ಹಾಸನ: ಬೇಲೂರು ತಾಲ್ಲೂಕಿನಲ್ಲಿ ಇಬ್ಬರ ಜೀವ ಬಲಿ ಪಡೆದಿರುವ ಎರಡು ಪುಂಡಾನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಆರಂಭಿಸಿದೆ.
ಬಿಕ್ಕೋಡು ಆನೆ ಶಿಬಿರದಲ್ಲಿ ಕಾರ್ಯಾಚರಣೆಗೆ ನಿಯೋಜಿಸಿರುವ ಸಾಕಾನೆಗಳಿಗೆ ಪೂಜೆ ಸಲ್ಲಿಸಿ ಸಾಂಪ್ರದಾಯಿಕವಾಗಿ ಸಿದ್ಧತೆ ನಡೆಸಲಾಯಿತು. ಏಳು ಸಾಕಾನೆಗಳ ನೆರವಿನಿಂದ ಕಾರ್ಯಾಚರಣೆ ನಡೆಯಲಿದ್ದು, ಎಪಿಸಿಸಿಎಫ್ ಮೋಹನ್ ರಾಜನ್ ನೇತೃತ್ವ ವಹಿಸಿದ್ದಾರೆ.
ಬೇಲೂರು ತಾಲ್ಲೂಕಿನ ನಾಗೇನಹಳ್ಳಿ ಭಾಗದಲ್ಲಿ ಎರಡು ಪುಂಡಾನೆಗಳು ಸಂಚರಿಸುತ್ತಿದ್ದು, ಕಳೆದ ಮೂರು ದಿನಗಳಲ್ಲಿ ಇಬ್ಬರನ್ನು ಬಲಿ ಪಡೆದಿವೆ. ಜನರಲ್ಲಿ ಆತಂಕ ಸೃಷ್ಟಿಸಿರುವ ಆನೆಗಳನ್ನು ಸೆರೆಹಿಡಿಯಲು ಅರಣ್ಯ ಇಲಾಖೆ ಕಾರ್ಯಾಚರಣೆ ಕೈಗೊಂಡಿದೆ.
Previous Article
ಯುವವಾಹಿನಿಯ ನೂತನ ಆಡಳಿತ ಕಚೇರಿ ಉದ್ಘಾಟನೆ
ಯುವವಾಹಿನಿಯ ನೂತನ ಆಡಳಿತ ಕಚೇರಿ ಉದ್ಘಾಟನೆ

