ಮಂಗಳೂರು: ನಗರದ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಬೋಲಾಸ್ ಅಗ್ರೋ ಪ್ರೈವೇಟ್ ಲಿಮಿಟೆಡ್ (Bolas Agro Private Limited) ಆಹಾರ ಉತ್ಪಾದನಾ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿ, ಒಟ್ಟು 1,240 ಕೆ.ಜಿ. ಖಾದ್ಯ ತೈಲವನ್ನು ವಶಪಡಿಸಿಕೊಂಡಿದ್ದಾರೆ.
ತೈಲದ ಬ್ರ್ಯಾಂಡಿಂಗ್ ಮತ್ತು ಲೇಬಲಿಂಗ್ನಲ್ಲಿ ಲೋಪಗಳು ಕಂಡುಬಂದಿದ್ದು, ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿರುವ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ದಾಳಿಯ ಸಂದರ್ಭದಲ್ಲಿ ತಲಾ 10 ಕೆ.ಜಿ. ತೂಕದ ಶೇಂಗಾ ಎಣ್ಣೆಯ 11 ಬಾಕ್ಸ್ಗಳು, ತಲಾ 35 ಲೀಟರ್ ಸಾಮರ್ಥ್ಯದ ಶೇಂಗಾ ಎಣ್ಣೆಯ 30 ಕ್ಯಾನ್ಗಳು ಹಾಗೂ ತಲಾ 20 ಕೆ.ಜಿ. ತೂಕದ ತೆಂಗಿನ ಎಣ್ಣೆಯ 4 ಬಾಕ್ಸ್ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಶೇಂಗಾ ಎಣ್ಣೆಯನ್ನು ಖರೀದಿಸಿ, ಘಟಕದಲ್ಲಿ ಮರುಪ್ಯಾಕಿಂಗ್ ಮಾಡಲಾಗುತ್ತಿತ್ತು. ಬಳಿಕ ಅದಕ್ಕೆ ‘ಕೋಲ್ಡ್ ಪ್ರೆಸ್ಡ್ ಗ್ರೌಂಡ್ನಟ್ ಆಯಿಲ್’ (Cold Pressed Groundnut Oil) ಎಂಬ ಲೇಬಲ್ ಅಂಟಿಸಿ ಮಾರಾಟಕ್ಕೆ ಸಿದ್ಧಪಡಿಸಲಾಗುತ್ತಿತ್ತು ಎನ್ನಲಾಗಿದೆ.
ಕಚ್ಚಾ ಶೇಂಗಾ ಎಣ್ಣೆಯನ್ನು ಕೋಲ್ಡ್ ಪ್ರೆಸ್ಡ್ ಎಣ್ಣೆ ಎಂದು ಬಿಂಬಿಸಿ ಮಾರಾಟ ಮಾಡುವ ಮೂಲಕ ಗ್ರಾಹಕರಿಗೆ ತಪ್ಪು ಮಾಹಿತಿ ನೀಡಿರುವುದು ಹಾಗೂ ಆಹಾರ ಉತ್ಪನ್ನಗಳ ಲೇಬಲಿಂಗ್ ನಿಯಮಗಳ ಉಲ್ಲಂಘನೆಯ ಆರೋಪದ ಹಿನ್ನೆಲೆಯಲ್ಲಿ ಅಧಿಕಾರಿಗಳು ಜಪ್ತಿ ಕ್ರಮ ಕೈಗೊಂಡಿದ್ದಾರೆ.
Previous Article
ನ.22ರಂದು 26ನೇ ವರ್ಷದ ರೋಟರಿ ಚಿಣ್ಣರ ಉತ್ಸವ
ನ.22ರಂದು 26ನೇ ವರ್ಷದ ರೋಟರಿ ಚಿಣ್ಣರ ಉತ್ಸವ
