Close Menu
    Latest Posts

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » 40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ
    ಸುದ್ದಿ

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    navabharathaBy navabharathaNovember 2, 2026

    ಪುತ್ತೂರು: ದಲಿತ ಸಮುದಾಯದ ಕುಟುಂಬಗಳಿಗೆ ಸರ್ಕಾರದಿಂದ ಮಂಜೂರಾಗಿದ್ದ ಜಮೀನಿನ ಮೇಲೆ ಅರಣ್ಯ ಇಲಾಖೆ ಹಕ್ಕು ಪ್ರತಿಪಾದಿಸುತ್ತಿದ್ದು, ನೋಟಿಸ್ ಜಾರಿ ಮಾಡುವ ಮೂಲಕ ಬಡ ಕುಟುಂಬಗಳಲ್ಲಿ ಆತಂಕ ಮೂಡಿಸಿದೆ ಎಂದು ಸಿಪಿಐಎಂ ಪುತ್ತೂರು ತಾಲೂಕು ಮುಖಂಡ ಹಾಗೂ ವಕೀಲ ಪಿ.ಕೆ. ಸತೀಶನ್ ಆರೋಪಿಸಿದ್ದಾರೆ.

    ಪುತ್ತೂರು ತಾಲೂಕಿನ ನಿಡ್ಪಳ್ಳಿ ಮತ್ತು ಬಡಗನ್ನೂರು ಗ್ರಾಮಗಳಲ್ಲಿನ ದಲಿತ ಸಮುದಾಯಕ್ಕೆ ಸೇರಿದ ಕೆಲವು ಕುಟುಂಬಗಳಿಗೆ 1981ರಿಂದ 1983ರ ಅವಧಿಯಲ್ಲಿ ದರ್ಖಾಸ್ತು ಮೂಲಕ ಜಮೀನು ಮಂಜೂರು ಮಾಡಲಾಗಿತ್ತು. ಈ ಕುಟುಂಬಗಳಿಗೆ ಸಾಗುವಳಿ ಚೀಟಿಯನ್ನೂ ನೀಡಲಾಗಿತ್ತು. ಆದರೆ, ಸುಮಾರು ನಾಲ್ಕು ದಶಕಗಳ ಬಳಿಕ ಇದೀಗ ಸದರಿ ಜಮೀನು ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳಿ ನೋಟಿಸ್ ನೀಡಲಾಗುತ್ತಿದೆ. ಇದರಿಂದ ಜಮೀನನ್ನೇ ಅವಲಂಬಿಸಿ ಜೀವನ ನಡೆಸುತ್ತಿರುವ ಬಡ ಕುಟುಂಬಗಳು ಆತಂಕಕ್ಕೆ ಒಳಗಾಗಿವೆ ಎಂದು ಅವರು ದೂರಿದರು.

    ದಲಿತ ಸಮುದಾಯಕ್ಕೆ ಮಂಜೂರಾದ ಭೂಮಿಯ ವಿಚಾರದಲ್ಲಿ ಇಲಾಖೆಯ ಈ ಕ್ರಮವು ಸಾಮಾಜಿಕ ಅಸಮಾನತೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಸರ್ಕಾರವೇ ಮಂಜೂರು ಮಾಡಿರುವ ಜಮೀನಿನ ಹಕ್ಕಿನ ಬಗ್ಗೆ ಈಗ ಪ್ರಶ್ನೆ ಎತ್ತುತ್ತಿರುವುದು ಸರಿಯಲ್ಲ ಎಂದು ಪಿ.ಕೆ. ಸತೀಶನ್ ಅಭಿಪ್ರಾಯಪಟ್ಟರು.

    ದಲಿತ ಸಮುದಾಯದ ಭೂಮಿಯನ್ನು ರಕ್ಷಿಸುವಂತೆ ಆಗ್ರಹಿಸಿ ದಲಿತ ಹಕ್ಕು ಸಮಿತಿಯ ನೇತೃತ್ವದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ಸುಮಾರು 25 ಮಂದಿಯ ನಿಯೋಗವು ಪುತ್ತೂರು ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು. ಸಂಬಂಧಪಟ್ಟ ಕುಟುಂಬಗಳಿಗೆ ಅರಣ್ಯ ಇಲಾಖೆಯ ನೋಟಿಸ್ ಹಾಗೂ ಕಿರುಕುಳದಿಂದ ರಕ್ಷಣೆ ನೀಡಬೇಕು ಮತ್ತು ಜಮೀನಿನ ಹಕ್ಕು ಹಾಗೂ ಗಡಿಗಳನ್ನು ಸ್ಪಷ್ಟಪಡಿಸಿ ಭೂಮಿಯ ಪ್ಲಾಟಿಂಗ್ ಮಾಡಿಸಿಕೊಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಯಿತು.

    ಬಳಿಕ ನಿಯೋಗವು ಅರಣ್ಯ ಇಲಾಖೆಯ ಕಚೇರಿಗೂ ಭೇಟಿ ನೀಡಿ ಅರಣ್ಯಾಧಿಕಾರಿಗೆ ಮನವಿ ಸಲ್ಲಿಸಿತು. ಕಂದಾಯ ಮತ್ತು ಅರಣ್ಯ ಇಲಾಖೆಗಳು ಜಂಟಿ ಸರ್ವೆ ನಡೆಸಿ ಜಮೀನಿನ ವಾಸ್ತವಿಕ ಸ್ಥಿತಿಯನ್ನು ಪರಿಶೀಲಿಸಬೇಕು. ದಲಿತ ಕುಟುಂಬಗಳಿಗೆ ಮಂಜೂರಾಗಿರುವ ಭೂಮಿಯ ಹಕ್ಕು ಮತ್ತು ಗಡಿಗಳನ್ನು ಸ್ಪಷ್ಟಪಡಿಸಿ, ಅವರ ಭೂಮಿಗೆ ಸಂಬಂಧಿಸಿದಂತೆ ಅನಗತ್ಯ ತೊಂದರೆ ಉಂಟಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಲಾಯಿತು.

    ಈ ಸಂದರ್ಭದಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಬಿ.ಎಂ. ಭಟ್, ದಲಿತ ಹಕ್ಕು ಸಮಿತಿಯ ಪುತ್ತೂರು ತಾಲೂಕು ಅಧ್ಯಕ್ಷ ಚಿದಾನಂದ, ತಾಲೂಕು ಸಮಿತಿ ಖಜಾಂಚಿ ಸುಂದರ, ನಿಡ್ಪಳ್ಳಿ ಗ್ರಾಮ ಘಟಕದ ಅಧ್ಯಕ್ಷ ಕೃಷ್ಣ ನಿಡ್ಪಳ್ಳಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

    ಈ ವಿಚಾರಕ್ಕೆ ಸಂಬಂಧಿಸಿದಂತೆ ಕಂದಾಯ ಮತ್ತು ಅರಣ್ಯ ಇಲಾಖೆಯ ಅಧಿಕಾರಿಗಳಿಂದ ನ್ಯಾಯ ಒದಗಿಸುವ ಭರವಸೆ ದೊರೆತಿದೆ ಎಂದು ನಿಯೋಗ ತಿಳಿಸಿದೆ.

    Previous Article‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?
    Next Articleಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    Related Posts

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    ನ.6, 7ರಂದು ನಿಟ್ಟೆ ವಿಶ್ವವಿದ್ಯಾಲಯದ 16ನೇ ವಾರ್ಷಿಕ ಘಟಿಕೋತ್ಸವ

    November 2, 2026

    ಸೋಂದೆ ಜೈನ ಮಠ ; ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ₹50 ಲಕ್ಷ ದೇಣಿಗೆ

    November 2, 2026

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026
    Latest Posts

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಗ್ರಾಮಾನುಭವ ಕಾರ್ಯಕ್ರಮ: ಸೀಮಂತೂರು ಕೃಷಿ ತೋಟಕ್ಕೆ ಬಲ್ಮಠ ಹೈಸ್ಕೂಲ್ ವಿದ್ಯಾರ್ಥಿಗಳ ಭೇಟಿ

    November 2, 2026

    ಗ್ರಾಮೀಣ ಬದುಕಿನ ಅನುಭವಕ್ಕೆ ತೆರೆದುಕೊಂಡ ವಿದ್ಯಾರ್ಥಿಗಳು ಪುಚ್ಚೆಮೊಗರು ಗ್ರಾಮದ ಕೃಷಿ ತೋಟಕ್ಕೆ ಪಿಎಂಶ್ರೀ ಕೆ.ಎಸ್. ರಾವ್ ನಗರ ಶಾಲೆಯ ವಿದ್ಯಾರ್ಥಿಗಳ ಭೇಟಿ

    November 2, 2026

    ಮಣ್ಣಿನ ಮಡಿಲಲ್ಲಿ ಪಾಠ ಕಲಿತ ವಿದ್ಯಾರ್ಥಿಗಳು; ಕೃಷಿ ಬದುಕಿನ ಅನುಭವಕ್ಕೆ ತೆರೆದ ಕಣ್ಣು! ಯು.ಟಿ.ಖಾದರ್ ಚಾಲನೆ

    November 2, 2026
    ತಾಜಾ ಸುದ್ದಿಗಳು

    ಕಲಬುರಗಿ ಮಹಾನಗರ ಪಾಲಿಕೆ ನೂತನ ಆಯುಕ್ತರಾಗಿ ಪಿ. ಶ್ರವಣಕುಮಾರ್ ಅಧಿಕಾರ ಸ್ವೀಕಾರ

    November 2, 2026

    40 ವರ್ಷಗಳ ಬಳಿಕ ಜಮೀನಿನ ಹಕ್ಕು ಪ್ರಶ್ನೆ; ದಲಿತ ಹಕ್ಕು ಸಮಿತಿಯಿಂದ ಎಸಿ ಹಾಗೂ ಅರಣ್ಯಾಧಿಕಾರಿಗಳಿಗೆ ಮನವಿ

    November 2, 2026

    ‘ರಾಮಾಯಣ ಭಾಗ 2’ ಬಿಡುಗಡೆ ಮುಂದೂಡಿಕೆ: 2028ರ ದೀಪಾವಳಿಗೆ ತೆರೆಗೆ?

    November 2, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.