Close Menu
    Latest Posts

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಚಾಲನೆ

    November 5, 2026

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026
    Facebook X (Twitter) Instagram
    Nava Bharatha MediaNava Bharatha Media

    • ಮುಖಪುಟ
    • ಸುದ್ದಿ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಆರೋಗ್ಯ
    • ಧರ್ಮ – ಸಂಸ್ಕೃತಿ – ಸಾಹಿತ್ಯ


    Nava Bharatha MediaNava Bharatha Media
    Home » ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಚಾಲನೆ
    ಸುದ್ದಿ

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಚಾಲನೆ

    navabharathaBy navabharathaNovember 5, 2026

    ಮಂಗಳೂರು: ಕೊಂಕಣಿ ಭಾಷೆ, ಸಂಗೀತ ಮತ್ತು ಸಂಸ್ಕೃತಿಯ ಜಾಗತಿಕ ಬಾಂಧವ್ಯವನ್ನು ಬಲಪಡಿಸುವ ಉದ್ದೇಶದಿಂದ ಮಂಗಳೂರಿನಲ್ಲಿ ಆಯೋಜಿಸಲಾಗಿರುವ ಪ್ರಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಚಾಲನೆ ನೀಡಿದರು.
    ಮಾಂಡ್ ಸೊಭಾಣ್ ಸಂಘಟನೆಯ 40ನೇ ವರ್ಷದ ಸಂಭ್ರಮದ ಅಂಗವಾಗಿ ನವೆಂಬರ್ 3ರಿಂದ 15ರವರೆಗೆ ಮಂಗಳೂರಿನ ಪುರಭವನದಲ್ಲಿ ನಡೆಯಲಿರುವ ಈ ಅಂತಾರಾಷ್ಟ್ರೀಯ ಮಹಾಸಮ್ಮೇಳನದಲ್ಲಿ ಜಗತ್ತಿನ ವಿವಿಧ ಭಾಗಗಳಿಂದ ಕೊಂಕಣಿ ಗಾಯಕರು ಭಾಗವಹಿಸುತ್ತಿದ್ದಾರೆ.
    ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಪ್ರಮೋದ್ ಸಾವಂತ್, ಗೋವಾದ ಹೊರಗಿರುವ ಕೊಂಕಣಿ ಸಾಧಕರನ್ನೂ ಗೋವಾ ಸರ್ಕಾರದ ಅಧಿಕೃತ ರಾಜ್ಯ ಪ್ರಶಸ್ತಿಗಳಿಗೆ ಪರಿಗಣಿಸಲಾಗುವುದು ಎಂದು ತಿಳಿಸಿದರು. ಕೊಂಕಣಿ ಭಾಷೆಯಲ್ಲಿ ಉಪಭಾಷೆಗಳು ವಿಭಿನ್ನವಾಗಿದ್ದರೂ, ಭಾಷೆಯ ಭಾವನೆ ಮತ್ತು ಜನರ ಹೃದಯ ಒಂದೇ ಆಗಿದೆ. ಯಾವುದೇ ಸರ್ಕಾರಿ ನೆರವಿಲ್ಲದೆ ಮಂಗಳೂರಿನ ಕೊಂಕಣಿ ಭಾಷಿಕರು ತಮ್ಮ ಪರಿಶ್ರಮ ಮತ್ತು ಸಮರ್ಪಣೆಯಿಂದ ಭಾಷೆಯನ್ನು ಜೀವಂತವಾಗಿಟ್ಟಿರುವುದು ಶ್ಲಾಘನೀಯ ಎಂದರು.
    ಗೋವಾ ಮತ್ತು ಕರಾವಳಿ ಕರ್ನಾಟಕದ ಭೌಗೋಳಿಕ ಗಡಿಗಳು ಬೇರೆಯಾಗಿದ್ದರೂ, ಎರಡೂ ಪ್ರದೇಶಗಳು ಒಂದೇ ಕರಾವಳಿ ಸಂಸ್ಕೃತಿ ಮತ್ತು ಜೀವನಶೈಲಿಯನ್ನು ಹಂಚಿಕೊಂಡಿವೆ. ಈ ಸಾಂಸ್ಕೃತಿಕ ಬಾಂಧವ್ಯ ಮುಂದುವರಿಯಬೇಕು ಎಂದು ಆಶಿಸಿದರು.
    ಮಹಾಸಮ್ಮೇಳನದ ಪ್ರಮುಖ ಆಕರ್ಷಣೆಯಾಗಿ ‘ಕೊಂಕಣಿ ನಿರೊಂತರಿ – ಸೊಂಸಾರ್ ಸೊರಾಸೊರಿ’ ಹೆಸರಿನಲ್ಲಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸುವ ಪ್ರಯತ್ನ ನಡೆಯುತ್ತಿದೆ. ಸತತ 12 ದಿನಗಳ ಕಾಲ ನಿರಂತರ ಗಾಯನ ಮ್ಯಾರಥಾನ್ ಆಯೋಜಿಸಲಾಗಿದ್ದು, 300 ಗಾಯನ ತಂಡಗಳ ಮೂಲಕ 6,700ಕ್ಕೂ ಅಧಿಕ ಗಾಯಕರು ಭಾಗವಹಿಸಲಿದ್ದಾರೆ. 4,500ಕ್ಕೂ ಅಧಿಕ ಹಾಡುಗಳನ್ನು ಯಾವುದೇ ಹಾಡು ಅಥವಾ ಗಾಯಕನ ಪುನರಾವರ್ತನೆಯಿಲ್ಲದೆ ಪ್ರಸ್ತುತಪಡಿಸುವ ಗುರಿ ಹೊಂದಲಾಗಿದೆ. ಗೋವಾದ 53 ತಂಡಗಳೂ ಈ ಗಾಯನ ಯಜ್ಞದಲ್ಲಿ ಪಾಲ್ಗೊಳ್ಳುತ್ತಿವೆ.

    Previous Articleಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    Related Posts

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026

    ಕೆರೆಗಳ ಅಭಿವೃದ್ಧಿಗೆ ಶಿಲಾನ್ಯಾಸ: ಮುಡಾ ಅಧ್ಯಕ್ಷರಿಗೆ ಅಭಿನಂದನೆ

    November 4, 2026
    Latest Posts

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಚಾಲನೆ

    November 5, 2026

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026
    Demo Demo
    About Us
    About Us

    Your source for the lifestyle news. This demo is crafted specifically to exhibit the use of the theme as a lifestyle site. Visit our main page for more demos.

    We're accepting new partnerships right now.

    ಪ್ರಮುಖ ಸುದ್ದಿಗಳು

    ಮಂಗಳೂರಿನಲ್ಲಿ ಮೊದಲ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನಕ್ಕೆ ಚಾಲನೆ

    November 5, 2026

    ಸೇನಾ ತರಬೇತಿಗೂ ಧರ್ಮದ ಮುದ್ರೆ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬ್ರಿಜೇಶ್ ಚೌಟ ಕಿಡಿ

    November 4, 2026

    ಏಕನಿವೇಶನ ವಿನ್ಯಾಸ ಅನುಮೋದನೆಯಲ್ಲಿ ಸಾರ್ವಜನಿಕ ರಸ್ತೆಗೂ ಆದ್ಯತೆ :ಸಂತೋಷ್ ಕುಮಾರ್ ಶೆಟ್ಟಿ

    November 4, 2026
    ತಾಜಾ ಸುದ್ದಿಗಳು

    ಕುಂಜತ್ ಬೈಲ್ ಲೇಔಟ್ ರಸ್ತೆ ಸಂಪರ್ಕಕ್ಕೆ ಮುಡಾ ಸ್ಪಂದನೆ

    November 4, 2026

    ಸಮಾಧಿ, ಉದ್ಯಾನವನ ಅಭಿವೃದ್ಧಿ ಜತೆಗೆ ಮ್ಯೂಸಿಯಂ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ

    November 4, 2026

    ಮಂಗಳೂರಿನಲ್ಲಿ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಡ್ರೋನ್ ಸರ್ವೆ

    November 4, 2026
    Facebook Instagram YouTube
    • ಮುಖಪುಟ
    • ಸುದ್ದಿ
    • ಶಿಕ್ಷಣ – ಉದ್ಯೋಗ – ಮಾರ್ಗದರ್ಶನ
    • ವ್ಯಾಪಾರ – ವಾಣಿಜ್ಯ – ಕೃಷಿ
    • ಆರೋಗ್ಯ
    • ಕ್ರೀಡೆ
    • ಮನರಂಜನೆ
    • ವೀಡಿಯೊಗಳು
    • ಧರ್ಮ – ಸಂಸ್ಕೃತಿ – ಸಾಹಿತ್ಯ
    © 2026 Nava Bharatha Media. Designed by Blueline Computers.

    Type above and press Enter to search. Press Esc to cancel.