ಮಂಗಳೂರು: ಮಾಂಡ್ ಸೊಭಾಣ್ ನೇತೃತ್ವದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆದ ನಿರಂತರ ಸಮೂಹ ಗಾಯನ ಕಾರ್ಯಕ್ರಮವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ನಲ್ಲಿ ಸ್ಥಾನ ಪಡೆಯುವ ಮೂಲಕ ಸಮಾಪನಗೊಂಡಿತು.
ಒಟ್ಟು 11 ದಿನ, 11 ಗಂಟೆ ಹಾಗೂ 11 ನಿಮಿಷಗಳ ಕಾಲ ನಿರಂತರವಾಗಿ ನಡೆದ ಈ ಸಂಗೀತ ಮ್ಯಾರಥಾನ್ ಹೊಸ ವಿಶ್ವ ದಾಖಲೆಯನ್ನು ನಿರ್ಮಿಸಿದೆ.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಹಾಗೂ ಸಂಘಟಕರು ವಿಶ್ವ ದಾಖಲೆಯ ಸಾಧನೆಯನ್ನು ಸಂಭ್ರಮಿಸಿದರು.
2024ರಲ್ಲಿ ವಡ್ತಾಲ್ನ ಹರಿಕೃಷ್ಣ ಕೀರ್ತನ್ ಯಾಗ್ ಸಂಸ್ಥೆ ನಿರ್ಮಿಸಿದ್ದ 11 ದಿನ, 11 ಗಂಟೆ, 11 ನಿಮಿಷಗಳ ಹಿಂದಿನ ದಾಖಲೆಯನ್ನು ಮಾಂಡ್ ಸೊಭಾಣ್ನ ಸಂಗೀತ ಮ್ಯಾರಥಾನ್ ಸರಿಗಟ್ಟಿದೆ.
ಈ ಮೂಲಕ ಕೊಂಕಣಿ ಸಂಗೀತಕ್ಕೆ ಜಾಗತಿಕ ಮಟ್ಟದಲ್ಲಿ ಮತ್ತೊಂದು ಮಹತ್ವದ ಗುರುತಿನ ಗೌರವ ಲಭಿಸಿದೆ.



