ಮಂಗಳೂರು: ರಾಜ್ಯ ಕಂಬಳ ಅಸೋಸಿಯೇಷನ್ 2026–27ನೇ ಸಾಲಿನ ಕಂಬಳ ಋತುವಿನ ಪರಿಷ್ಕೃತ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಈ ಬಾರಿ ಕಂಬಳ ಕೂಟಗಳ ದಿನಾಂಕಗಳಲ್ಲಿ ಮರುಹೊಂದಾಣಿಕೆ ಮಾಡಲಾಗಿದ್ದು, ನವೆಂಬರ್ 7ರಂದು ಮೂಡುಬಿದಿರೆ ತಾಲೂಕಿನ ಪಣಪಿಲದಲ್ಲಿ ಮೊದಲ ಕಂಬಳ ನಡೆಯಲಿದೆ. 2027ರ ಮೇ 1ರಂದು ಕಡಂದಲೆಯಲ್ಲಿ ನಡೆಯುವ ಕಂಬಳದೊಂದಿಗೆ ಋತುವಿಗೆ ತೆರೆ ಬೀಳಲಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ನವೆಂಬರ್ 14ರಂದು ಸಾಣೂರು, 21ರಂದು ಕೊಡಂಗೆ, 28ರಂದು ಕಕ್ಕೆಪದವು, ಡಿಸೆಂಬರ್ 5ರಂದು ಹೊಕ್ಕಾಡಿಗೋಳಿ, 12ರಂದು ಬಾರಾಡಿಬೀಡು, 19ರಂದು ವೇಣೂರು, 26ರಂದು ಮೂಲ್ಕಿ ಹಾಗೂ 27ರಂದು ಬಳ್ಳಮಂಜದಲ್ಲಿ ಕಂಬಳ ನಡೆಯಲಿದೆ.
2027ರ ಜನವರಿ 2ರಂದು ಮಂಗಳೂರು, 9ರಂದು ಮಿಯ್ಯಾರು, 16ರಂದು ನರಿಂಗಾಣ, 23ರಂದು ಮೂಡುಬಿದಿರೆ, 30ರಂದು ಪುತ್ತೂರು, ಫೆಬ್ರವರಿ 6ರಂದು ಐಕಳ, 13ರಂದು ಜಪ್ಪಿನಮೊಗರು, 20ರಂದು ಅಡ್ವೆ ಹಾಗೂ 27ರಂದು ವಾಮಂಜೂರಿನಲ್ಲಿ ಕಂಬಳ ಆಯೋಜಿಸಲಾಗಿದೆ.
ಮಾರ್ಚ್ 6ರಂದು ಎರ್ಮಾಳ್, 13ರಂದು ಬಂಟ್ವಾಳ, 20ರಂದು ಬಂಗಾಡಿ, 27ರಂದು ಉಪ್ಪಿನಂಗಡಿ, ಏಪ್ರಿಲ್ 3ರಂದು ಗುರುಪುರ, 10ರಂದು ಬಲ್ಕುಂಜೆ, 17ರಂದು ಹರೇಕಳ, 24ರಂದು 80 ಬಡಗಬೆಟ್ಟು ಹಾಗೂ ಮೇ 1ರಂದು ಕಡಂದಲೆಯಲ್ಲಿ ಅಂತಿಮ ಕಂಬಳ ನಡೆಯಲಿದೆ.
ತುಳುನಾಡಿನ ಸಾಂಪ್ರದಾಯಿಕ ಕ್ರೀಡೆಯಾದ ಕಂಬಳದ ಹೊಸ ಋತುವಿಗಾಗಿ ಸಿದ್ಧತೆಗಳು ಆರಂಭವಾಗಿವೆ. ಒಟ್ಟು 27 ಕಂಬಳ ಕೂಟಗಳು ನಡೆಯಲಿದ್ದು, ಕಂಬಳ ಪ್ರೇಮಿಗಳು, ಕೋಣಗಳ ಮಾಲೀಕರು ಹಾಗೂ ಓಟಗಾರರಲ್ಲಿ ಹೊಸ ಋತುವಿನ ಬಗ್ಗೆ ನಿರೀಕ್ಷೆ ಮೂಡಿದೆ.




