ಕೊಡಗು: ಗಾಂಜಾ ಸೇವನೆ ಪ್ರಕರಣದಲ್ಲಿ ತಪ್ಪಿತಸ್ಥನೆಂದು ಸಾಬೀತಾದ ಆರೋಪಿಗೆ ದಂಡದ ಜೊತೆಗೆ ಸಮುದಾಯ ಸೇವೆ ವಿಧಿಸುವ ಮೂಲಕ ವಿರಾಜಪೇಟೆ ಜೆಎಂಎಫ್ಸಿ ನ್ಯಾಯಾಲಯ ವಿಭಿನ್ನ ಶಿಕ್ಷೆ ಪ್ರಕಟಿಸಿದೆ.
ವಿರಾಜಪೇಟೆ ತಾಲ್ಲೂಕಿನ ಸಿದ್ದಾಪುರದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗೆ ನ್ಯಾಯಾಲಯ ₹5 ಸಾವಿರ ದಂಡ ವಿಧಿಸಿದೆ. ಇದರೊಂದಿಗೆ ಸಮುದಾಯ ಸೇವೆ ಮಾಡುವಂತೆಯೂ ಆದೇಶಿಸಿದೆ.
ನ್ಯಾಯಾಲಯದ ಆದೇಶದಂತೆ ನವೆಂಬರ್ 15ರಂದು ಆರೋಪಿ ಸಿದ್ದಾಪುರ ಪಟ್ಟಣದಲ್ಲಿ ಪೊಲೀಸರ ಸಮ್ಮುಖದಲ್ಲಿ ಟ್ರಾಫಿಕ್ ಡ್ಯೂಟಿ ನಿರ್ವಹಿಸಿದ್ದಾನೆ. ವಾಹನ ಸಂಚಾರ ನಿಯಂತ್ರಣ ಹಾಗೂ ಜನದಟ್ಟಣೆ ನಿರ್ವಹಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾನೆ.
ಅಪರಾಧಿಗೆ ಸಮಾಜಮುಖಿ ಸೇವೆಯ ಮೂಲಕ ಶಿಕ್ಷೆ ನೀಡಿದ ವಿರಾಜಪೇಟೆ ನ್ಯಾಯಾಲಯದ ಈ ಕ್ರಮ ಸಾರ್ವಜನಿಕರ ಗಮನ ಸೆಳೆದಿದೆ.



