Close Menu
    Latest Posts

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಚಾಲನೆ

    November 5, 2026

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ

    Nava Bharatha MediaNava Bharatha Media
    Home » ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಚೋದನೆ: ರಾಹುಲ್ ಗಾಂಧಿ ವಿರುದ್ಧ ಕೆ.ಎಸ್. ನವೀನ್ ವಾಗ್ದಾಳಿ
    ಸುದ್ದಿ

    ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಚೋದನೆ: ರಾಹುಲ್ ಗಾಂಧಿ ವಿರುದ್ಧ ಕೆ.ಎಸ್. ನವೀನ್ ವಾಗ್ದಾಳಿ

    navabharathaBy navabharathaNovember 4, 2026

    ಉಡುಪಿ: ಸಂವಿಧಾನವನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ದುಷ್ಟತನಕ್ಕೆ ರಾಹುಲ್ ಗಾಂಧಿ ಪ್ರಚೋದನೆ ನೀಡುತ್ತಿದ್ದಾರೆ. ದೇಶದ ಇತಿಹಾಸದಲ್ಲಿ ಸುಪ್ರೀಂ ಕೋರ್ಟ್‌ಗೆ ಮುತ್ತಿಗೆ ಹಾಕುವ ಪ್ರಯತ್ನ ನಡೆದಿರಲಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಬಿಜೆಪಿ ರಾಜ್ಯ ವಕ್ತಾರ ಕೆ.ಎಸ್. ನವೀನ್ ವಾಗ್ದಾಳಿ ನಡೆಸಿದರು.
    ಉಡುಪಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಸಮರ್ಪಕವಾಗಿ ನಡೆದಿದೆ ಎಂದು ಕಾಂಗ್ರೆಸ್ ಸರ್ಕಾರದ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೂ ರಾಹುಲ್ ಗಾಂಧಿ ಯಾವುದೇ ದಾಖಲೆಗಳಿಲ್ಲದೆ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ ಎಸ್‌ಐಆರ್ ಪ್ರಕ್ರಿಯೆಯ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಚುನಾವಣಾ ಆಯೋಗದ ಘನತೆ ಹಾಗೂ ಗೌರವಕ್ಕೆ ಧಕ್ಕೆ ತರುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ದೂರಿದರು.
    ರಾಹುಲ್ ಗಾಂಧಿ ಬೆಂಬಲದೊಂದಿಗೆ ಪ್ರತಿಭಟನೆ ನಡೆಸುತ್ತಿರುವ ಕೆಲವು ವಿದ್ಯಾರ್ಥಿ ಸಂಘಟನೆಗಳ ನಾಯಕರು ನೇಪಾಳ, ಬಾಂಗ್ಲಾದೇಶ ಹಾಗೂ ಯುರೋಪ್‌ನಲ್ಲಿ ನಡೆದ ದಂಗೆಗಳ ಮಾದರಿಯಲ್ಲಿ ಭಾರತದಲ್ಲಿಯೂ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕುತ್ತಿದ್ದಾರೆ. ಇದು ಆತಂಕಕಾರಿ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಹಾಗೂ ಯುವಜನರನ್ನು ದಾರಿ ತಪ್ಪಿಸುವ ಕೆಲಸವನ್ನು ರಾಹುಲ್ ಗಾಂಧಿ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
    ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ದೇಶದ ಪರಿಸ್ಥಿತಿ ಹೇಗಿತ್ತು ಎಂಬ ಅರಿವು ಇಂದಿನ ಯುವಜನರಿಗೆ ಇಲ್ಲ. ಮುಗ್ಧ ಯುವಕರು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಿ, ಅವರನ್ನು ದೇಶದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ನಡೆಯುತ್ತಿದೆ. ವಿದ್ಯಾರ್ಥಿ ಸಮುದಾಯವನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುತ್ತಿರುವುದು ಖಂಡನೀಯ ಎಂದು ಕೆ.ಎಸ್. ನವೀನ್ ವಾಗ್ದಾಳಿ ನಡೆಸಿದರು.

    Previous Articleಹೇಮಂತ್ ಪೂಜಾರಿಗೆ ಉದ್ಯಮಿಗಳ ಮೊಬೈಲ್ ನಂಬರ್ ಪೂರೈಕೆ: ಆರೋಪಿ ಬಂಧನಹೇಮಂತ್ ಪೂಜಾರಿಗೆ ಉದ್ಯಮಿಗಳ ಮೊಬೈಲ್ ನಂಬರ್ ಪೂರೈಕೆ: ಆರೋಪಿ ಬಂಧನ
    Next Articleಸಾಧಕರನ್ನು ಗುರುತಿಸುವ ಗೌರವಕ್ಕೇ ಈ ಬಾರಿ ಬ್ರೇಕ್! ಉಡುಪಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ರದ್ದು? ದಶಕಗಳ ಪರಂಪರೆ ನಿಂತಿದ್ದೇಕೆ?ಸಾಧಕರನ್ನು ಗುರುತಿಸುವ ಗೌರವಕ್ಕೇ ಈ ಬಾರಿ ಬ್ರೇಕ್! ಉಡುಪಿಯಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ರದ್ದು? ದಶಕಗಳ ಪರಂಪರೆ ನಿಂತಿದ್ದೇಕೆ?

    Related Posts

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಚಾಲನೆ

    November 5, 2026

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಚಾಲನೆ

    November 5, 2026

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026
    ತಾಜಾ ಸುದ್ದಿಗಳು

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.