ಮಂಗಳೂರು: ಬೊಂದೆಲ್ನ ಸೇಂಟ್ ಲಾರೆನ್ಸ್ ಇಂಗ್ಲಿಷ್ ಮೀಡಿಯಂ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಕಸ್ವಿ. ಎ. ಅವರು ಗಂಗೂಬಾಯಿ ಹಾನಗಲ್ ವಿಶ್ವವಿದ್ಯಾಲಯ ನಡೆಸಿದ ಭರತನಾಟ್ಯಂ ಜೂನಿಯರ್ ಪರೀಕ್ಷೆಯಲ್ಲಿ ಡಿಸ್ಟಿಂಕ್ಷನ್ ನೊಂದಿಗೆ ಶೇಕಡಾ 88% ಅಂಕಗಳನ್ನು ಗಳಿಸಿದ್ದಾರೆ.
ಇವರು ಮಂಗಳೂರಿನ ಜ್ಯೋತಿ ಮತ್ತು ಅಶೋಕ್ ಮರಕಡ ದಂಪತಿಯ ಪುತ್ರಿ.
ಇವರು ಪಡವಿನಂಗಡಿಯ ಕದ್ರಿ ನೃತ್ಯ ವಿದ್ಯಾಲಯದಲ್ಲಿ ವಿದ್ವಾನ್ ಶರಣ್ ಮತ್ತು ವಿದುಷಿ ನಿಶ್ವಿತಾ ಶರಣ್ ಅವರ ಮಾರ್ಗದರ್ಶನದಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾರೆ.




