Close Menu
    Latest Posts

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ರಾಮಾಯಣ ಶ್ರೇಷ್ಠತೆಗೆ ವಾಲ್ಮೀಕಿ ಕೊಡುಗೆ ಕಾರಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ 
    ಸುದ್ದಿ

    ರಾಮಾಯಣ ಶ್ರೇಷ್ಠತೆಗೆ ವಾಲ್ಮೀಕಿ ಕೊಡುಗೆ ಕಾರಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ 

    navabharathaBy navabharathaOctober 27, 2026

    ಮಂಗಳೂರು, :- ರಾಮಾಯಣ ಮಹಾಕಾವ್ಯವು ಜಗತ್ತಿನಲ್ಲಿ ಶ್ರೇಷ್ಠತೆ ಪಡೆದುಕೊಳ್ಳಲು ಅದನ್ನು ಬರೆದ ಮಹರ್ಷಿ ವಾಲ್ಮೀಕಿಯವರ ಕೊಡುಗೆಯೇ ಕಾರಣವಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ಹೇಳಿದ್ದಾರೆ.

    ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಮಾಜ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಅವರು ಮಾತನಾಡಿದರು. ವಾಲ್ಮೀಕಿ ಬರಹ, ಅದನ್ನು ಪ್ರಸ್ತುತಪಡಿಸಿದ ಶೈಲಿಯಿಂದಾಗಿಯೇ ರಾಮಾಯಣವು ಶ್ರೇಷ್ಠ ಗ್ರಂಥ ಎನಿಸಿಕೊಂಡಿತು. ಈ ಗ್ರಂಥವು ನವರಸಗಳು ಇರುವ ಮಹಾಕಾವ್ಯವಾಗಿದೆ. ಕ್ರಿಸ್ತಪೂರ್ವ 5ನೇ ಶತಮಾನದಲ್ಲಿಯೇ ಇಂತಹ ಕೊಡುಗೆ ನೀಡಿದ ವಾಲ್ಮೀಕಿಯವರ ಜ್ಞಾನ ಮತ್ತು ಕೆಲಸವು ಅದ್ಭುತವಾಗಿದೆ. 7 ಕಾಂಡಗಳಲ್ಲಿ 24 ಸಾವಿರ ಶ್ಲೋಕಗಳನ್ನೂ ಬರೆಯುವ ಮೂಲಕ ಅವರು ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಅವರು ಹೇಳಿದರು.
    ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಅಧ್ಯಕ್ಷೆ ಶಾಲೆಟ್ ಪಿಂಟೋ ಅವರು ಕಾರ್ಯಕ್ರಮ ಉದ್ಘಾಟಿಸಿ, ಪರಿಶಿಷ್ಟ ಪಂಗಡಗಳ, ಗಿರಿಜನರ ಕಲ್ಯಾಣಕ್ಕಾಗಿ ಕರ್ನಾಟಕ ಸರಕಾರವು ಪ್ರತ್ಯೇಕ ಇಲಾಖೆಯನ್ನು ಸ್ಥಾಪಿಸಿದೆ. ಈ ಸಮುದಾಯಗಳ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಅವರಿಗೆ ಅರ್ಹವಾದ ಸೌಲಭ್ಯಗಳನ್ನು ಅವರ ಮನೆಬಾಗಿಲಿಗೆ ತಲುಪಿಸಬೇಕು ಎಂದು ಹೇಳಿದರು.
    ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, ಮಹರ್ಷಿ ವಾಲ್ಮೀಕಿಯವರಿಂದ ರೂಪುಗೊಂಡ ರಾಮಾಯಾಣವು, ಪ್ರತಿಯೊಂದು ಪೀಳಿಗೆಗೂ ಅನ್ವಯವಾಗುತ್ತದೆ. ಈ ಕೃತಿಯ ಮೌಲ್ಯವನ್ನು ನಾವು ಸದಾ ಪಾಲಿಸಬೇಕು ಎಂದು ಹೇಳಿದರು.
    ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಉನ್ನತ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಳಸಿ ಮದ್ದಿನೇಣಿ, ಮಹಾನಗರಪಾಲಿಕೆ ಆಯುಕ್ತ ರಾಹುಲ್ ರತ್ನಂ ಪಾಂಡೆ, ಡಿಸಿಪಿ ಸ್ಯಾಮುವೆಲ್ ವರ್ಗೀಸ್, ಎಎಸ್‌ಪಿ ಅನಿಲ್‌ಕುಮಾರ್ ಭೂಮಿರೆಡ್ಡಿ, ಡಿಸಿಆರ್‌ಇ ಪೊಲೀಸ್ ಅಧೀಕ್ಷಕ ಸೈಮನ್ ಮತ್ತಿತರರು ಉಪಸ್ಥಿತರಿದ್ದರು. ಐಟಿಡಿಪಿ ಯೋಜನಾ ಸಮನ್ವಯಾಧಿಕಾರಿ ಬಸವರಾಜು ಸ್ವಾಗತಿಸಿದರು. ಮಂಜುಳಾ ವಂದಿಸಿದರು.

    Previous Articleಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ತಾ.ಪಂ., ಜಿ.ಪಂ. ಚುನಾವಣೆ: ಈಶ್ವರ ಖಂಡ್ರೆಜನವರಿ ಮೊದಲ ಅಥವಾ ಎರಡನೇ ವಾರದಲ್ಲಿ ತಾ.ಪಂ., ಜಿ.ಪಂ. ಚುನಾವಣೆ: ಈಶ್ವರ ಖಂಡ್ರೆ
    Next Articleರೋಟರಿ ವಂದನಾ ಪ್ರಶಸ್ತಿಗೆ ಕ್ರೀಡಾಪಟು ಎಂ.ಆರ್. ಪೂವಮ್ಮ ಆಯ್ಕೆ  ಅ. 30ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ | ಕ್ರೀಡಾ ಕ್ಷೇತ್ರದ ಸೇವೆ, ಸಾಧನೆಗೆ ಗೌರವರೋಟರಿ ವಂದನಾ ಪ್ರಶಸ್ತಿಗೆ ಕ್ರೀಡಾಪಟು ಎಂ.ಆರ್. ಪೂವಮ್ಮ ಆಯ್ಕೆ ಅ. 30ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ | ಕ್ರೀಡಾ ಕ್ಷೇತ್ರದ ಸೇವೆ, ಸಾಧನೆಗೆ ಗೌರವ

    Related Posts

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಮಂಗಳೂರಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: 173 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    November 1, 2026

    ಪಿಜಿಸಿಇಟಿ ಅಭ್ಯರ್ಥಿಗಳಿಗೆ ಮತ್ತೊಂದು ಸುತ್ತಿನ ಕೌನ್ಸೆಲಿಂಗ್: ನ.5ಕ್ಕೆ ಫಲಿತಾಂಶ ಪ್ರಕಟ

    November 1, 2026
    Latest Posts

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ದೇಶಕ್ಕೆ ಪಟೇಲ್ ಸ್ಪೂರ್ತಿ: ಪ್ರಧಾನಿ ಮೋದಿ ಏಕತಾ ದಿನಾಚರಣೆಯಲ್ಲಿ ಸರ್ದಾರ್ ವಲ್ಲಭಭಾಯಿ ಪಟೇಲ್‌ಗೆ ಗೌರವ ನಮನ

    November 1, 2026

    ಪಿಂಚಣಿ ನಿವೃತ್ತ ನೌಕರರ ಭಿಕ್ಷೆಯಲ್ಲ; ಅದು ಅವರ ಹಕ್ಕು!

    November 1, 2026

    ಬೇಸಿಗೆಯಲ್ಲಿ ಕುಡಿಯುವ ನೀರಿನ ಅಭಾವ ತಡೆಗೆ ಮುನ್ನೆಚ್ಚರಿಕೆ ವಹಿಸಿ: ಸಚಿವ ಯು.ಟಿ. ಖಾದರ್

    November 1, 2026
    ತಾಜಾ ಸುದ್ದಿಗಳು

    ಭಾಷಾಭಿಮಾನ ಎಲ್ಲರನ್ನೂ ಪ್ರೀತಿ–ವಿಶ್ವಾಸದಿಂದ ಬೆಸೆಯುವ ಸೇತುವೆಯಾಗಲಿ: ಯು.ಟಿ.ಖಾದರ್

    November 1, 2026

    ಕಾಸರಗೋಡು ಕನ್ನಡ ಗ್ರಾಮದಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವ, ಜಿಲ್ಲಾ ಕನ್ನಡ ದಿನಾಚರಣೆ ಕೇರಳ ಸರಕಾರಕ್ಕೆ ಸಮಗ್ರ ಕನ್ನಡ ಸಾಂಸ್ಕೃತಿಕ ಯೋಜನೆ ರೂಪಿಸಲು ಮನವಿ

    November 1, 2026

    ಮಂಗಳೂರಿನಲ್ಲಿ 71ನೇ ಕನ್ನಡ ರಾಜ್ಯೋತ್ಸವ ಸಂಭ್ರಮ: 173 ಮಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ

    November 1, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.