ಮಂಗಳೂರು: ಪೆರ್ಮುದೆಯ ಸಿರಿ ಮಹಿಳಾ ಸಂಜೀವಿನಿ ಸ್ವಸಹಾಯ ಸಂಘಕ್ಕೆ 2026ನೇ ಸಾಲಿನ ಕೌಶಲ್ಯ ಕರ್ನಾಟಕ ಪ್ರಶಸ್ತಿಯಡಿ ರಾಜ್ಯಮಟ್ಟದ ಅತ್ಯುತ್ತಮ ಸ್ವಸಹಾಯ ಗುಂಪು ಪ್ರಶಸ್ತಿ ಲಭಿಸಿದೆ.
ಬೆಂಗಳೂರಿನಲ್ಲಿ ನಡೆದ ಕೌಶಲ್ಯ ಸಮ್ಮೇಳನದಲ್ಲಿ ಕರ್ನಾಟಕ ಸರ್ಕಾರದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಸನ್ಮಾನ್ಯ ಶರಣ್ ಪ್ರಕಾಶ್ ಪಾಟೀಲ್ ಅವರು ಸಂಘದ ಅಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.
ಮಹಿಳೆಯರ ಸಂಘಟಿತ ಪ್ರಯತ್ನ, ಸ್ವಾವಲಂಬನೆ, ಉದ್ಯಮಶೀಲತೆ ಹಾಗೂ ಜೀವನೋಪಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿರುವ ಸಿರಿ ಮಹಿಳಾ ಸಂಜೀವಿನಿ ಸ್ವಸಹಾಯ ಸಂಘದ ಕಾರ್ಯವನ್ನು ಗುರುತಿಸಿ ಈ ರಾಜ್ಯಮಟ್ಟದ ಗೌರವ ನೀಡಲಾಗಿದೆ. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಹಾಗೂ ಸಂಜೀವಿನಿ ಎನ್ಆರ್ಎಲ್ಎಂ ಮಂಗಳೂರು ತಾಲೂಕು ಯೋಜನಾ ವ್ಯವಸ್ಥಾಪಕ ಸುಬ್ರಮಣ್ಯ ಉಪಸ್ಥಿತರಿದ್ದರು.



