ಕಠ್ಮಂಡು: ನೇಪಾಳದ ಮೌಂಟ್ ಎವರೆಸ್ಟ್ ಸಮೀಪದ ಅತ್ಯಂತ ಎತ್ತರದ ಪ್ರದೇಶದಲ್ಲಿ ಲ್ಯಾಂಡಿಂಗ್ ಮಾಡುವಾಗ ಎರಡು ಹೆಲಿಕಾಪ್ಟರ್ಗಳ ನಡುವೆ ಗಾಳಿಯಲ್ಲೇ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ಭಾರತೀಯ ಪ್ರವಾಸಿ ಮೃತಪಟ್ಟಿದ್ದು, ಇಬ್ಬರು ಪೈಲಟ್ಗಳು ಸೇರಿದಂತೆ ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ.
ಸೋಲುಖುಂಬು ಜಿಲ್ಲೆಯ ಖುಂಬು ಪಸಾಂಗ್ ಲಹಾಮು ವ್ಯಾಪ್ತಿಯ ಫೇರಿಚೆ (Pheriche) ಎಂಬ ವಾಯುಯಾನ ಕೇಂದ್ರದ ಬಳಿ ಈ ದುರಂತ ಸಂಭವಿಸಿದೆ. ಎವರೆಸ್ಟ್ ಬೇಸ್ ಕ್ಯಾಂಪ್ ಚಾರಣ ಮಾರ್ಗದಲ್ಲಿರುವ ಈ ಪ್ರದೇಶದಲ್ಲಿ ಬೆಳಗ್ಗೆ ಅಪಘಾತ ನಡೆದಿದೆ.



