Close Menu
    Latest Posts

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ

    Nava Bharatha MediaNava Bharatha Media
    Home » ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ: ಶೋಭಾ ಕರಂದ್ಲಾಜೆ ಆಕ್ರೋಶ
    ಸುದ್ದಿ

    ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ: ಶೋಭಾ ಕರಂದ್ಲಾಜೆ ಆಕ್ರೋಶ

    navabharathaBy navabharathaNovember 4, 2026

    ಹಾಸನ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಜನೋಪಯೋಗಿ ವಸ್ತುಗಳು ಹಾಗೂ ಸೇವೆಗಳ ದರ ನಿರಂತರವಾಗಿ ಏರಿಕೆಯಾಗುತ್ತಿದ್ದು, ಜನಸಾಮಾನ್ಯರ ಬದುಕು ದುಸ್ತರವಾಗಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
    ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವಿದ್ಯುತ್ ದರ ಏರಿಕೆ ಮಾಡಲಾಯಿತು. ಬಳಿಕ ಬಸ್ ಪ್ರಯಾಣ ದರವನ್ನು ಶೇ.15ರಷ್ಟು ಹೆಚ್ಚಿಸಲಾಗಿದೆ. 2023ರಿಂದ ಹಾಲಿನ ದರವನ್ನು ನಿರಂತರವಾಗಿ ಹೆಚ್ಚಿಸಲಾಗಿದ್ದು, 2024, 2025 ಹಾಗೂ 2026ರಲ್ಲಿಯೂ ದರ ಏರಿಕೆ ಮಾಡಲಾಗಿದೆ. ಮದ್ಯದ ದರ ಹೆಚ್ಚಳದ ಜೊತೆಗೆ ಬೆಂಗಳೂರಿನಲ್ಲಿ ಮೆಟ್ರೋ ಪ್ರಯಾಣ ದರವನ್ನೂ ಏರಿಸಲಾಗಿದೆ. ಹೀಗೆ ಜನಸಾಮಾನ್ಯರಿಗೆ ಅಗತ್ಯವಿರುವ ಸೇವೆ ಹಾಗೂ ವಸ್ತುಗಳ ಬೆಲೆ ಹೆಚ್ಚಿಸುವ ಮೂಲಕ ಸರ್ಕಾರ ಜನರ ಮೇಲೆ ಹೊರೆ ಹೇರುತ್ತಿದೆ ಎಂದು ಟೀಕಿಸಿದರು.
    ಸಾಮಾನ್ಯ ಜನರು ಪಡೆಯುವ ಅಲ್ಪ ಸಂಬಳದಲ್ಲಿ ಪ್ರತಿಬಾರಿಯೂ ಬೆಲೆ ಏರಿಕೆಯ ಹೊರೆ ಭರಿಸುವುದು ಕಷ್ಟ. ಜನರ ಆದಾಯ ಹೆಚ್ಚಾಗದಿದ್ದರೂ ಸರ್ಕಾರ ಮಾತ್ರ ನಿರಂತರವಾಗಿ ದರ ಏರಿಕೆ ಮಾಡುತ್ತಿದೆ. ಇದರಿಂದ ಜನಸಾಮಾನ್ಯರ ಆರ್ಥಿಕ ಪರಿಸ್ಥಿತಿ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿದೆ ಎಂದರು.
    ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಸೌಲಭ್ಯ ನೀಡಿರುವುದಾಗಿ ಹೇಳುವ ಸರ್ಕಾರದಲ್ಲಿ ಬಸ್‌ಗಳ ನಿರ್ವಹಣೆಗೂ ಹಣವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಡೀಸೆಲ್ ಖರೀದಿಸಲು ಹಣವಿಲ್ಲ, ಬಸ್‌ಗಳ ದುರಸ್ತಿಗೂ ಅನುದಾನವಿಲ್ಲ ಎಂಬ ಸ್ಥಿತಿ ಇದೆ. ಇಂತಹ ಆಡಳಿತದಿಂದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯೇ ಸಂಕಷ್ಟಕ್ಕೆ ಸಿಲುಕುತ್ತಿದೆ ಎಂದು ಆರೋಪಿಸಿದರು.
    ಜನಸಾಮಾನ್ಯರ ಮೇಲಿನ ಆರ್ಥಿಕ ಹೊರೆಯನ್ನು ಕಡಿಮೆ ಮಾಡಬೇಕು. ಯಾವುದೇ ಕಾರಣಕ್ಕೂ ಬಸ್ ಪ್ರಯಾಣ ದರವನ್ನು ಮತ್ತೆ ಏರಿಕೆ ಮಾಡಬಾರದು. ಈಗಾಗಲೇ ಹೆಚ್ಚಿಸಿರುವ ಹಾಲಿನ ದರವನ್ನು ಇಳಿಸಬೇಕು. ರೈತರಿಗೆ ಹೆಚ್ಚುವರಿ ಹಣ ನೀಡಬೇಕಿದ್ದರೆ ಸರ್ಕಾರ ತನ್ನ ಬೊಕ್ಕಸದಿಂದ ಭರಿಸಬೇಕು ಹೊರತು ಅದರ ಹೊರೆಯನ್ನು ಗ್ರಾಹಕರ ಮೇಲೆ ಹಾಕಬಾರದು ಎಂಬುದು ನಮ್ಮ ಆಗ್ರಹ ಎಂದು ಶೋಭಾ ಕರಂದ್ಲಾಜೆ ಹೇಳಿದರು.

    Previous Articleಕಾಸರಗೋಡು ಕನ್ನಡ ಗ್ರಾಮಕ್ಕೆ ಆದಿಚುಂಚನಗಿರಿ ಮಠದ ಪ್ರತಿನಿಧಿಗಳ ಭೇಟಿಕಾಸರಗೋಡು ಕನ್ನಡ ಗ್ರಾಮಕ್ಕೆ ಆದಿಚುಂಚನಗಿರಿ ಮಠದ ಪ್ರತಿನಿಧಿಗಳ ಭೇಟಿ
    Next Articleಜನರ ಹಕ್ಕುಗಳಿಗಾಗಿ ಬಿಜೆಪಿ ಹೋರಾಟ ನಿರಂತರ: ಶಾಸಕ ಡಾ. ಭರತ್ ಶೆಟ್ಟಿಜನರ ಹಕ್ಕುಗಳಿಗಾಗಿ ಬಿಜೆಪಿ ಹೋರಾಟ ನಿರಂತರ: ಶಾಸಕ ಡಾ. ಭರತ್ ಶೆಟ್ಟಿ

    Related Posts

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026

    ಕೆರೆಗಳ ಅಭಿವೃದ್ಧಿಗೆ ಶಿಲಾನ್ಯಾಸ: ಮುಡಾ ಅಧ್ಯಕ್ಷರಿಗೆ ಅಭಿನಂದನೆ

    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026
    ತಾಜಾ ಸುದ್ದಿಗಳು

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026

    ಕೆರೆಗಳ ಅಭಿವೃದ್ಧಿಗೆ ಶಿಲಾನ್ಯಾಸ: ಮುಡಾ ಅಧ್ಯಕ್ಷರಿಗೆ ಅಭಿನಂದನೆ

    November 4, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.