ಪುತ್ತೂರು: ಇಲ್ಲಿನ ವಿವೇಕಾನಂದ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಸ್ವಾಯತ್ತ ಪದವಿ ಕಾಲೇಜಿನ ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ. ವರದರಾಜ ಚಂದ್ರಗಿರಿ ಅವರು ಅಧಿಕಾರ ಸ್ವೀಕರಿಸಿದರು.
ಆಡಳಿತ ಮಂಡಳಿಯ ನೂತನ ಸಂಚಾಲಕರಾಗಿ ಎ. ಮೋಹನ್, ಕೋಶಾಧಿಕಾರಿಯಾಗಿ ಸುಕುಮಾರ್ ರಾವ್ ಎನ್.ಎಸ್. ಹಾಗೂ ಸದಸ್ಯರಾಗಿ ಯಶೋಧರ ಜೈನ್, ಎಸ್. ರಾಜಶೇಖರ್, ವೇಣುಗೋಪಾಲ ಭಟ್ ಎಂ., ಪೂರ್ಣ ಮಂಗಳ, ಮಾಲಿನಿ ಕಶ್ಯಪ್ ಮತ್ತು ರಂಜಿತ್ ಜೈನ್ ಅವರು ಜವಾಬ್ದಾರಿ ವಹಿಸಿಕೊಂಡರು.
ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕೃಷ್ಣ ಕುಮಾರ್ ಶೆಟ್ಟಿ ಕಡಬ ಅವರು ದೀಪ ಪ್ರದಾನ ಮಾಡುವ ಮೂಲಕ ನೂತನ ಆಡಳಿತ ಮಂಡಳಿಗೆ ಜವಾಬ್ದಾರಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಕಾರ್ಯದರ್ಶಿ ವಿಜಯನಾರಾಯಣ, ಕಾಲೇಜಿನ ನಿಕಟಪೂರ್ವ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ, ಸಂಚಾಲಕ ಮುರಳಿಕೃಷ್ಣ ಕೆ.ಎನ್., ಪ್ರಾಂಶುಪಾಲ ಶ್ರೀಕೃಷ್ಣ ಗಣರಾಜ ಭಟ್ ಎಸ್. ಸೇರಿದಂತೆ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.



