ಬೆಂಗಳೂರು,ದಸರಾ ರಜೆಗಳ ಸಂಭ್ರಮದ ನಡುವೆ ಸರ್ಕಾರಿ ನೌಕರರಿಗೆ ಮತ್ತೊಂದು ರಜೆ ಭಾಗ್ಯ ಒಲಿದಿದೆ. ಕರ್ನಾಟಕ ವಿಧಾನ ಪರಿಷತ್ತಿನ ನಾಲ್ಕು ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರಗಳ ಚುನಾವಣೆಗೆ ಅಕ್ಟೋಬರ್ 23ರಂದು ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಅರ್ಹ ಮತದಾರ ನೌಕರರಿಗೆ ಸರ್ಕಾರ ವಿಶೇಷ ರಜೆ ಘೋಷಿಸಿದೆ.
ಅಕ್ಟೋಬರ್ 23ರ ಶುಕ್ರವಾರದ ವಿಶೇಷ ರಜೆಯೊಂದಿಗೆ ಶನಿವಾರ, ಭಾನುವಾರ ಹಾಗೂ ಅಕ್ಟೋಬರ್ 26ರ ಸೋಮವಾರದ ವಾಲ್ಮೀಕಿ ಜಯಂತಿ ರಜೆ ಸೇರಿ ಸತತ ನಾಲ್ಕು ದಿನ ರಜೆ ಸಿಗಲಿದೆ. ಇದರಿಂದ ಅರ್ಹ ಸರ್ಕಾರಿ ನೌಕರರಿಗೆ ವಾರಾಂತ್ಯದಲ್ಲಿ ವಿಶ್ರಾಂತಿ ಪಡೆಯಲು ಅವಕಾಶ ದೊರೆಯಲಿದೆ. ಆದರೆ, ಅಕ್ಟೋಬರ್ 23ರ ವಿಶೇಷ ರಜೆ ಚುನಾವಣೆಯಲ್ಲಿ ಮತದಾನ ಮಾಡಲು ಅರ್ಹರಾಗಿರುವ ಸಂಬಂಧಪಟ್ಟ ನೌಕರರಿಗೆ ಮಾತ್ರ ಅನ್ವಯವಾಗಲಿದೆ.


