ಕಡಬ: ಕಡಬ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಾನ್ಯ ಕಾರ್ಯನಿರ್ವಾಹಕ ಅಧಿಕಾರಿಯವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ಗಳ ಪ್ರಗತಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ಗಳ ತೆರಿಗೆ ವಸೂಲಾತಿ, BJYS ನೋಂದಣಿ ಪ್ರಗತಿ, ವಿಬಿ ಜಿ ರಾಮ್ ಜಿ ಯೋಜನೆಯ ಪ್ರಗತಿ, ನಿವೇಶನಕ್ಕಾಗಿ ಜಾಗ ಕಾಯ್ದಿರಿಸುವಿಕೆ ಹಾಗೂ ಆಡಿಟ್ ಪ್ಯಾರಾಗಳ ತೀರುವಳಿ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಯಿತು. ಬಾಕಿ ಇರುವ ಕಾರ್ಯಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಪ್ರಗತಿಗೆ ಸಂಬಂಧಿಸಿದಂತೆ ಚರ್ಚಿಸಲಾಯಿತು.
ಸಭೆಯ ಬಳಿಕ ಸೇವಾ ನಿವೃತ್ತಿ ಹೊಂದಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ಆನಂದ ಗೌಡ, ಸ್ವಯಂ ನಿವೃತ್ತಿ ಹೊಂದಿದ ತಾಲೂಕು ಐಇಸಿ ಸಂಯೋಜಕ ಶ್ರೀ ಭರತ್ ಕುಮಾರ್ ಹಾಗೂ ವರ್ಗಾವಣೆ ಹೊಂದಿದ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಭವ್ಯ ಎಂ.ಬಿ. ಮತ್ತು ಕಾರ್ಯದರ್ಶಿಗಳಾದ ಶ್ರೀ ವಸಂತ ಶೆಟ್ಟಿ, ಶ್ರೀಮತಿ ಪಮ್ಮು, ಶ್ರೀಮತಿ ಚಂದ್ರಾವತಿ ಹಾಗೂ ಶ್ರೀ ಶೀನ ಅವರಿಗೆ ಗೌರವಪೂರ್ವಕ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಯಿತು



