ಮಂಗಳೂರು: ಯುವಜನರಿಗೆ ಉದ್ಯೋಗಾಧಾರಿತ ಕೌಶಲ್ಯ ತರಬೇತಿ ನೀಡುವ ಮೂಲಕ ಭವಿಷ್ಯದ ಉದ್ಯೋಗಾವಕಾಶಗಳಿಗೆ ದಾರಿ ಮಾಡಿಕೊಡುತ್ತಿರುವ ಮಂಗಳೂರಿನ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ (ಕೆಜಿಟಿಟಿಐ) ಇದೀಗ ರಾಜ್ಯಮಟ್ಟದಲ್ಲಿ ಗುರುತಿಸಿಕೊಂಡಿದೆ. ಕೌಶಲ್ಯ ಕ್ಷೇತ್ರಕ್ಕೆ ನೀಡಿದ ವಿಶೇಷ ಕೊಡುಗೆಯನ್ನು ಪರಿಗಣಿಸಿ ಸಂಸ್ಥೆಗೆ 2026ನೇ ಸಾಲಿನ ‘ಕೌಶಲ್ಯ ಕರ್ನಾಟಕ ಪ್ರಶಸ್ತಿ’ ಲಭಿಸಿದೆ. ರಾಜ್ಯದ ಅತ್ಯುತ್ತಮ ಕೆಜಿಟಿಟಿಐ ತರಬೇತಿ ಸಂಸ್ಥೆಗಳ ವಿಭಾಗದಲ್ಲಿ ಈ ಗೌರವ ದೊರೆತಿದ್ದು, ಪ್ರಶಸ್ತಿಯೊಂದಿಗೆ ₹50 ಸಾವಿರ ನಗದು ಪುರಸ್ಕಾರವೂ ಲಭಿಸಿದೆ.
ಬೆಂಗಳೂರಿನಲ್ಲಿ ನಡೆದ ‘ಬೆಂಗಳೂರು ಕೌಶಲ್ಯ ಸಮ್ಮೇಳನ–2026’ರಲ್ಲಿ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯ ಅಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಕೆಜಿಟಿಟಿಐ ಮಂಗಳೂರಿನ ನಿರ್ದೇಶಕ ಡಾ. ಗಿರಿಧರ್ ಸಾಲ್ಯಾನ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಈ ಸಂದರ್ಭದಲ್ಲಿ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದ ಆಯುಕ್ತೆ ಶ್ರೀಮತಿ ಶಿಲ್ಪಾ ಎಂ., ಐಎಎಸ್ ಹಾಗೂ ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್ಮೆಂಟ್ ಸೆಂಟರ್ನ ಜಂಟಿ ಕಾರ್ಯದರ್ಶಿ ಶ್ರೀ ರಘುಪತಿ ಉಪಸ್ಥಿತರಿದ್ದರು.
ಕೌಶಲ್ಯಾಭಿವೃದ್ಧಿ ಕ್ಷೇತ್ರದಲ್ಲಿ ಗುಣಮಟ್ಟದ ತರಬೇತಿ ನೀಡುವುದು ಮಾತ್ರವಲ್ಲದೆ, ಯುವಜನರನ್ನು ಉದ್ಯೋಗಕ್ಕೆ ಸಜ್ಜುಗೊಳಿಸುವಲ್ಲಿ ಸಂಸ್ಥೆ ಸಲ್ಲಿಸುತ್ತಿರುವ ಸೇವೆಗೆ ಈ ಪ್ರಶಸ್ತಿ ಸಂದಿದೆ. ಕೆಜಿಟಿಟಿಐ ಮಂಗಳೂರಿನ ಈ ರಾಜ್ಯಮಟ್ಟದ ಸಾಧನೆ ದಕ್ಷಿಣ ಕನ್ನಡ ಜಿಲ್ಲೆಯ ಕೌಶಲ್ಯಾಭಿವೃದ್ಧಿ ಕ್ಷೇತ್ರಕ್ಕೆ ಮತ್ತೊಂದು ಹೆಮ್ಮೆಯ ಗರಿ ಮೂಡಿಸಿದೆ.
ಕೌಶಲ್ಯ ತರಬೇತಿಯಲ್ಲಿ ಕೆಜಿಟಿಟಿಐ ಸಾಧನೆಗೆ ರಾಜ್ಯಮಟ್ಟದ ಮನ್ನಣೆ ‘ಕೌಶಲ್ಯ ಕರ್ನಾಟಕ ಪ್ರಶಸ್ತಿ’ ಮುಡಿಗೇರಿಸಿಕೊಂಡ ಮಂಗಳೂರು ಸಂಸ್ಥೆ; ₹50 ಸಾವಿರ ನಗದು ಪುರಸ್ಕಾರ
Previous Article
ಆರನೇ ಬಾರಿ ಏಷ್ಯನ್ ಹಾಕಿ ಚಾಂಪಿಯನ್ ಆದ ಭಾರತ
ಆರನೇ ಬಾರಿ ಏಷ್ಯನ್ ಹಾಕಿ ಚಾಂಪಿಯನ್ ಆದ ಭಾರತ

