ಮಂಗಳೂರು: ‘ವೋಕಲ್ ಫಾರ್ ಲೋಕಲ್’ ತತ್ವದಡಿ ಸ್ಥಳೀಯ ಕಿರು ಉದ್ಯಮಿಗಳು ತಯಾರಿಸುವ ಗುಡಿ ಕೈಗಾರಿಕೆ ಹಾಗೂ ಗೃಹ ಉತ್ಪನ್ನಗಳನ್ನು ಖರೀದಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಬೇಕು. ಸಪ್ತಾಹದ ಸಂತೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.
ನಗರದ ವಿ.ಟಿ. ರಸ್ತೆಯ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಪ್ರಾಯೋಜಕತ್ವದಲ್ಲಿ, ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಸಹಕಾರದೊಂದಿಗೆ ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ ಆಶ್ರಯದಲ್ಲಿ ಆಯೋಜಿಸಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ‘ಸಪ್ತಾ ಸಾಂತ್’ ಉದ್ಘಾಟಿಸಿ ಅವರು ಮಾತನಾಡಿದರು.
ಶ್ರೀ ವಿಠೋಭ ರುಕುಮಾಯಿ ದೇವಸ್ಥಾನದ 104ನೇ ವರ್ಷದ ಅಖಂಡ ಭಜನಾ ಸಪ್ತಾಹದ ಸಂದರ್ಭದಲ್ಲಿ ಹಿಂದೆ ವಿ.ಟಿ. ರಸ್ತೆಯಲ್ಲಿ ರಸ್ತೆಬದಿಯಲ್ಲೇ ಸಂತೆ ವಿಜೃಂಭಣೆಯಿಂದ ನಡೆಯುತ್ತಿತ್ತು. ವಾಹನಗಳ ದಟ್ಟಣೆಯಿಂದಾಗಿ ಇದೀಗ ಸಭಾಂಗಣದಲ್ಲಿ ಆಯೋಜಿಸಲಾಗುತ್ತಿದೆ. ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಉದ್ಯಮಿಗಳು ಭಾಗವಹಿಸಿದ್ದು, ಮನೆಯಲ್ಲಿ ತಯಾರಿಸಿದ ಆಹಾರ ಪದಾರ್ಥಗಳು, ಬಟ್ಟೆಗಳು ಹಾಗೂ ವಿವಿಧ ಅಲಂಕಾರಿಕ ವಸ್ತುಗಳು ಗಮನ ಸೆಳೆಯುತ್ತಿವೆ. ಪ್ರತಿವರ್ಷ ಸಂತೆ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದ್ದು, ಉದ್ಯಮಿಗಳು ಹಾಗೂ ಗ್ರಾಹಕರಿಗೆ ಅನುಕೂಲವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ಹೋರಾಟಗಾರ ಹನುಮಂತ ಕಾಮತ್, ಟ್ರಸ್ಟಿ ವಿಠೋಭ ಶೆಣೈ ಹಾಗೂ ನಾಗೇಶ್ ಪ್ರಭು ಉಪಸ್ಥಿತರಿದ್ದರು.
‘ಸಪ್ತಾ ಸಾಂತ್’ ಪ್ರತಿದಿನ ಬೆಳಿಗ್ಗೆ 9.30ರಿಂದ ರಾತ್ರಿ 8ರವರೆಗೆ ತೆರೆದಿರಲಿದ್ದು, ನವೆಂಬರ್ 21ರ ರಾತ್ರಿ 8 ಗಂಟೆಯವರೆಗೆ ನಡೆಯಲಿದೆ.
ಸ್ಥಳೀಯ ಗುಡಿ ಕೈಗಾರಿಕೆ, ಗೃಹ ಉತ್ಪನ್ನಗಳ ಖರೀದಿಸಿ ಕಿರು ಉದ್ಯಮಿಗಳನ್ನು ಪ್ರೋತ್ಸಾಹಿಸಿ: ಶಾಸಕ ವೇದವ್ಯಾಸ ಕಾಮತ್
Previous Article
ಅನೈರ್ಮಲ್ಯ ಪತ್ತೆ: ಬೈಕಂಪಾಡಿಯ ಚೀಸ್ ಬಾಲ್ ತಯಾರಿಕಾ ಘಟಕಕ್ಕೆ ಬೀಗ
ಅನೈರ್ಮಲ್ಯ ಪತ್ತೆ: ಬೈಕಂಪಾಡಿಯ ಚೀಸ್ ಬಾಲ್ ತಯಾರಿಕಾ ಘಟಕಕ್ಕೆ ಬೀಗ

