ಮಂಗಳೂರು: ದೀಪಾವಳಿ ಹಬ್ಬದ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಗೂಡುದೀಪ ಸ್ಪರ್ಧೆಯ ಪ್ರತಿಕೃತಿ ವಿಭಾಗದಲ್ಲಿ ಪೊಳಲಿಯ ಲಿಖಿತ್ ಅವರು ಪ್ರೋತ್ಸಾಹಕ ಬಹುಮಾನ ಪಡೆದುಕೊಂಡಿದ್ದಾರೆ. ಇವರು ಮಂಗಾಜೆಯ ಶ್ರೀ ಕೊರ್ದಬ್ಬು ದೈವಸ್ಥಾನದ ಪ್ರತಿಕೃತಿ ರಚಿಸಿದ್ದರು. ಶ್ರೀಯುತರು ಚೆನ್ನಪ್ಪ ಹಾಗೂ ಸುರೇಖ ಅವರ ಸುಪುತ್ರ. ಪ್ರಸ್ತುತ ದ.ಕ. ಜಿಲ್ಲಾ ಪಂಚಾಯತ್ ನೌಕರರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.



