರ್ತಿಯೂ ಆಗುತ್ತದೆ.
    ಜಿಲ್ಲೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಜಿಲ್ಲಾಡಳಿತದ ಪ್ರಮುಖ ಜವಾಬ್ದಾರಿಗಳಲ್ಲೊಂದು. ಹೀಗಿರುವಾಗ ದಶಕಗಳಿಂದ ನಡೆದುಕೊಂಡು ಬಂದಿರುವ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪರಂಪರೆ ಈ ಬಾರಿ ಸ್ಥಗಿತಗೊಂಡಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಬಲವಾಗುತ್ತಿದೆ.
    ಪ್ರಶಸ್ತಿ ನೀಡುವ ಕಾರ್ಯಕ್ರಮಕ್ಕೆ ವಿರಾಮ ಬಿದ್ದಿರಬಹುದು; ಆದರೆ ಸಾಧಕರನ್ನು ಗೌರವಿಸುವ ಸಂಪ್ರದಾಯಕ್ಕೆ ವಿರಾಮ ಬೀಳಬಾರದು. ಮುಂದಿನ ವರ್ಷವಾದರೂ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನವನ್ನು ಹಿಂದಿನಂತೆಯೇ ಮುಂದುವರಿಸಿ ಜಿಲ್ಲೆಯ ನೈಜ ಸಾಧಕರನ್ನು ಗುರುತಿಸಿ ಗೌರವಿಸಬೇಕು ಎಂಬ ಒತ್ತಾಯ ಸಾರ್ವಜನಿಕರಿಂದ ಕೇಳಿಬರುತ್ತಿದೆ.

    Previous Articleಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಚೋದನೆ: ರಾಹುಲ್ ಗಾಂಧಿ ವಿರುದ್ಧ ಕೆ.ಎಸ್. ನವೀನ್ ವಾಗ್ದಾಳಿಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಚೋದನೆ: ರಾಹುಲ್ ಗಾಂಧಿ ವಿರುದ್ಧ ಕೆ.ಎಸ್. ನವೀನ್ ವಾಗ್ದಾಳಿ
    Next Articleಕಾಸರಗೋಡು ಕನ್ನಡ ಗ್ರಾಮಕ್ಕೆ ಆದಿಚುಂಚನಗಿರಿ ಮಠದ ಪ್ರತಿನಿಧಿಗಳ ಭೇಟಿಕಾಸರಗೋಡು ಕನ್ನಡ ಗ್ರಾಮಕ್ಕೆ ಆದಿಚುಂಚನಗಿರಿ ಮಠದ ಪ್ರತಿನಿಧಿಗಳ ಭೇಟಿ

    Related Posts

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026

    ಕೆರೆಗಳ ಅಭಿವೃದ್ಧಿಗೆ ಶಿಲಾನ್ಯಾಸ: ಮುಡಾ ಅಧ್ಯಕ್ಷರಿಗೆ ಅಭಿನಂದನೆ

    November 4, 2026
    Latest Posts

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026
    ತಾಜಾ ಸುದ್ದಿಗಳು

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026

    ಕೆರೆಗಳ ಅಭಿವೃದ್ಧಿಗೆ ಶಿಲಾನ್ಯಾಸ: ಮುಡಾ ಅಧ್ಯಕ್ಷರಿಗೆ ಅಭಿನಂದನೆ

    November 4, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.