ಕಲ್ಲಡ್ಕ: ಜಿಲ್ಲಾ ಮಟ್ಟದ ಕಲಾಶ್ರೀ ಆಯ್ಕೆ ಶಿಬಿರ ಹಾಗೂ ಸ್ಪರ್ಧೆಗಳಲ್ಲಿ ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮಾಡುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ಮಂಗಳೂರಿನ ಕದ್ರಿಯ ಜಿಲ್ಲಾ ಬಾಲಭವನದಲ್ಲಿ 2026-27ನೇ ಸಾಲಿನ ಮಕ್ಕಳ ದಿನಾಚರಣೆ ಅಂಗವಾಗಿ ನಡೆದ ಈ ಸ್ಪರ್ಧೆಗಳನ್ನು ರಾಜ್ಯ ಬಾಲಭವನ ಸೊಸೈಟಿ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಾಲಾ ಶಿಕ್ಷಣ ಇಲಾಖೆ ಜಂಟಿಯಾಗಿ ಆಯೋಜಿಸಿದ್ದವು.
ಶಾಲೆಯಿಂದ ಒಟ್ಟು 22 ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದು, ಅವರಲ್ಲಿ ನಾಲ್ವರು ವಿದ್ಯಾರ್ಥಿಗಳು ಬಹುಮಾನ ಪಡೆದು ಗಮನ ಸೆಳೆದಿದ್ದಾರೆ.
ಹಿಮಾನಿ ಕೆ. (5ನೇ ತರಗತಿ): ಸೃಜನಾತ್ಮಕ ಕಲೆ (ಏಕಪಾತ್ರಾಭಿನಯ) ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ,
ಪ್ರಥ್ವಿಕ್ (7ನೇ ತರಗತಿ): ವಿಜ್ಞಾನ ನೂತನ ಆವಿಷ್ಕಾರ ವಿಭಾಗದ ‘ಬಹುಪಯೋಗಿ ಕೃಷಿಮಿತ್ರ’ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ, ಯಶವಂತ (7ನೇ ತರಗತಿ): ಯೋಗನೃತ್ಯ ಸ್ಪರ್ಧೆಯಲ್ಲಿ ತೃತೀಯ ಸ್ಥಾನ,
ಮನ್ವಿತ್ ಕುಲಾಲ್ (7ನೇ ತರಗತಿ): ವಿಜ್ಞಾನ ನೂತನ ಆವಿಷ್ಕಾರದ ‘ಅಡಿಕೆ ಹೆಕ್ಕುವ ಸಾಧನ’ ಸ್ಪರ್ಧೆಯಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
Previous Article
ನಾರಾಯಣ ಕುಂಬ್ರ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಸನ್ಮಾನ
ನಾರಾಯಣ ಕುಂಬ್ರ ಅವರಿಗೆ ಶಾಸಕ ಅಶೋಕ್ ಕುಮಾರ್ ರೈ ಸನ್ಮಾನ

